Homeಮುಖಪುಟ2023ರ ಏಷ್ಯಾ ಕಪ್‌‌ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ: ಜಯ್ ಶಾ

2023ರ ಏಷ್ಯಾ ಕಪ್‌‌ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ: ಜಯ್ ಶಾ

- Advertisement -
- Advertisement -

2023ರ ಏಷ್ಯಾಕಪ್‌ ಪಂದ್ಯಕ್ಕಾಗಿ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಮಂಗಳವಾರ ಮುಂಬೈನಲ್ಲಿ ನಡೆದ 91ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ (ಎಜಿಎಂ) ವೇಳೆ ಮಂಗಳವಾರ ಹೇಳಿದ್ದಾರೆ.

2023 ರ ಏಷ್ಯಾ ಕಪ್ ಅನ್ನು ಪಾಕಿಸ್ತಾನವು ಆಯೋಜಿಸಲಿದೆ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಮ್ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಸ್ವತಂತ್ರವಾಗಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು. ಆದರೆ ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಜಯ್‌ ಶಾ, 2023ರ ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಡಬಹುದೇ ವಿನಃ ಪಾಕಿಸ್ತಾನದಲ್ಲಲ್ಲ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತ ಕೊನೆಯದಾಗಿ 2005-06ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ನಡೆದ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಭಾರತ ಮತ್ತು ಪಾಕಿಸ್ತಾನವು 2012-13ರಲ್ಲಿ ಮೂರು T20Iಗಳು ಮತ್ತು ಅನೇಕ ಏಕದಿನ ಪಂದ್ಯಗಳಿಗಾಗಿ ಭಾರತಕ್ಕೆ ಪ್ರವಾಸ ಮಾಡಿದ್ದವು. ಇದರ ನಂತರ ಭಾರತ ಮತ್ತು ಪಾಕಿಸ್ತಾನವು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಅಂದಿನಿಂದ ಎರಡು ತಂಡಗಳು ವಿಶ್ವಕಪ್‌ ಅಥವಾ ಏಷ್ಯಾ ಕಪ್‌‌ನಲ್ಲಿ ಮಾತ್ರ ಕಾದಾಡಿದ್ದವು.

ಎರಡು ತಂಡಗಳ ನಡುವಿನ ಪಂದ್ಯಗಳು ಯಾವಾಗಲೂ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕುತ್ತವೆ ಮತ್ತು ಕ್ರೀಡಾಂಗಣಗಳು ಹೌಸ್ ಫುಲ್ ಆಗಿರುತ್ತವೆ. ಅಕ್ಟೋಬರ್ 23 ರಂದು ನಡೆಯಲಿರುವ ಎರಡು ತಂಡಗಳ T20 ವಿಶ್ವಕಪ್ 2022 ರ ಟಿಕೆಟ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ.

ಇದನ್ನೂ ಓದಿ: ಕ್ರಿಕೆಟ್‌ನ ಹೊಸ ನಿಯಮದಿಂದಾಗಿ ಭಾರತ ಮಹಿಳಾ ತಂಡಕ್ಕೆ ಜಯ: ಇಂಗ್ಲೆಂಡ್ ಎದುರು ಕ್ಲೀನ್‌ಸ್ವೀಪ್ ಸಾಧನೆ

ಈ ನಡುವೆ ಪಾಕಿಸ್ತಾನವು ಭಾರತದ ವಿರುದ್ಧ ಕೆಲವು ಸ್ಮರಣೀಯ ಪ್ರದರ್ಶನಗಳನ್ನು ನೀಡಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಪಾಕಿಸ್ತಾನ ತನ್ನ ವಿಶ್ವಕಪ್‌ನಲ್ಲಿ ತನ್ನ ಸಂಪ್ರದಾಯವನ್ನು ಮುರಿದಿದೆ. ಭಾರತ ಮತ್ತು ಪಾಕಿಸ್ತಾನ ಕೊನೆಯದಾಗಿ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...