Homeಮುಖಪುಟವಿಶ್ವ ಸಂತೋಷ ಸೂಚ್ಯಂಕದಲ್ಲಿ ಪಾಕ್‌, ಶ್ರೀಲಂಕಾಕ್ಕಿಂತ ಕೆಳಗೆ ಕುಸಿದ ಭಾರತ

ವಿಶ್ವ ಸಂತೋಷ ಸೂಚ್ಯಂಕದಲ್ಲಿ ಪಾಕ್‌, ಶ್ರೀಲಂಕಾಕ್ಕಿಂತ ಕೆಳಗೆ ಕುಸಿದ ಭಾರತ

- Advertisement -
- Advertisement -

ವಿಶ್ವಸಂಸ್ಥೆಯು ಆರಂಭಿಸಿದ ಲಾಭೋದ್ದೇಶವಿಲ್ಲದ ಸಂಸ್ಥೆಯು ಪ್ರಕಟಿಸಿರುವ ಇತ್ತೀಚಿನ ‘ವಿಶ್ವ ಸಂತೋಷ ಸೂಚ್ಯಂಕ’ ವರದಿಯಲ್ಲಿ ಭಾರತವು 146 ದೇಶಗಳ ಪೈಕಿ 126ನೇ ಸ್ಥಾನದಲ್ಲಿದೆ.

ಅಂತಾರಾಷ್ಟ್ರೀಯ ಸಂತೋಷ ದಿನದ ಸಂದರ್ಭದಲ್ಲಿ ಸೋಮವಾರ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ’ವು ವಾರ್ಷಿಕವಾಗಿ ವರದಿಯನ್ನು ಪ್ರಕಟಿಸುತ್ತದೆ.

2020 ರಿಂದ 2022ರವರೆಗಿನ ಗ್ಯಾಲಪ್ ವರ್ಲ್ಡ್ ಪೋಲ್‌ಗಳ ಡೇಟಾವನ್ನು ಈ ಸೂಚ್ಯಂಕ ಆಧರಿಸಿದೆ. (2005ರಲ್ಲಿ ಗ್ಯಾಲಪ್ ತನ್ನ ವಿಶ್ವ ಸಮೀಕ್ಷೆಯನ್ನು ಪ್ರಾರಂಭಿಸಿತು. ಇದು ನಿರಂತರವಾಗಿ 160 ದೇಶಗಳಲ್ಲಿ ನಾಗರಿಕರನ್ನು ಸಮೀಕ್ಷೆ ಮಾಡುತ್ತದೆ. ಗ್ಯಾಲಪ್ ವರ್ಲ್ಡ್ ಪೋಲ್ 100 ಕ್ಕೂ ಹೆಚ್ಚು ಜಾಗತಿಕ ಪ್ರಶ್ನೆಗಳನ್ನು ಮತ್ತು ನಿರ್ದಿಷ್ಟ ಸಂಗತಿಗಳನ್ನು ಒಳಗೊಂಡಿದೆ.)

ಒಟ್ಟು ದೇಶೀಯ ಉತ್ಪನ್ನ, ಜೀವಿತಾವಧಿ, ಉದಾರತೆ, ಸಾಮಾಜಿಕ ಬೆಂಬಲ, ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರ- ಈ ಆರು ಅಂಶಗಳನ್ನು ಮೌಲ್ಯಮಾಪನದಲ್ಲಿ ಪರಿಗಣಿಸಲಾಗಿದೆ.

2022ರಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ 126ನೇ ಸ್ಥಾನಕ್ಕೆ ಬಂದಿದೆ. ಈ ವರ್ಷ, ಭಾರತವು 0-10ರ ಪ್ರಮಾಣದಲ್ಲಿ 4.036 ಅಂಕಗಳನ್ನು ಹೊಂದಿತ್ತು.

ಪಾಕಿಸ್ತಾನ 108ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 118ನೇ ಸ್ಥಾನದಲ್ಲಿದೆ ಎಂದು ಸೂಚ್ಯಂಕ ತೋರಿಸಿದೆ. ಶ್ರೀಲಂಕಾ 112 ನೇ ಸ್ಥಾನದಲ್ಲಿದ್ದರೆ ನೇಪಾಳ 78ನೇ ಸ್ಥಾನದಲ್ಲಿದೆ.

