Homeಮುಖಪುಟಭಾರತದ ಕುಸ್ತಿ ಫೆಡರೇಶನ್‌ ಸದಸ್ಯತ್ವವನ್ನು ಅಮಾನತುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ

ಭಾರತದ ಕುಸ್ತಿ ಫೆಡರೇಶನ್‌ ಸದಸ್ಯತ್ವವನ್ನು ಅಮಾನತುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ

- Advertisement -
- Advertisement -

WFIಗೆ (ಭಾರತೀಯ ಕುಸ್ತಿ ಫೆಡರೇಶನ್)  ಚುನಾವಣೆಗಳನ್ನು ನಡೆಸಲು ವಿಫಲವಾದ ಕಾರಣದಿಂದ ವಿಶ್ವ ಕುಸ್ತಿ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ಆಫ್ ವ್ರೆಸ್ಲಿಂಗ್ ಭಾರತದ ಕುಸ್ತಿ ಫೆಡರೇಶನನ್ನು ಅಮಾನತು ಮಾಡಿದೆ.

WFIಗೆ  ಜೂನ್ 2023 ರಲ್ಲಿ ಚುನಾವಣೆಗಳನ್ನು ನಡೆಸಬೇಕಿತ್ತು. ಆದರೆ  WFI ಸ್ವತಃ ವಿವಾದಗಳಲ್ಲಿ ಸಿಲುಕಿಕೊಂಡಿತ್ತು. ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರಿಂದ  ಅನೇಕ ಪ್ರತಿಭಟನೆಗಳು ನಡೆಯುತ್ತಿದ್ದವು.

ಅಮಾನತಿನ ಪರಿಣಾಮವಾಗಿ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ದೇಶದ ಸ್ಪರ್ಧಿಗಳಿಗೆ ಅವಕಾಶ ಇರುವುದಿಲ್ಲ.

ಮುಂದಿನ 45 ದಿನಗಳಲ್ಲಿ (ಜುಲೈ 15 ರೊಳಗೆ) ಭಾರತದ ಕುಸ್ತಿ ಫೆಡರೇಶನ್ ಗೆ ಚುನಾವಣೆ ನಡೆಯದಿದ್ದರೆ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಎಂದು ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಯುಡಬ್ಲ್ಯುಡಬ್ಲ್ಯು ಏಪ್ರಿಲ್ 28 ರಂದು ತನ್ನ ಹೇಳಿಕೆಯಲ್ಲಿ ನಿಗದಿತ ಸಮಯದಲ್ಲಿ ಚುನಾವಣೆ ನಡೆಸದಿದ್ದರೆ ಭಾರತದ ಕುಸ್ತಿ ಫೆಡರೇಶನ್ ನ್ನು ಅಮಾನತು ಮಾಡುತ್ತೇವೆ ಎಂದು ಎಚ್ಚರಿಸಿತ್ತು.

ಚುನಾವಣೆಗಳನ್ನು ನಡೆಸದಿದ್ದಕ್ಕಾಗಿ ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಲಾಗಿದೆ ಎಂದು ಯುನೈಟೆಡ್ ವರ್ಲ್ಡ್ ಆಫ್ ವ್ರೆಸ್ಲಿಂಗ್ ಬುಧವಾರ ರಾತ್ರಿ  ಪ್ಯಾನೆಲ್‌ಗೆ ತಿಳಿಸಿದೆ ಎಂದು ಐಒಎ ಮೂಲವು ಪಿಟಿಐಗೆ ತಿಳಿಸಿದೆ.

WFIಗೆ ಮೇ 7 ರಂದು ಚುನಾವಣೆಗಳನ್ನು ನಡೆಸಬೇಕಿತ್ತು. ಆದರೆ ಆ ಪ್ರಕ್ರಿಯೆ ಮುಂದುವರಿದಿತ್ತು.

ಇದನ್ನು ಓದಿ: ಮೋದಿ ಕುರಿತು ಸುದ್ದಿ ಮಾಡಿದ ಬಳಿಕ ‘ಸೈಬರ್ ದಾಳಿ” ನಡೆದಿದೆ ಎಂದ ದ. ಆಫ್ರಿಕಾದ ಸುದ್ದಿ ವೆಬ್‌ಸೈಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Well done. If the central govt. failed to set right the things, these things will happen. But the lose is to our sports persons ,not to the bloody and dirty politicians. Its really sad

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...