Homeಮುಖಪುಟಭಾರತ: 2021 ರಲ್ಲಿ ಪ್ರತಿದಿನ ಸರಾಸರಿ 86 ‘ಅತ್ಯಾಚಾರ’ ಪ್ರಕರಣಗಳು ದಾಖಲು!

ಭಾರತ: 2021 ರಲ್ಲಿ ಪ್ರತಿದಿನ ಸರಾಸರಿ 86 ‘ಅತ್ಯಾಚಾರ’ ಪ್ರಕರಣಗಳು ದಾಖಲು!

ಕಳೆದ ವರ್ಷದ ದೇಶದ ಪ್ರತಿ ಲಕ್ಷ ಮಹಿಳೆಯರಲ್ಲಿ ಸರಾಸರಿ 5 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ

- Advertisement -
- Advertisement -

2021 ರಲ್ಲಿ ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಹೇಳಿದೆ. ಇಷ್ಟೆ ಅಲ್ಲದೆ, ಪ್ರತಿ ಗಂಟೆಗೆ ದೇಶದ 49 ಮಹಿಳೆಯರ ವಿರುದ್ಧ ಅಪರಾಧಗಳು ಕಳೆದ ವರ್ಷ ನಡೆದಿತ್ತು ಎಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚೆಗಿನ ಅಂಕಿಅಂಶಗಳ ವರದಿ ಹೇಳಿವೆ.

2021 ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ. 2019 ರಲ್ಲಿ 32,033 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದು, 2020 ರಲ್ಲಿ 28,046 ಪ್ರಕರಣಗಳು ದಾಖಲಾಗಿದೆ ಎಂದು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ‘ಕ್ರೈಮ್ ಇನ್ ಇಂಡಿಯಾ 2021’ ವರದಿ ತೋರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳು 2020 ಕ್ಕಿಂತ 2021 ರಲ್ಲಿ 15% ದಷ್ಟು ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಹೇಳಿದೆ. ಈ ಬ್ಯೂರೋ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ಪೈಕಿ ರಾಜಸ್ಥಾನ (6,337) ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ (2,947), ಮಹಾರಾಷ್ಟ್ರ (2,496) ಮತ್ತು ಉತ್ತರ ಪ್ರದೇಶ (2,845) ಮತ್ತು ದೆಹಲಿಯಲ್ಲಿ 1,250 ಅತ್ಯಾಚಾರ ಪ್ರಕರಣಗಳು 2021 ರಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ತೋರಿಸಿದೆ.

ಅತ್ಯಾಚಾರದ ಅಪರಾಧದ ಪ್ರಮಾಣ (ಪ್ರತಿ ಲಕ್ಷ ಜನಸಂಖ್ಯೆಗೆ) ರಾಜಸ್ಥಾನ (16.4) ನಂತರ ಚಂಡೀಗಢ (13.3), ದೆಹಲಿ (12.9), ಹರಿಯಾಣ (12.3) ಮತ್ತು ಅರುಣಾಚಲ ಪ್ರದೇಶ (11.1) ದಲ್ಲಿ ದಾಖಲಾಗಿದೆ. ಎನ್‌ಸಿಆರ್‌ಬಿ ಪ್ರಕಾರ ಅಖಿಲ ಭಾರತ ಸರಾಸರಿ ದರವು 4.8 ರಷ್ಟಿದೆ. ಅಂದರೆ ಕಳೆದ ವರ್ಷದ ದೇಶದ ಪ್ರತಿ ಲಕ್ಷ ಮಹಿಳೆಯರಲ್ಲಿ ಸರಾಸರಿ 5 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: 3ನೇ ಸ್ಥಾನ: ಮಹಿಳೆಯರಿಗೆ ಅಸುರಕ್ಷಿತ ಮೆಟ್ರೋಪಾಲಿಟನ್ ನಗರವಾಗಿ ಬೆಂಗಳೂರು

2021 ರಲ್ಲಿ ದೇಶದಾದ್ಯಂತ ‘ಮಹಿಳೆಯರ ವಿರುದ್ಧದ ಅಪರಾಧಗಳ’ ಒಟ್ಟಾರೆ 4.28 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ. 2019 ರಲ್ಲಿ 4.05 ಅಪರಾಧಗಳು ದಾಖಲಾಗಿದ್ದರೆ, 2020 ರಲ್ಲಿ 3.71 ಲಕ್ಷ ಅಪರಾಧಗಳು ಮಹಿಳೆಯರ ವಿರುದ್ಧ ನಡೆದಿತ್ತು.

2021 ರಲ್ಲಿ ಪ್ರತಿ ಒಂದು ಲಕ್ಷ ಮಹಿಳಾ ಜನಸಂಖ್ಯೆಯಲ್ಲಿ 64.5 ಮಹಿಳೆಯರ ಮೇಲೆ ಅಪರಾಧಗಳು ದಾಖಲಾಗಿವೆ. ಈ ರೀತಿ ದಾಖಲಾದ ಅಪರಾಧಗಳಲ್ಲಿ 77.1% ಅಪರಾಧಗಳ ಮೇಲೆ ಚಾರ್ಜ್ ಶೀಟ್‌ ದಾಖಲಾಗಿದೆ ಎಂದು ಅಧಿಕೃತ ಸರ್ಕಾರಿ ಅಂಕಿಅಂಶಗಳು ಹೇಳಿವೆ.

ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತ್ಯಾಚಾರ, ಕೊಲೆಯೊಂದಿಗೆ ಅತ್ಯಾಚಾರ, ವರದಕ್ಷಿಣೆ, ಆಸಿಡ್ ದಾಳಿಗಳು, ಆತ್ಮಹತ್ಯಾ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳಸಾಗಣೆ, ಆನ್‌ಲೈನ್ ಕಿರುಕುಳ ಮುಂತಾದ ಅಪರಾಧಗಳು ಸೇರಿವೆ.

ಇದನ್ನೂ ಓದಿ: 2021ಲ್ಲಿ ಬೆಂಗಳೂರಿನಲ್ಲಿ ಸರಾಸರಿ ಪ್ರತಿದಿನ ಒಂದು ಮಗುವಿನ ಮೇಲೆ ಲೈಂಗಿಕ ಕಿರುಕುಳ ನಡೆದಿದ್ದು, ಒಟ್ಟು 312 ಮಕ್ಕಳ ಮೇಲೆ ರೇಪ್ ನಡೆದಿದೆ

2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳ ಗರಿಷ್ಠ ಪ್ರಕರಣಗಳು ಉತ್ತರ ಪ್ರದೇಶದಲ್ಲಿ (56,083) ದಾಖಲಾಗಿವೆ, ನಂತರ ರಾಜಸ್ಥಾನ (40,738), ಮಹಾರಾಷ್ಟ್ರ (39,526), ​​ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352) ದಲ್ಲಿ ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...