Homeಮುಖಪುಟತಮಿಳುನಾಡು: ಅತ್ಯಾಚಾರಕ್ಕೆ ಯತ್ನ ಪ್ರಕರಣ; ಒಂದೇ ವಾರದಲ್ಲಿ ತೀರ್ಪು ನೀಡಿದ ಕೋರ್ಟ್

ತಮಿಳುನಾಡು: ಅತ್ಯಾಚಾರಕ್ಕೆ ಯತ್ನ ಪ್ರಕರಣ; ಒಂದೇ ವಾರದಲ್ಲಿ ತೀರ್ಪು ನೀಡಿದ ಕೋರ್ಟ್

- Advertisement -
- Advertisement -

ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ತಮಿಳುನಾಡಿನ ಕೊಡೈಕೆನಾಲ್‌ನ ನ್ಯಾಯಾಲಯವು ಶಿಕ್ಷೆ ವಿಧಿಸಲು ಕೇವಲ ಎಂಟು ದಿನಗಳನ್ನು ತೆಗೆದುಕೊಂಡಿದೆ. ಇದು ರಾಜ್ಯದ ವಿಚಾರಣಾ ನ್ಯಾಯಾಲಯವು ನೀಡಿದ ಅತ್ಯಂತ ವೇಗದ ತೀರ್ಪು ಎಂದು ಹೇಳಲಾಗುತ್ತದೆ.

ಪ್ರಾಸಿಕ್ಯೂಷನ್ ಪ್ರಕಾರ, ಫೆಬ್ರವರಿ 4ರಂದು ಕೊಡೈಕೆನಾಲ್ ನಿವಾಸಿಗಳಾದ ಜೆವಾ ಮತ್ತು ಬಾಲಮುರುಗನ್ ಎನ್ನುವವರು ಗಿರಿಧಾಮದ ಕೂಕಲ್ ಗ್ರಾಮದಲ್ಲಿ ಹೋಂಸ್ಟೇ ನಡೆಸುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಲಿಫ್ಟ್ ಕೇಳಿದರು.

ಈ ಇಬ್ಬರು ವ್ಯಕ್ತಿಗಳು ಮಹಿಳೆಗೆ ಪರಿಚಿತರಿರುವ ಕಾರಣ, ಅವರು ಲಿಫ್ಟ್ ನೀಡಲು ಮುಂದಾದರು. ಇಬ್ಬರೂ ವಾಹನವನ್ನು ಹತ್ತಿದ ಬಳಿಕ ಅವರು ಮಹಿಳೆಗೆ ಕಿರುಕುಳ ನೀಡಿದ್ದಾರೆ.

ಮಹಿಳೆ ಆ ಇಬ್ಬರ ಹಿಡಿತದಿಂದ ಹೊರಬರಲು ಸಾಧ್ಯವಾಗದೆ ಸಹಾಯಕ್ಕಾಗಿ ಧ್ವನಿ ಎತ್ತಿದ್ದಾರೆ. ಆಗ ದಾರಿಹೋಕರು ಏಣೋ ಗಲಾಟೆಯಾಗುತ್ತಿದೆ ಎಂದು ಸಂತ್ರಸ್ತೆಯ ರಕ್ಷಣೆಗೆ ಮುಂದಾದಾಗಿದ್ದಾರೆ. ತಕ್ಷಣ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಮಹಿಳೆ ಕೊಡೈಕೆನಾಲ್ ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಬ್ಬರನ್ನೂ ಕೆಲವೇ ಗಂಟೆಗಳಲ್ಲಿ ಬಂಧಿಸಿ ಹೇಳಿಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತಿದೆ; ವೃಂದಾ ಗ್ರೋವರ್‌ ಆತಂಕ

ಪ್ರಕರಣವನ್ನು ಕೈಗೆತ್ತಿಕೊಂಡ ಕೊಡೈಕೆನಾಲ್‌ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ II ಎಸ್ ಕಾರ್ತಿಕ್, ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆ ಪ್ರಾರಂಭಿಸಿದರು ಮತ್ತು ಪೊಲೀಸರಿಂದ ತನಿಖೆಯ ಅಂತಿಮ ವರದಿಯನ್ನು ಕೇಳಿದರು. ಆರೋಪಿಗಳಿಗೆ ಕೊಡೈಕೆನಾಲ್ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ನೆರವು ನೀಡಲಾಯಿತು.

ಆರೋಪಗಳ ಮೇಲೆ ಸೆಕ್ಷನ್ 341 (ತಪ್ಪು ಸಂಯಮಕ್ಕೆ ಶಿಕ್ಷೆ), 294 (ಬಿ) (ಯಾವುದೇ ಅಶ್ಲೀಲ ಹಾಡು, ಬಲ್ಲಾಡ್ ಅಥವಾ ಪದಗಳನ್ನು ಹಾಡುವುದು, ಪಠಿಸುವುದು ಅಥವಾ ಉಚ್ಚರಿಸುವುದು, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಹತ್ತಿರ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), ಭಾರತೀಯ ದಂಡ ಸಂಹಿತೆಯ (IPC) 354(A) (ಲೈಂಗಿಕ ಕಿರುಕುಳ) ಮತ್ತು ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮ್ಯಾಜಿಸ್ಟ್ರೇಟ್ ಈ ಪ್ರಕರಣವನ್ನು ದಿನನಿತ್ಯದ ವಿಚಾರಣೆಗೆ ಕೈಗೆತ್ತಿಕೊಂಡರು. ಸಂತ್ರಸ್ತೆ, ಆರೋಪಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳು, ಎಕ್ಸಾಮಿನೇಷನ್-ಕ್ರಾಸ್ ಎಕ್ಸಮಿನೇಷನ್ ಮಾಡಿ ಎಲ್ಲವನ್ನೂ ದಾಖಲಿಸಲಾಗಿದೆ.

ಫೆಬ್ರವರಿ 12 ರಂದು ಪ್ರಕರಣದ ವಿಚಾರಣೆ ನಡೆದಿದ್ದು, ಮಹಿಳೆಯರ ಮೇಲಿನ ಅಪರಾಧವನ್ನು ಯಾವುದೇ ಸಂದರ್ಭದಲ್ಲೂ ಸಹಿಸಬಾರದು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗಮನಿಸುವುದರ ಮೂಲಕ ಮ್ಯಾಜಿಸ್ಟ್ರೇಟ್ ಕಾರ್ತಿಕ್ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಕಠಿಣ ಶಿಕ್ಷೆಯಿಂದ ಮಾತ್ರ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಕಡಿಮೆಯಾಗುತ್ತವೆ ಎಂದು ಅವರು ಹೇಳಿದರು.

ಮ್ಯಾಜಿಸ್ಟ್ರೇಟ್ ಇಬ್ಬರೂ ಅಪರಾಧಿಗಳಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹ 20,000 ದಂಡ ವಿಧಿಸಿದರು. ಕೇವಲ ಎಂಟು ದಿನಗಳಲ್ಲಿ ನ್ಯಾಯಾಲಯದ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿವೆ.

ಈ ಹಿಂದೆ, ಬಿಹಾರದ ಅರಾರಿಯಾ ಜಿಲ್ಲೆಯ POCSO ನ್ಯಾಯಾಲಯವು, ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಕೇವಲ ಒಂದು ದಿನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇರ ನಡೆ-ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು: ಸಿಎಂ ಸಿದ್ದರಾಮಯ್ಯ

0
ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ...