ಕಳೆದ ವರ್ಷದ IPL ನೆನಪುಗಳು ಮಾಸುವ ಮುನ್ನವೇ ಈ ವರ್ಷದ IPL ಘೋಷಣೆಯಾಗಿದೆ. ಕೊರೋನಾ ಕಾರಣಕ್ಕೆ ಕಳೆದ ವರ್ಷ ಅರಬ್ಬರ ನೆಲದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2021 ರ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. IPL 2021ರ ಸೀಸನ್ ಏಪ್ರಿಲ್ 9 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯ ಮೇ 30 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹಿಂದಿನ ಋತುವಿನ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ಏಪ್ರಿಲ್ 10 ರಂದು ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯ ಆಡಲಿದೆ. ಚೆನ್ನೈ, ಮುಂಬೈ, ಅಹಮದಾಬಾದ್, ದೆಹಲಿ, ಬೆಂಗಳೂರು ಮತ್ತು ಕೋಲ್ಕತಾ ಈ ಆರು ನಗರಗಳಲ್ಲಿ ಪಂದ್ಯಾವಳಿ ನಡೆಯಲಿದೆ.
ಪ್ರತಿ ತಂಡವು ಲೀಗ್ ಹಂತದಲ್ಲಿ ಆರು ಗೊತ್ತುಪಡಿಸಿದ ಸ್ಥಳಗಳಲ್ಲಿ ನಾಲ್ಕನ್ನು ಆಡಲಿದೆ ಎಂದು IPL ಪ್ರಕಟಣೆ ತಿಳಿಸಿದೆ.
ವಿಶೇಷವೆಂದರೆ, ಪ್ರತಿ ಪಂದ್ಯವು ತಟಸ್ಥ ಸ್ಥಳದಲ್ಲಿ ನಡೆಯಲಿದ್ದು, ಯಾವುದೇ ತಂಡವು ತಮ್ಮ ತವರು ಕ್ರೀಡಾಂಗಣದಲ್ಲಿ ಆಡಲು ಅವಕಾಶ ಒದಗಿಸಿಲ್ಲ.
ಇದನ್ನೂ ಓದಿ: ಕನ್ನಡದ ಹುಡುಗನಿಗೆ ಅಚ್ಚರಿಯ ಡಿಮ್ಯಾಂಡ್: ಐಪಿಎಲ್‌ನಲ್ಲಿ ಕೆ.ಗೌತಮ್ ಮೌಲ್ಯ 9.25 ಕೋಟಿ ರೂ!
ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರು ತಲಾ 10 ಪಂದ್ಯಗಳ ಆತಿಥ್ಯ ವಹಿಸಲಿದ್ದು, ಲೀಗ್ ಹಂತಗಳಲ್ಲಿ ಅಹಮದಾಬಾದ್ ಮತ್ತು ದೆಹಲಿ ತಲಾ ಎಂಟು ಪಂದ್ಯಗಳನ್ನು ಆಯೋಜಿಸುತ್ತವೆ.
ಸ್ಪರ್ಧೆಯ ನಾಕೌಟ್ ಹಂತಗಳು ಸಂಪೂರ್ಣವಾಗಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸುರಕ್ಷತಾ ಕ್ರಮಗಳ ಭಾಗವಾಗಿ, ಲೀಗ್ ಹಂತದಲ್ಲಿ ಪ್ರತಿ ತಂಡವು ಮೂರು ಬಾರಿ ಮಾತ್ರ ಪ್ರಯಾಣಿಸಬೇಕಾಗುತ್ತದೆ ಎಂದು ಸಂಘಟಕರು ಖಚಿತಪಡಿಸಿದ್ದಾರೆ.
ಆರಂಭದಲ್ಲಿ ಪ್ರೇಕ್ಷಕರಿಗೆ ನೇರ ಮ್ಯಾಚ್ ನೋಡುವ ಅವಕಾಶವಿಲ್ಲ. ಆದರೆ ನಂತರದ ಹಂತಗಳಲ್ಲಿ ಪ್ರೇಕ್ಷಕರನ್ನು ಅನುಮತಿಸುವ ಕರೆ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ 11 ಡಬಲ್-ಹೆಡರ್‌ಗಳಿದ್ದು, ಆರು ತಂಡಗಳು ಮೂರು ಮಧ್ಯಾಹ್ನ ಪಂದ್ಯಗಳನ್ನು ಮತ್ತು ಎರಡು ತಂಡಗಳು ಎರಡು ಮಧ್ಯಾಹ್ನ ಪಂದ್ಯಗಳನ್ನು ಆಡಲಿವೆ.
ಇದನ್ನೂ ಓದಿ: ಸಚಿನ್ ಮಗನನ್ನು ಖರೀದಿಸಿದ ಮುಂಬೈ ಇಂಡಿಯನ್ಸ್: ಮ್ಯಾನೇಜ್‌ಮೆಂಟ್ ಕೋಟಾ ಎಂದ ನೆಟ್ಟಿಗರು!