Homeಮುಖಪುಟ5 ವರ್ಷಗಳಲ್ಲಿ 166 ಅಪರಾಧಿಗಳು ಪೊಲೀಸ್‌ ಗುಂಡೇಟಿಗೆ ಹತರಾಗಿದ್ದಾರೆ: ಯೋಗಿ ಆದಿತ್ಯನಾಥ್‌

5 ವರ್ಷಗಳಲ್ಲಿ 166 ಅಪರಾಧಿಗಳು ಪೊಲೀಸ್‌ ಗುಂಡೇಟಿಗೆ ಹತರಾಗಿದ್ದಾರೆ: ಯೋಗಿ ಆದಿತ್ಯನಾಥ್‌

“ಕೊಲ್ಲಲ್ಪಟ್ಟವರು ಮುಖ್ಯವಾಗಿ ಮುಸ್ಲಿಮರು, ದಲಿತರು ಮತ್ತು ಇತರ ಹಿಂದುಳಿದ ಜಾತಿಯವರಾಗಿದ್ದಾರೆ.”

- Advertisement -
- Advertisement -

ಪೊಲೀಸರು ನಡೆಸಿದ ಗುಂಡಿನ ಕಾಳಗದಲ್ಲಿ ಕಳೆದ ಐದು ವರ್ಷಗಳಲ್ಲಿ 166 ಕ್ರಿಮಿನಲ್‌ಗಳು ಸಾವನ್ನಪ್ಪಿದ್ದಾರೆ ಮತ್ತು 4,453 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

“ಅಪರಾಧಗಳನ್ನು ಒಂದಿಷ್ಟೂ ಸಹಿಸುವುದಿಲ್ಲ, ಅಪರಾಧಿಗಳು ಸ್ವತಂತ್ರವಾಗಿರಲು ಬಿಡುವುದಿಲ್ಲ. ಅವರು ಜೈಲಿನಲ್ಲಿರುತ್ತಾರೆ ಅಥವಾ ಕೊಲ್ಲಲ್ಪಡುತ್ತಾರೆ ಎಂಬ ಸರ್ಕಾರದ ನೀತಿಯ ಪರಿಣಾಮ ಇದು ಸಾಧ್ಯವಾಗಿದೆ” ಎಂದು ಯೋಗಿ ಹೇಳಿಕೊಂಡಿದ್ದಾರೆ.

ಲಕ್ನೋದಲ್ಲಿ ಪೊಲೀಸ್ ಸ್ಮಾರಕ ದಿನದ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, “ಕಳೆದ ಐದು ವರ್ಷಗಳಲ್ಲಿ 13 ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಇದು ಮುಂದುವರಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ” ಎಂದಿದ್ದಾರೆ.

2017ರಿಂದ ಇಲ್ಲಿಯವರೆಗೆ ಉತ್ತರ ಪ್ರದೇಶ ಪೊಲೀಸರು ಆರೋಪಿತ ಅಪರಾಧಿಗಳೊಂದಿಗೆ ನೂರಾರು ಗುಂಡಿನ ಚಕಮಕಿಗಳಲ್ಲಿ ಭಾಗಿಯಾಗಿದ್ದಾರೆ.

ಆತ್ಮರಕ್ಷಣೆಗಾಗಿ ಅಥವಾ ಬಂಧಿಸಬೇಕಾದ ಅನಿವಾರ್ಯತೆ ಇದ್ದಾಗ ಮಾತ್ರವೇ ಗುಂಡು ಹಾರಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರಗಳು ಅಥವಾ ಸಮರ್ಥನೆಗಳು ಟೀಕೆಗೂ ಒಳಗಾಗಿವೆ.

ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸ್ ಕೇಸ್ ಡೈರಿಗಳ ಪ್ರಕಾರ, “ಅಪರಾಧಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಕೊಲ್ಲುವ ಉದ್ದೇಶದಿಂದಲೇ ಗುಂಡು ಹಾರಿಸಿರುವುದು” ತಿಳಿದುಬರುತ್ತದೆ.

