Homeಮುಖಪುಟಮೋದಿ ಕುರಿತು ಸುದ್ದಿ ಮಾಡಿದ ಬಳಿಕ 'ಸೈಬರ್ ದಾಳಿ" ನಡೆದಿದೆ ಎಂದ ದ. ಆಫ್ರಿಕಾದ ಸುದ್ದಿ...

ಮೋದಿ ಕುರಿತು ಸುದ್ದಿ ಮಾಡಿದ ಬಳಿಕ ‘ಸೈಬರ್ ದಾಳಿ” ನಡೆದಿದೆ ಎಂದ ದ. ಆಫ್ರಿಕಾದ ಸುದ್ದಿ ವೆಬ್‌ಸೈಟ್

- Advertisement -
- Advertisement -

ಮೋದಿ ಕುರಿತು ಸುದ್ದಿ ಮಾಡಿದ ಬಳಿಕ  ದಕ್ಷಿಣ ಆಫ್ರಿಕಾದ ಸುದ್ದಿ ವೆಬ್‌ಸೈಟ್ ‘ಡೈಲಿ ಮೇವರಿಕ್’ ಬುಧವಾರ (ಆಗಸ್ಟ್ 23) ಸೈಬರ್ ದಾಳಿಗೆ ಒಳಗಾಗಿದೆ ಎಂದು ಹೇಳಿಕೊಂಡಿದೆ. ಡೈಲಿ ಮೇವರಿಕ್ ತನ್ನ ವರದಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ದಕ್ಷಿಣ ಆಫ್ರಿಕಾದ ಪ್ರಧಾನಿ ಸ್ವಾಗತಿಸದಿರುವುದು ಅಸಮಾಧಾನವಾಗಿದೆ. ಅವರು ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು ಎಂದು ವೆಬ್ ಸೈಟ್ ವರದಿ  ಮಾಡಿತ್ತು.

ಮೋದಿ ಕುರಿತ ಈ ಸುದ್ದಿ ಪ್ರಕಟಿಸಿದ ಬಳಿಕ  ಡೈಲಿ ಮೇವರಿಕ್  ವೆಬ್ ‘ಸೈಬರ್ ದಾಳಿ’ಗೆ ಒಳಗಾಗಿದೆ ಎಂದು ವೆಬ್ ಸೈಟ್ X (Twitter) ನ ಪ್ರಕಟಣೆಯಲ್ಲಿ  ಹೇಳಿದೆ.

ಸೈಬರ್  ದಾಳಿಯು ಟಾರ್ಗೆಟ್ ಮಾಡಿದ ಸರ್ವರ್ ನ ಟ್ರಾಫಿಕ್ ಗೆ ಅಡ್ಡಿಪಡಿಸುವ ಯತ್ನವನ್ನು ಮಾಡಿದೆ. ಸೈಟ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ನಾವು ಅದನ್ನು ಬಹಳ ಬೇಗನೆ ಪರಿಶೀಲಿಸಿದಾಗ ಸಂಪೂರ್ಣ ಭಾರತೀಯ ಸರ್ವರ್‌ಗಳಿಂದ  ಸಮಸ್ಯೆ ಎದುರಾಗಿದೆ ಎಂದು ಕಂಡುಕೊಂಡಿದ್ದೇವೆ ಎಂದು ಬುಧವಾರ ರಾತ್ರಿ 11:30 ಕ್ಕೆ ಡೈಲಿ ಮೇವರಿಕ್‌ನ ಭದ್ರತಾ ಸಂಯೋಜಕರು ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರು ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ. BRICS ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ  ದೇಶದ ಒಂದು ಒಕ್ಕೂಟವಾಗಿದೆ.

ಮಂಗಳವಾರದ ಡೈಲಿ ಮಾವೆರಿಕ್ ವರದಿಯ ಪ್ರಕಾರ, ಮೋದಿ ಅವರು ವಾಟರ್‌ಕ್ಲೂಫ್ ಏರ್ ಫೋರ್ಸ್ ಬೇಸ್‌ಗೆ ಬಂದಿಳಿದಾಗ, ಅವರು ವಿಮಾನದಿಂದ ಕೆಳಗಿಳಿಯಲು  ನಿರಾಕರಿಸಿದರು ಏಕೆಂದರೆ ಅಧ್ಯಕ್ಷ ಸಿರಿಲ್ ರಾಂಫೋಸಾ ಅವರ ಬದಲಿಗೆ ಕ್ಯಾಬಿನೆಟ್ ಮಂತ್ರಿ ಅವರನ್ನು ಸ್ವಾಗತಿಸಲು ಬಂದಿದ್ದರು. ರಾಂಫೋಸಾ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಿದ್ದರು ಎಂದು ಹೇಳಿ ವರದಿ ಮಾಡಿತ್ತು.

ಭಾರತದ ಜನರಿಗೆ ಈ ಸ್ಟೋರಿ  ಓದದಂತೆ ತಡೆಯುವುದು ಇದರ ಉದ್ದೇಶವಾಗಿದೆ ಎಂದು ಡೈಲಿ ಮಾವೆರಿಕ್‌ನ ಪ್ರಧಾನ ಸಂಪಾದಕ ಬ್ರಾಂಕೊ ಬ್ರಿಕಿಕ್ ಹೇಳಿದ್ದಾರೆ. ವೆಬ್‌ಸೈಟ್ ಪ್ರಸ್ತುತ ಭಾರತದಲ್ಲಿ ಲಭ್ಯವಾಗುತ್ತಿಲ್ಲ. ಡೈಲಿ ಮಾವೆರಿಕ್ ಭಾರತದ ಓದುಗರಿಗೆ ಲೇಖನವನ್ನು ತಲುಪುವಂತೆ ಮಾಡಲು  ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಬುಧವಾರ ಸಂಜೆ, ದಕ್ಷಿಣ ಆಫ್ರಿಕಾದ ಉಪಾಧ್ಯಕ್ಷರ  ಕಚೇರಿ ಈ  ಸ್ಟೋರಿಯನ್ನು ನಿರಾಕರಿಸಿದೆ. ಡೈಲಿ ಮೇವರಿಕ್ ಸುಳ್ಳು ವರದಿ ಮಾಡಿದೆ ಎಂದು ಹೇಳಿದೆ. ಭಾರತದ ಪ್ರಧಾನಿ ಆಗಮಿಸುತ್ತಾರೆ ಮತ್ತು ಅವರು ಅವರನ್ನು ಬರಮಾಡಿಕೊಳ್ಳಬೇಕು ಎಂದು ಉಪರಾಷ್ಟ್ರಪತಿಗೆ ಮೊದಲೇ ತಿಳಿದಿತ್ತು. ಪ್ರಧಾನಿ ಇಳಿಯುವ ಮೊದಲೇ ಅವರು ಅಲ್ಲಿದ್ದರು ಎಂದು ವಕ್ತಾರರು ಹೇಳಿದ್ದಾರೆ.

ಇದನ್ನು ಒದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸಲು ಸೂಚಿಸಿದ್ದ ಜಡ್ಜ್ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...