Homeಚಳವಳಿಸಿಂಘು ಗಡಿಯ ದೆಹಲಿ ಭಾಗದಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ, ಇಬ್ಬರ ಬಂಧನ

ಸಿಂಘು ಗಡಿಯ ದೆಹಲಿ ಭಾಗದಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ, ಇಬ್ಬರ ಬಂಧನ

- Advertisement -
- Advertisement -

ಶುಕ್ರವಾರದಂದು ಸಿಂಘು ಗಡಿಯ ದೆಹಲಿ ಭಾಗದಲ್ಲಿನ ಸಣ್ಣ ಪ್ರಮಾಣದ ಸಂಖ್ಯೆಯಲ್ಲಿರುವ ರೈತರ ಪ್ರತಿಭಟನಾ ಸ್ಥಳಕ್ಕೆ, ಸ್ಥಳೀಯರ ಸೋಗಿನಲ್ಲಿ ಬಂದ ಬಿಜೆಪಿಯ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದರು. ಅದನ್ನು ಸರ್ಕಾರದ ಪರವಿರುವ ಮಾಧ್ಯಮಗಳು, ಸಿಂಘು ಗಡಿಯಲ್ಲಿ ಸ್ಥಳೀಯರು ರೈತರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಫ್ಯಾಕ್ಟ್‌ಚೆಕಿಂಗ್ ವೆಬ್‌ಸೈಟ್‌ಗಳು ಅದರ ಸತ್ಯಾಸತ್ಯತೆಯನ್ನು ತಿಳಿಸಿದ್ದವು.

ಇಂದು (ಶನಿವಾರ) ಅದೇ ಸ್ಥಳದಲ್ಲಿ ಮತ್ತೇ ಅಹಿತಕರ ಘಟನೆಗಳು ನಡೆದಿದೆ. ದೆಹಲಿ ಪೊಲೀಸರು ಅಲ್ಲಿನ ನಾಗರೀಕರೊಂದಿಗೆ ಮಾತುಕತೆ ನಡೆಸುತ್ತಿದ್ದದ್ದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಇಬ್ಬರು ಪತ್ರಕರ್ತರನ್ನು ಥಳಿಸಿ, ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!

ಶುಕ್ರವಾರ ಅಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮತ್ತು ಬಿಜೆಪಿ ಹಾಗೂ ಆರೆಸ್ಸೆಸ್ಸ್‌ ಕಾರ್ಯಕರ್ತನ ನಡುವೆ ಕಲ್ಲುತೂರಾಟ ಹಾಗೂ ಘರ್ಷನೆ ನಡೆದಿತ್ತು. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಸಿಆರ್ಪಿಎಫ್ ಅನ್ನು ನಿಯೋಜಿಸಲಾಗಿದೆ. ಅಲ್ಲದೆ ಸ್ಥಳಕ್ಕೆ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ರೈತರು ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಮತ್ತು ಅಲ್ಲಿಂದ ನಿರ್ಗಮಿಸಲು ಬೇರೆಯೆ ದಾರಿಯನ್ನು ಹಿಡಿಯುವಂತಾಗಿದೆ.

ನಿನ್ನೆಯ ಅಹಿತಕರ ಘಟನೆಗಳು ಇಂದು ಕೂಡಾ ಪುನರಾವರ್ತನೆಯಾಗುತ್ತಿದ್ದು, ಆದರೆ ರೈತರನ್ನು ಅದು ಎದೆಗುಂದಿಸಿಲ್ಲ. ಘಟನೆಯು ಪ್ರತಿಭಟನಾ ಸ್ಥಳದ ಮೊದಲ ಹಂತವಾದ ದೆಹಲಿಯ ಭಾಗದಲ್ಲಿ ಮಾತ್ರ ನಡೆಯುತ್ತಿದೆ. ಆದರೆ 99.9% ಪ್ರತಿಭಟನಾ ನಿರತ ರೈತರಿರುವ ಗಡಿಯ ಹರಿಯಾಣದ ಭಾಗದಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಇದನ್ನೂ ಓದಿ: ದೆಹಲಿಯ ಗಡಿಗಳಲ್ಲಿ ಈಗ ಎಷ್ಟು ರೈತರು ನೆರೆದಿದ್ದಾರೆ ಗೊತ್ತೆ? ಮೂರು ಗಡಿಗಳ ಪ್ರಸ್ತುತ ಪರಿಸ್ಥಿತಿಯ ವಿವರ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...