ಜುಲೈ 2021ರಲ್ಲಿ 87 ಮಾಜಿ ಅಧಿಕಾರಗಳ ಗುಂಪು ಪತ್ರ ಬರೆದಿತ್ತು. ಭಾರತೀಯ ಜನತಾ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಆಡಳಿತವನ್ನು ಟೀಕಿಸಿದ್ದ ಅಧಿಕಾರಿಗಳು “ಕಾನೂನಿನ ನಿಯಮದ ಸ್ಪಷ್ಟ ಉಲ್ಲಂಘನೆ” ಎಂದು ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿರಿ: ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ: ದುಷ್ಕರ್ಮಿಗಳನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಲು DYFI ಒತ್ತಾಯ

“ಆದಿತ್ಯನಾಥ್ ನೇತೃತ್ವದ ಎನ್‌ಕೌಂಟರ್ ಅಭಿಯಾನವು ಹೊಸ ಗೆರೆಗಳನ್ನು ದಾಟಿದೆ. ಏಕೆಂದರೆ ಈ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಸಣ್ಣ ಅಪರಾಧಿಗಳು ಅಥವಾ ಮುಗ್ಧರು ಎಂದು ಅಂಕಿಅಂಶಗಳು ತೋರಿಸುತ್ತಿವೆ. ಅವರ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ” ಎಂದು ಅಧಿಕಾರಿಗಳು ಬಹಿರಂಗ ಪತ್ರದಲ್ಲಿ ತಿಳಿಸಿದ್ದರು. “ಕೊಲ್ಲಲ್ಪಟ್ಟವರು ಮುಖ್ಯವಾಗಿ ಮುಸ್ಲಿಮರು, ದಲಿತರು ಮತ್ತು ಇತರ ಹಿಂದುಳಿದ ಜಾತಿಯವರಾಗಿದ್ದಾರೆ.”

2017 ಮತ್ತು 2020ರ ನಡುವೆ, ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟವರಲ್ಲಿ ಸುಮಾರು 37% ಮುಸ್ಲಿಮರಿದ್ದಾರೆ. ಈ ಸಮುದಾಯವು ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 20% ಕ್ಕಿಂತ ಕಡಿಮೆ ಇದೆ.

ಶುಕ್ರವಾರ ಮಾಡಿದ ಭಾಷಣದಲ್ಲಿ ಆದಿತ್ಯನಾಥ್ ಅವರು, ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ 244 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಮತ್ತು 133 ಪೊಲೀಸ್ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮತ್ತೆ ಇಷ್ಟು ಸುವ್ಯಸ್ಥೆ ಮಾಡಿದ್ದರು ,ಹೆಣ್ಣು ಮಕ್ಕಳು ಅದರಲ್ಲಿಯೂ ದಲಿತರು, ಹಿಂದುಳಿದವರು,ಮುಸಲ್ಮಾನರ ಮೇಲೆ ಅತ್ಯಾಚಾರ,ಅನಾಚಾರ ಇನ್ನು ಜಾಸ್ತಿಯಾಗುತ್ತಿದೆ, ಇಡೀ ಪ್ರಪಂಚದಲ್ಲೇ ಕೇಳರಿಯದಂತೆ ,ಅತ್ಯಾಚಾರಕ್ಕೊಳಗಾಗಿ ಮೃತಳಾದ ದಲಿತ ಹೆಣ್ಣು ಮಗಳನ್ನ ರಾತ್ರೋ ರಾತ್ರಿ ಸುಟ್ಟು ಹಾಕಿದಿರಲ್ಲಾ ಇದಾ ನಿನ್ನ ಕಾರ್ಯಕ್ಷಮತೆ? ನೋಡೋದಕ್ಕೆ ನೀನೇ ಒಳ್ಳೆ ಪೋಕರಿ ಇದ್ದ ಹಾಗೆ ಇದ್ದೀಯಾ ,ಇದನ್ನೆಲ್ಕಾ ಸಾಧನೆ ಎಂದು ಹೇಳಿಕೊಳ್ಳೋಕೆ ನಾಚಿಕೆಯಾಗೋದಿಲ್ವಾ?

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...