Homeಮುಖಪುಟಪೂರ್ವ ಲಡಾಖ್‌ಗೆ ಹೆಚ್ಚಿನ ಯುದ್ಧ ಪಡೆಗಳನ್ನು ನಿಯೋಜಿಸಿದ ಭಾರತ

ಪೂರ್ವ ಲಡಾಖ್‌ಗೆ ಹೆಚ್ಚಿನ ಯುದ್ಧ ಪಡೆಗಳನ್ನು ನಿಯೋಜಿಸಿದ ಭಾರತ

- Advertisement -
- Advertisement -

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಆಕ್ರಮಣಕಾರಿ ನೀತಿಯನ್ನು ಎದುರಿಸಲು ಭಾರತವು ಪೂರ್ವ ಲಡಾಖ್ ಗೆ ಹೆಚ್ಚಿನ ಯುದ್ಧ ಪಡೆಗಳನ್ನು ನಿಯೋಜಿಸಿದೆ. ಚೀನಾ ಸೇನೆಯ ನಿಯೋಜನೆಯ ಪ್ರಮಾಣ ಕೂಡಾ, ಈ ಕ್ರಮವು ಸ್ಥಳೀಯ ಮಿಲಿಟರಿ ಕಮಾಂಡರ್‌ಗಳಿಗೆ ಸೀಮಿತವಾಗಿಲ್ಲ ಬೀಜಿಂಗ್‌ನ ಅನುಮತಿಯನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸಭೆಯ ನಂತರ ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು “ಆಸ್ಟ್ರೇಲಿಯಾದಿಂದ, ಹಾಂಕಾಂಗ್ ನಿಂದ, ತೈವಾನ್ ನಿಂದ, ದಕ್ಷಿಣ ಚೀನಾ ಸಮುದ್ರದಿಂದ ಭಾರತಕ್ಕೆ ಮತ್ತು ಅಮೆರಿಕವರೆಗೆ, ಜಗಳಗಂಟ ಚೀನಾವು ಎಲ್ಲಾ ರೀತಿಯಲ್ಲೂ ಪ್ರಾಬಲ್ಯಕ್ಕಾಗಿ ಜಗತ್ತನ್ನು ದಿಟ್ಟಿಸುತ್ತಿದೆ” ಹೇಳಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ಮಂಗಳವಾರ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಮೋದಿಯವರ ಕಾರ್ಯತಂತ್ರದ ಸಭೆಯಲ್ಲಿ ಮೂರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಿದ್ದರು. ಇದೇ ತಂಡ 2017 ರಲ್ಲಿ ಡೋಕ್ಲಾಮ್ ಬಿಕ್ಕಟ್ಟಿನಲ್ಲೂ ಕಾರ್ಯನಿರ್ವಹಿಸಿದ್ದರು. ಆಗ ಜನರಲ್ ಬಿಪಿನ್ ರಾವತ್ ಆಗ ಸೇನಾ ಮುಖ್ಯಸ್ಥರಾಗಿದ್ದರು ಮತ್ತು ಜೈ ಶಂಕರ್ ಭಾರತದ ವಿದೇಶಾಂಗ ಕಾರ್ಯದರ್ಶಿ ಆಗಿದ್ದರು.

ಮಂಗಳವಾರದ ಸಭೆಯ ಸಂದೇಶವು 2017 ರ ಡೋಕ್ಲಾಮ್ ನಿಲುವನ್ನು ಪ್ರತಿಬಿಂಬಿಸಿದೆ. ಸ್ಥಳದಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಲು, ಪರಸ್ಪರ ಗೌರವ ಮತ್ತು ಸಂವಾದದ ಮೂಲಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿಯನ್ನು ತಣಿಸಲು ಭಾರತ ಒಲವು ತೋರುತ್ತಿದ್ದರೆ, ಪ್ರಧಾನಿ ಮೋದಿಯವರ ‘ಡೋಕ್ಲಾಮ್ ತಂಡ’ ಎಲ್ಲಾ ಘಟನೆಗಳಿಗೆ ಸಿದ್ಧವಾಗುವಂತೆ ತಿಳಿಸಿದೆ.

“ಡಾರ್ಬುಕ್-ಶ್ಯೋಕ್-ಡಿಬಿಒ ರಸ್ತೆ ಈ ವರ್ಷ ಪೂರ್ಣಗೊಳ್ಳಲಿದ್ದು, ಈ ಪ್ರದೇಶದಲ್ಲಿ ವೇಗವಾಗಿ ಭಾರತೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಸ್ತೆ ಯೋಜನೆಯನ್ನು ನಿರ್ಬಂಧಿಸಿದರೆ, ಭಾರತೀಯ ಸೇನೆಯು ವೈಮಾನಿಕ ಸರಬರಾಜು ಮಾರ್ಗಗಳಿಂದ ಹೊರಗುಳಿಯುಂತಾಗುತ್ತದೆ. ಹಿಮನದಿ ಸಾಸರ್ ಲಾ ಮೂಲಕ ಸಂಸೋಮಾದಿಂದ ಮುರ್ಗೊವನ್ನು ಡಿಬಿಒಗೆ ಸಂಪರ್ಕಿಸುವ ಪ್ರಯಾಸಕರ ಮಾರ್ಗಕ್ಕೆ ಸಿದ್ಧವಾಗಲಿದೆ ”ಎಂದು ಸರ್ಕಾರದ ರಾಷ್ಟ್ರೀಯ ಭದ್ರತಾ ಯೋಜಕರು ತಿಳಿಸಿದ್ದಾರೆ.

ಖಚಿತವಾಗಿ ಹೇಳುವುದಾದರೆ, ಕಳೆದ ಎರಡು ವರ್ಷಗಳಿಂದ ಪಾಂಗೊಂಗ್ ತ್ಸೋ, ಗಾಲ್ವಾನ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೈನ್ಯದ ನಡುವೆ ಘರ್ಷಣೆ ಇದೆ. ಆದರೆ ಇಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಓದಿ: ಚೀನಾಕ್ಕೆ ಸಮಬಲವಾಗಿ ಸೈನ್ಯ ನಿಯೋಜನೆ: ಚೀನಾ ಆಕ್ರಮಣಶೀಲತೆಯ ಬಗ್ಗೆ ಇಂದು ಕಮಾಂಡರ್ಸ್ ಸಮಾವೇಶದಲ್ಲಿ ಚರ್ಚೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಯುದ್ದ ವಿನಾಶಕಾರಿ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...