Homeಮುಖಪುಟಧರಮ್ ಸಂಸದ್‌ನಲ್ಲಿ ಗಾಂಧಿಜಿಗೆ ಅವಹೇಳನ; ಬಲಪಂಥೀಯ ಸ್ವಾಮಿ ವಿರುದ್ದ FIR

ಧರಮ್ ಸಂಸದ್‌ನಲ್ಲಿ ಗಾಂಧಿಜಿಗೆ ಅವಹೇಳನ; ಬಲಪಂಥೀಯ ಸ್ವಾಮಿ ವಿರುದ್ದ FIR

- Advertisement -
- Advertisement -

ಚತ್ತೀಸ್‌ಘಡದ ರಾಯ್‌ಪುರದಲ್ಲಿ ಕಳೆದ ವಾರ ನಡೆದ ಎರಡು ದಿನಗಳ ‘ಧರಮ್ ಸಂಸದ್’ನಲ್ಲಿ, ಮಹಾತ್ಮ ಗಾಂಧಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವರ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಬಲಪಂಥೀಯ ಹಿಂದೂ ಧಾರ್ಮಿಕ ಪುರೋಹಿತನ ವಿರುದ್ಧ ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ಧರಮ್‌ ಸಂಸದ್‌ಗೆ ದೇಶದಾದ್ಯಂತ ವಿವಿಧ ಜಾತಿಗಳನ್ನು ಪ್ರತಿನಿಧಿಸುವ ಸುಮಾರು 20 ಧಾರ್ಮಿಕ ಪುರೋಹಿತರು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಈ ಸಂಸದ್‌ನಲ್ಲಿ ಕೆಲವರು ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಹಿಂದೂಗಳನ್ನು ಸಜ್ಜುಗೊಳಿಸುವಂತೆ ಒತ್ತಾಯಿಸಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:‘ಖಾಲಿಸ್ತಾನಿ & LTTE ಭಯೋತ್ಪಾದಕರಾಗಿ’: ಹಿಂದೂ ಯುವಕರಿಗೆ ಬಹಿರಂಗ ಕರೆ ನೀಡಿದ ಯತಿ ನರಸಿಂಗಾನಂದ!

ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಹಾರಾಷ್ಟ್ರದ ಕಾಳಿಚರಣ್‌ ವಿರುದ್ದ ಪೊಲೀಸರು, ಐಪಿಸಿ ಸೆಕ್ಷನ್ 505(2) ಮತ್ತು 294 ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರನ್ನು ಕೂಡ ಅವರು ಸಭೆಯಲ್ಲಿ ದೂಷಿಸಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ, ಧರಮ್‌ ಸಂಸದ್‌ನ ಸಂಚಾಲಕ ಮಹಂತ್‌ ರಾಮ್‌ ಸುಂದರ್‌ ದಾಸ್‌ ಅವರು ಕಾಳಿಚರಣ್‌ ನೀಡಿದ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದು, ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಈ ಸಂಸದ್‌ ಅನ್ನು ನೀಲಕಂಠ ಸೇವಾ ಸಮಿತಿ ಮತ್ತು ದೂಧಧಾರಿ ಮಠ ಆಯೋಜಿಸಿತ್ತು. ಜೊತೆಗೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಮೋದ್ ದುಬೆ ಮತ್ತು ಬಿಜೆಪಿ ಮುಖಂಡ ಬ್ರಿಜ್‌ಮೋಹನ್ ಅಗರವಾಲ್ ಮತ್ತು ವಿಷ್ಣು ದೇವ್ ಸಾಯಿ ಉಪಸ್ಥಿತರಿದ್ದರು.

ಜೊತೆಗೆ ಹಿಂದೆ ಹರಿದ್ವಾರದಲ್ಲಿ ನಡೆದ ವಿವಾದಿತ ‘ಧರಮ್ ಸಂಸದ್’ನಲ್ಲಿ ಹೇಳಿಕೆ ನೀಡಿದ್ದ ಸ್ವಾಮಿ ಪ್ರಭೋದಾನಂದ ಗಿರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಸಿಎಂ ಕೇಜ್ರಿವಾಲ್‌ಗೆ ಶೂಟ್‌ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ ನರಸಿಂಗಾನಂದ ಹಿಂಬಾಲಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...