Homeಮುಖಪುಟಟ್ರಾಫಿಕ್‌ ಪೇದೆ ಜೊತೆ ಅನುಚಿತವಾಗಿ ವರ್ತಿಸಿದ ಹಿಂದೂ ರಕ್ಷಾ ದಳದ ಅಧ್ಯಕ್ಷ

ಟ್ರಾಫಿಕ್‌ ಪೇದೆ ಜೊತೆ ಅನುಚಿತವಾಗಿ ವರ್ತಿಸಿದ ಹಿಂದೂ ರಕ್ಷಾ ದಳದ ಅಧ್ಯಕ್ಷ

- Advertisement -
- Advertisement -

ಗಾಜಿಯಾಬಾದ್‌ನಲ್ಲಿ ದಂಡ ವಿಧಿಸಿದ ಟ್ರಾಫಿಕ್‌ ಪೇದೆಗೆ ಹಿಂದುತ್ವ ಗುಂಪೊಂದರ ನಾಯಕ ಅನುಚಿತವಾಗಿ ವರ್ತಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷ ಪಿಂಕಿ ಚೌಧರಿ ಮತ್ತು ಗಾಜಿಯಾಬಾದ್ ಟ್ರಾಫಿಕ್ ಪೊಲೀಸ್ ಪೇದೆಯ ನಡುವಿನ ವಾಗ್ವಾದದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಪಿಂಕಿ ಚೌಧರಿ ಮತ್ತು ಕೆಲ ಆತನ ಜೊತೆಗಿದ್ದವರು ಟ್ರಾಫಿಕ್ ಪೊಲೀಸರನ್ನು ಸುತ್ತುವರೆದಿರುವುದು ಕಂಡು ಬಂದಿದೆ. ಪೇದೆಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸುವುದು ಕಂಡು ಬಂದಿದೆ.

ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ ತನ್ನ ಕಾರಿನ ಮೇಲೆ ‘ಜೈ ಮಾತಾ ದಿ’ ಎಂದು ಬರೆದು ಸ್ಟಿಕ್ಕರ್ ಅಂಟಿಸಿದ್ದ. ಇದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ಪೊಲೀಸ್ ಪೇದೆ ಆತನಿಗೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ.

ರಾಜನಗರ ವ್ಯಾಪ್ತಿಯಲ್ಲಿನ  ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಕಾರಿನ ಮೇಲೆ ‘ಜೈ ಮಾತಾ ದಿ’ ಎಂದು ಬರೆದಿದ್ದಕ್ಕಾಗಿ ಕಾರಿಗೆ ದಂಡ ವಿಧಿಸಿದ್ದಾರೆ. ಇದಕ್ಕೆ ವಿರೋಧಿಸಿದ ಪಿಂಕಿ ಚೌಧರಿ,  ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್‌ಗೆ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡುವಂತೆ, ಯೋಗಿಗೆ ಕರೆ ಮಾಡುವಂತೆ ಹೇಳುವುದು ಸೆರೆಯಾಗಿದೆ.  ಧೈರ್ಯವಿದ್ದರೆ ಸಿಎಂಗೆ ಕರೆ ಮಾಡು ಎಂದು ಕಾನ್‌ಸ್ಟೆಬಲ್‌ಗೆ ಹೇಳಿದ್ದಾರೆ. ಟ್ರಾಫಿಕ್ ಪೊಲೀಸ್ ಪೇದೆ ತಾಳ್ಮೆಯಿಂದ ನಿಂತು ಪಿಂಕಿ ಚೌಧರಿ ಮತ್ತು ಆತನ ಜೊತೆಗಿದ್ದವರ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ಇದನ್ನು ಓದಿ: ಆಹಾರದ ಪೊಟ್ಟಣ ಕಳ್ಳತನದ ಶಂಕೆಯಲ್ಲಿ ಬುಡಕಟ್ಟು ಬಾಲಕನಿಗೆ ಥಳಿಸಿ ಹತ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಎಸ್‌ಐಆರ್‌ನಲ್ಲಿ ಹೆಸರು ಅಳಿಸಿದ ಬಳಿಕ ಮರು ನೋಂದಣಿ: ಮತದಾರರ ವಿರುದ್ಧ ಕ್ರಮವಿಲ್ಲ ಎಂದ ಸುಪ್ರೀಂ ಕೋರ್ಟ್ 

ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವೇಳೆ ಹೆಸರುಗಳನ್ನು ಅಳಿಸಿರುವ ಪ್ರಕರಣದಲ್ಲಿ, ಮರು ನೋಂದಣಿಗೆ ಅರ್ಜಿ ಸಲ್ಲಿಸುವ ಮತದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಸುಪ್ರೀಂ...

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಹಗರಣ: ತಮಿಳುನಾಡು ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು...

‘ಉತ್ತರ ಪ್ರದೇಶ ಪೊಲೀಸರಿಗೆ ತನಿಖೆಯ ಸೂಕ್ತ ತರಬೇತಿ ಅಗತ್ಯ’: 6 ವರ್ಷ ಅನಗತ್ಯವಾಗಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿ ₹6 ಲಕ್ಷ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!

