Homeಮುಖಪುಟಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ: ಅದಾನಿ ವಿರುದ್ಧ ಈ ಕ್ರಮ ಯಾಕೆ ಇಲ್ಲ?...

ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ: ಅದಾನಿ ವಿರುದ್ಧ ಈ ಕ್ರಮ ಯಾಕೆ ಇಲ್ಲ? ಎಂದ ಮೊಯಿತ್ರಾ

- Advertisement -
- Advertisement -

2002ರ ಗುಜರಾತ್ ಗಲಭೆ ಮತ್ತು ಆ ಸಂದರ್ಭದಲ್ಲಿ ಮೋದಿ ನಡೆ ಬಗ್ಗೆ ಟೀಕಿಸುವ ಸಾಕ್ಷ್ಯಚಿತ್ರವನ್ನು BBC ಹೊರತಂದ ಬಳಿಕ ಭಾರತ ಸರ್ಕಾರ ಅದನ್ನು ವಿರೋಧಿಸಿ ದೇಶದಲ್ಲಿ ನಿಷೇಧಿಸಿತ್ತು. ಈ ವಿದ್ಯಮಾನಗಳು ನಡೆದು ಕೆಲವೇ ವಾರಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿಯ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ನವದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು “ಸಮೀಕ್ಷೆ” ಹೆಸರಲ್ಲಿ ದಾಳಿ ನಡೆಸಿರುವುದನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು, ವ್ಯಂಗ್ಯವಾಡಿದ್ದಾರೆ. ‘ಮಿಸ್ಟರ್ ಎ’ ವಿರುದ್ಧ ಇದೇ ರೀತಿಯ ಕ್ರಮಕ್ಕೆ ಕರೆ ನೀಡಬೇಕು. ಏಕೆಂದರೆ ಹಿಂಡೆನ್‌ಬರ್ಗ್ ರಿಸರ್ಚ್‌ನ ಕಟುವಾದ ವರದಿಯ ನಂತರ ಅವರ ವ್ಯಾಪಾರದ ಅದೃಷ್ಟವು ತೀವ್ರವಾಗಿ ಕುಸಿದಿದೆ ಎಂದು ಹೇಳಿದ್ದಾರೆ. ಗೌತಮ್ ಅದಾನಿ ಹೆಸರು ಉಲ್ಲೇಖಿಸದೇ ‘ಮಿಸ್ಟರ್ ಎ’ ಪದ ಬಳಕೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

“ಈ ವ್ಯಾಲೆಂಟೈನ್ ಡೇ “ಸಮೀಕ್ಷೆಗಳನ್ನು” ಆದಾಯ ತೆರಿಗೆ ಇಲಾಖೆ, SEBI ಮತ್ತು ಜಾರಿ ನಿರ್ದೇಶನಾಲಯ ಏಜೆನ್ಸಿಗಳು ಮಾಡುವುದರಿಂದ ಸರ್ಕಾರದ ಅತ್ಯಂತ ಮೌಲ್ಯಯುತ ಪ್ರಿಯತಮೆ‍ಯಾಗಿರುವ ‘ಮಿಸ್ಟರ್ ಎ’ ಮೇಲೆ ಹೇಗೆ ನಡೆಸುತ್ತದೆ?” ಎಂದು ಮಹುವಾ ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ಐಟಿ ಇಲಾಖೆಯ ಅಧಿಕಾರಿಗಳು ಮಂಗಳವಾರ ನವದೆಹಲಿಯ ಬಿಬಿಸಿ ಕಚೇರಿಯಲ್ಲಿದ್ದರು, ಇಲಾಖೆಯ ಅಧಿಕಾರಿಗಳು ಇದನ್ನು “ಸಮೀಕ್ಷೆ” ಎಂದು ವಿವರಿಸಿದ್ದಾರೆ. 2002 ರ ಗುಜರಾತ್ ಗಲಭೆ ಮತ್ತು ಮೋದಿ ಕುರಿತಾದ ಎರಡು ಸಾಕ್ಷ್ಯಚಿತ್ರಗಳನ್ನು BBC ಬಿಡುಗಡೆ ಮಾಡಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

”ಕೆಲವು ಅಕ್ರಮಗಳು ನಡೆದಿರುವ ಬಗ್ಗೆ ಖಚಿತವಾದ ಆಧಾರದ ಮೇಲೆ BBC ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು” ಇಲಾಖೆಯು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳು ಸಾಕ್ಷ್ಯಚಿತ್ರ ಮತ್ತು ಸಮೀಕ್ಷೆಯ ನಡುವೆ ಯಾವುದೇ ಸಂಬಂಧವನ್ನು ಇಲ್ಲ, ಬಿಬಿಸಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ “ವಿಷ ಕಕ್ಕಬಾರದು” ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

“ಬಿಬಿಸಿ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದೆ. ಎಲ್ಲಿಯವರೆಗೆ ವಿಷ ಕಕ್ಕುವುದಿಲ್ಲವೋ ಅಲ್ಲಿಯವರೆಗೆ ಭಾರತವು ಪ್ರತಿ ಸಂಸ್ಥೆಗೆ ಅವಕಾಶ ನೀಡುವ ದೇಶವಾಗಿರುತ್ತದೆ” ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಲ್ಲಿ ನಾವು ಅದಾನಿ ವಿಚಾರದಲ್ಲಿ ಜೆಪಿಸಿಗೆ ಬೇಡಿಕೆ ಇಡುತ್ತಿದ್ದೇವೆ ಆದರೆ ಸರ್ಕಾರ ಬಿಬಿಸಿಯ ಬೆನ್ನುಬಿದ್ದಿದೆ. ”ವಿನಾಶ ಕಾಲಕ್ಕೆ ವಿಪರೀತ ಬುದ್ದಿ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...