Homeಮುಖಪುಟಮತ್ತೆ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ

ಮತ್ತೆ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ

- Advertisement -
- Advertisement -

ದೇಶದ ಭದ್ರತೆಯ ಕಾರಣ ನೀಡಿ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ತಿಳಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿ ಭಾರತವು ಟಿಕ್‌ಟಾಕ್‌, ವಿಚಾಟ್ ಮತ್ತು ಹೆಲೋನಂತಹ ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಪಬ್ಜಿಯಂತಹ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್‌ಗಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬ್ಯೂಟಿ ಕ್ಯಾಮೆರಾ, ಸ್ವೀಟ್ ಸೆಲ್ಫಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ಕಾರ್ಡ್ ಫಾರ್ ಸೇಲ್ಸ್ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಸೆಂಟ್ ವಿಡಿಯೋ ಎಡಿಟರ್, ಟೆನ್ವಾ ಎಕ್ಸ್ರಿವರ್, ಟೆನ್ವಾ ಎಕ್ಸ್ರಿವರ್, ಒನ್ಮೆಯಾಜಿ ಚೆಸ್, ಒನ್ಮೆಯಾಜಿ ಅರೆನಾ, ಆಪ್ ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ 54 ಚೀನಿ ಆಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.

ಚೀನಾದೊಂದಿಗೆ ಗಡಿ ವಿವಾದ ಉದ್ವಿಗ್ನಗೊಂಡ ನಂತರ ಭಾರತವು ಕಳೆದ ಒಂದು ವರ್ಷದಿಂದ ಸುಮಾರು 300 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಜೂನ್ 2020ರಲ್ಲಿ ಮೊದಲ ಸುತ್ತಿನ ನಿಷೇಧವನ್ನು ಘೋಷಿಸಲಾಯಿತು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಇದನ್ನೂ ಓದಿರಿ: ಭಾರತದ 15 ಸ್ಥಳಗಳಿಗೆ ಚೀನಾ ಮರುನಾಮಕರಣ; ಮೋದಿ ಮೌನ: ಖರ್ಗೆ

ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ

ಬಜೆಟ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಒಕ್ಕೂಟ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದರು. “ಚೀನಾ ಮತ್ತು ಪಾಕಿಸ್ತಾನದ ನಡುವೆ ಆಪ್ತ ಸ್ನೇಹ ಬೆಳೆಯಲು ಕೇಂದ್ರ ಸರ್ಕಾರದ ನೀತಿಗಳು ಕಾರಣ” ಎಂದು ಆರೋಪಿಸಿದ್ದರು.

“ದೇಶವು ಎಲ್ಲಾ ಕಡೆಗಳಲ್ಲಿ ಶತ್ರುಗಳಿಂದ ಸುತ್ತುವರಿದಿದೆ. ರಾಷ್ಟ್ರವು ಹೊರಗಿನಿಂದ ಮತ್ತು ಒಳಗಿನಿಂದ ಅಪಾಯದಲ್ಲಿದೆ. ಇಂತಹ ಪರಿಸ್ಥಿತಿ ಕಂಡು ಚಿಂತೆಯಾಗುತ್ತಿದೆ. ಚೀನಾ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಇಡುವುದು ಭಾರತದ ಕಾರ್ಯತಂತ್ರದ ಗುರಿಯಾಗಬೇಕಿತ್ತು. ಆದರೆ ನೀವು ಆ ಎರಡೂ ರಾಷ್ಟ್ರಗಳನ್ನು ಜೊತೆಗೂಡಿಸಿದ್ದೀರಿ. ನಾವು ಎದುರಿಸುತ್ತಿರುವ ಈ ಸಮಸ್ಯೆಯನ್ನು ಕೀಳಂದಾಜು ಮಾಡಬೇಡಿ. ಇದು ಭಾರತಕ್ಕೆ ಗಂಭೀರ ಬೆದರಿಕೆ” ಎಂದು ಅವರು ಹೇಳಿದ್ದರು.

ಪಾಕಿಸ್ತಾನ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು, ವಿಶೇಷವಾಗಿ 2015ರಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾರಂಭಿಸಿದ ನಂತರ ಬಲಗೊಂಡಿವೆ. ಈ ಸಂಬಂಧವು ಆರ್ಥಿಕ ಪಾಲುದಾರಿಕೆಯನ್ನು ಮೀರಿ, ಶಸ್ತ್ರಾಸ್ತ್ರ ಒಪ್ಪಂದಗಳು, ಜಂಟಿ ಕಾರ್ಯನಿರ್ವಹಣೆ ಮತ್ತು ರಕ್ಷಣಾ ಒಪ್ಪಂದಗಳನ್ನು ಒಳಗೊಂಡಿರುವ ಮಿಲಿಟರಿ ಸಹಕಾರವನ್ನು ಹೆಚ್ಚಿಸುತ್ತದೆ. ಕಳೆದ ವರ್ಷ ಚೀನಾದ ನೆರವಿನೊಂದಿಗೆ ಪಾಕಿಸ್ತಾನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಕರಾಚಿಯಲ್ಲಿ ನಿರ್ಮಿಸಿದೆ. ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದವನ್ನು ಹೊಂದಿವೆ. ಇವು ಭಾರತಕ್ಕೆ ದೊಡ್ಡ ಸವಾಲನ್ನು ಒಡ್ಡಿವೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದರು.


ಇದನ್ನೂ ಓದಿರಿ: ಚೀನಾ ಅತಿಕ್ರಮಣ ಪ್ರಶ್ನಿಸಲು ಬೀಜಿಂಗ್‌ ಜನತಾ ಪಾರ್ಟಿಗೆ ಹಿಂಜರಿಕೆ: ಬಿಜೆಪಿ ವಿರುದ್ಧ ಖರ್ಗೆ ವ್ಯಂಗ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...