ಅಪಹರಣ ಮತ್ತು ಕೊಲೆ ಪ್ರಕರಣವೊಂದರಲ್ಲಿ ಯಾವುದೇ ಆಧಾರವಿಲ್ಲದೆ ಸುದೀರ್ಘ 6 ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಾಲ ಕಳೆದ ಅರುಣ್ ಅಲಿಯಾಸ್ ದೀಪಕ್ ಎಂಬ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿರಪರಾಧಿ...

ನವದೆಹಲಿ| ರಾಷ್ಟ್ರಪತಿ ಭವನ ಸಮೀಪದ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಅವಘಡ; ದಟ್ಟ ಹೊಗೆ

ನವದೆಹಲಿಯ ರಾಷ್ಟ್ರಪತಿ ಭವನದ ಸಮೀಪವಿರುವ ನಾರ್ತ್ ಬ್ಲಾಕ್ ಪ್ರದೇಶದಲ್ಲಿ ಸೋಮವಾರ ಸಣ್ಣ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ...

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ಡಿಕ್ಕಿ; ಎಸ್‌ಐಟಿ ತನಿಖೆಗೆ ಆದೇಶ

ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ತೆರಳುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯಲ್ಲಿದ್ದ ಹಲವು ವಾಹನಗಳು 'ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ'ನಲ್ಲಿ ಪರಸ್ಪರ ಡಿಕ್ಕಿ...

ಮಹಾರಾಷ್ಟ್ರ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್, ತಡೆ ನೀಡಲು ನಿರಾಕರಣೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಚುನಾವಣಾ ಆಯೋಗಕ್ಕೆ...

ಕರ್ನಾಟಕ SIR : ಚುನಾವಣಾ ಅಧಿಕಾರಿಗಳಿಂದಲೇ 61,000ಕ್ಕೂ ಹೆಚ್ಚು ಫಾರಂ-7 ಅರ್ಜಿ ಸಲ್ಲಿಕೆ; ಒಂದರಲ್ಲೂ ಕಾರಣ ಉಲ್ಲೇಖಿಸಿಲ್ಲ-ವರದಿ

ಕರ್ನಾಟಕದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಕನಿಷ್ಠ 61,059 ಫಾರಂ-7 ಅರ್ಜಿಗಳನ್ನು ಸ್ವತಃ ಚುನಾವಣಾ ಅಧಿಕಾರಿಗಳೇ ಸಲ್ಲಿಸಿದ್ದು, ಅವುಗಳಲ್ಲಿ ಒಂದೇ ಒಂದು ಅರ್ಜಿಯಲ್ಲೂ ಹೆಸರು ಕೈಬಿಡಲು ಕಾರಣವನ್ನು ನಮೂದಿಸಿಲ್ಲ. ಮತದಾರರ ನೋಂದಣಿ...

ಮತದಾರರನ್ನು ಪ್ರಭಾವಿಸಲು ಬಿಜೆಪಿ ಹಣ – ಬೆದರಿಕೆ ಬಳಸುತ್ತಿದೆ: ಮಮತಾ ಆರೋಪ

ಬಿಜೆಪಿ ಹಣ ಮತ್ತು ಬೆದರಿಕೆಯನ್ನು ಬಳಸಿ ಜನರನ್ನು ಪ್ರಭಾವಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರ ದೌರ್ಜನ್ಯಗಳು ಹೆಚ್ಚಾಗಿವೆ, ಸರ್ಕಾರಿ ಅಧಿಕಾರಿಗಳು...

ಬ್ರೆಜಿಲ್ ಚುನಾವಣೆ: ಟ್ರಂಪ್ ಬೆಂಬಲಿತ ಬಲಪಂಥೀಯ ಬೋಲ್ಸೊನಾರೊಗೆ ಸೋಲು; ನಾಲ್ಕನೇ ಬಾರಿಗೆ ಎಡಪಂಥೀಯ ಲುಲಾಗೆ ಗೆಲುವು 

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ತೀವ್ರ ಬಲಪಂಥೀಯ ಎದುರಾಳಿ ಫ್ಲಾವಿಯೊ ಬೋಲ್ಸೊನಾರೊ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಬ್ರೆಜಿಲ್‌ನ...

ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತ 26 ರೆಡ್ಡಿಟ್ ಪೋಸ್ಟ್‌ಗಳಿಗೆ ನಿರ್ಬಂಧ: ಕೇಂದ್ರದ ರಹಸ್ಯ ಆದೇಶದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಐಎಫ್‌ಎಫ್

ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದ ಚರ್ಚೆಗಳು, ಸೇನಾ ದೃಶ್ಯಗಳ ಪರಿಶೀಲನೆ, ಉಪಗ್ರಹ ಚಿತ್ರಗಳ ವರದಿ ಮತ್ತು ಅರುಣಾಚಲ ಪ್ರದೇಶದ ಮೇಲಿನ ಚೀನಾದ ಹಕ್ಕುಗಳ ಕುರಿತು ಪ್ರಕಟವಾಗಿದ್ದ 26 ರೆಡ್ಡಿಟ್ ಪೋಸ್ಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ....