Homeಮುಖಪುಟಇಸ್ರೇಲ್ ಸೇನೆಯನ್ನು 'ಭಯೋತ್ಪಾದಕ ಸಂಘಟನೆ' ಎಂದು ಹೆಸರಿಸಲು ಕರೆ ಕೊಟ್ಟ ಇರಾನ್ ಅಧ್ಯಕ್ಷ

ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಹೆಸರಿಸಲು ಕರೆ ಕೊಟ್ಟ ಇರಾನ್ ಅಧ್ಯಕ್ಷ

- Advertisement -
- Advertisement -

ಇಸ್ರೇಲ್‌ನ ಸೇನೆಯನ್ನು “ಭಯೋತ್ಪಾದಕ ಸಂಘಟನೆ” ಎಂದು ಹೆಸರಿಸುವಂತೆ ಇಸ್ಲಾಮಿಕ್ ಸರ್ಕಾರಗಳಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ಅಧ್ಯಕ್ಷ ರೈಸಿ ಅವರು, ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನ ಪ್ರಸ್ತುತ ದಾಳಿಯನ್ನು ಉಲ್ಲೇಖಿಸಿ ಇಸ್ರೇಲ್‌ನೊಂದಿಗೆ ಸಂಬಂಧವನ್ನು ಕಡಿದುಹಾಕಲು ಇಸ್ಲಾಮಿಕ್ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ. ಪ್ಯಾಲೆಸ್ಟೀನಿಯಾದವರಿಗೆ ಹೆಚ್ಚಿನ ಬೆಂಬಲ ನೀಡುವಂತೆ ಅವರು ಕರೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಸೌದಿ ರಾಜಧಾನಿ ರಿಯಾದ್‌ನಲ್ಲಿ ಶನಿವಾರ ನಡೆದ ಅರಬ್ ಮತ್ತು ಮುಸ್ಲಿಂ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ರೈಸಿ ಮಾತನಾಡಿದರು. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಚರ್ಚಿಸಲು ಉದ್ದೇಶಿಸಿರುವ ಒಐಸಿ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲ್‌ನ ಸೈನ್ಯಕ್ಕೆ ‘ಭಯೋತ್ಪಾದಕ ಗುಂಪು’ ಎಂದು ಹೆಸರಿಸಲು ಇಸ್ಲಾಮಿಕ್ ದೇಶಗಳಿಗೆ ರೈಸಿ ರೈಸಿ ಒತ್ತಾಯಿಸಿದ್ದಾರೆ.

ಶೃಂಗಸಭೆಯಲ್ಲಿ ಐತಿಹಾಸಿಕ ಮತ್ತು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಜಿಯೋನಿಸ್ಟ್ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಹಮಾಸ್ ಕರೆ ನೀಡಿತು ಎಂದು ರಾಯಿಟರ್ ವರದಿ ಮಾಡಿದೆ.

ನಾವು ಅರಬ್ ಮತ್ತು ಮುಸ್ಲಿಂ ನಾಯಕರಿಗೆ ಕರೆ ನೀಡುತ್ತೇವೆ. ನಮ್ಮ ಜನರು ಗಾಜಾ ಪಟ್ಟಿಯಲ್ಲಿ ಎದುರಿಸುತ್ತಿರುವ ನರಮೇಧದಲ್ಲಿ ನೇರ ಹೊಣೆಗಾರಿಕೆಯನ್ನು ಹೊತ್ತಿರುವ ಅಮೇರಿಕನ್ ಆಡಳಿತದ ಮೇಲೆ ಒತ್ತಡ ಹೇರಬೇಕು ಎಂದು ಹಮಾಸ್‌ನ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಗಾಜಾ ನಾಗರಿಕರ ಹತ್ಯೆಯನ್ನು ಇಸ್ರೇಲ್ ನಿಲ್ಲಿಸಬೇಕು: ಕದನ ವಿರಾಮಕ್ಕೆ ಕರೆ ಕೊಟ್ಟ ಫ್ರಾನ್ಸ್ ಅಧ್ಯಕ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read