ವರದಿಯ ಪ್ರಕಾರ, ಫಿನ್ಲೆಂಡ್ 7.804 ಅಂಕಗಳೊಂದಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದೆ. ನಾರ್ಡಿಕ್ ದೇಶಗಳಾದ ಡೆನ್ಮಾರ್ಕ್ ಮತ್ತು ಐಸ್ಲ್ಯಾಂಡ್  ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಪಟ್ಟಿಯಲ್ಲಿರುವ ಮೊದಲ ಹತ್ತು ದೇಶಗಳ ಪೈಕಿ ಎಂಟು ಯುರೋಪ್‌ ಖಂಡದಲ್ಲಿವೆ. ಇಸ್ರೇಲ್ ಮತ್ತು ನ್ಯೂಜಿಲೆಂಡ್ ಮೊದಲ ಹತ್ತರಲ್ಲಿ ಕಾಣಿಸಿಕೊಂಡ ಯುರೋಪಿನ ಹೊರಗಿನ ಎರಡು ದೇಶಗಳಾಗಿವೆ.

ಫೆಬ್ರವರಿ 2022ರಲ್ಲಿ ಆರಂಭವಾದ ಉಭಯ ದೇಶಗಳ ನಡುವಿನ ಸಂಘರ್ಷದ ಹೊರತಾಗಿಯೂ ರಷ್ಯಾ ಮತ್ತು ಉಕ್ರೇನ್ ದೇಶಗಳು ಉನ್ನತ ಮಟ್ಟದ ಸಂತೋಷವನ್ನು ಹೊಂದಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿರಿ: ನಿಲ್ಲದ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ; ಸ್ವಾಮೀಜಿ ಮಾತಿಗೆ ಕವಡೆ ಕಿಮ್ಮತ್ತೂ ನೀಡದ ರಂಗಾಯಣ

ಸೂಚ್ಯಂಕದ ಪ್ರಕಾರ, ರಷ್ಯಾದ ಶ್ರೇಯಾಂಕವು 2022ರಲ್ಲಿ 80ನೇ ಸ್ಥಾನದಲ್ಲಿತ್ತು. ಈ ವರ್ಷ 70ದಲ್ಲಿ ಇದೆ. ಆದರೆ ಉಕ್ರೇನ್ ಶ್ರೇಯಾಂಕವು 98 ರಿಂದ 92ಕ್ಕೆ ಏರಿಕೆ ಕಂಡಿದೆ. 2022ರ ವರದಿಯು 2019 ರಿಂದ 2021 ರವರೆಗಿನ ಡೇಟಾವನ್ನು ಆಧರಿಸಿದೆ.

ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌ನ ಲೇಖಕರಲ್ಲಿ ಒಬ್ಬರಾದ ಜಾನ್ ಹೆಲ್ಲಿವೆಲ್ ಪ್ರತಿಕ್ರಿಯಿಸಿದ್ದು, “ಉಪಕಾರ ಮನೋಭಾವ, ವಿಶೇಷವಾಗಿ ಅಪರಿಚಿತರ ಕಡೆಗೆ ದಯೆ ತೋರುವುದು 2021 ರಲ್ಲಿ ನಾಟಕೀಯವಾಗಿ ಹೆಚ್ಚಾಯಿತು. 2022ರಲ್ಲಿ ಈ ಗುಣವು ಉನ್ನತ ಮಟ್ಟದಲ್ಲಿದೆ” ಎಂದು ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

“ಈ ಕಷ್ಟದ ವರ್ಷಗಳಲ್ಲಿಯೂ, ಧನಾತ್ಮಕ ಭಾವನೆಗಳು ಋಣಾತ್ಮಕತೆಗಿಂತ ದ್ವಿಗುಣವಾಗಿವೆ. ಧನಾತ್ಮಕ ಸಾಮಾಜಿಕ ಬೆಂಬಲದ ಭಾವನೆಗಳು ಒಂಟಿತನಕ್ಕಿಂತ ಎರಡು ಪಟ್ಟು ಪ್ರಬಲವಾಗಿವೆ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...