HomeಮುಖಪುಟFact-check : ವರ್ಗಾವಣೆಯಾದ ನ್ಯಾ.ಎಸ್ ಮುರಳೀಧರ್ ಕಾಂಗ್ರೆಸ್ ಸಮರ್ಥಕರೆ?

Fact-check : ವರ್ಗಾವಣೆಯಾದ ನ್ಯಾ.ಎಸ್ ಮುರಳೀಧರ್ ಕಾಂಗ್ರೆಸ್ ಸಮರ್ಥಕರೆ?

- Advertisement -
- Advertisement -

ದೆಹಲಿಯಲ್ಲಿ ಭಾರೀ ಹಿಂಸಾಚಾರ ನಡೆಯಿತು. 40ಕ್ಕೂ ಹೆಚ್ಚು ಜನ ಬಲಿಯಾಗಿ 500ರಷ್ಟು ಜನ ಗಾಯಗೊಂಡು ಕೋಟ್ಯಾಂತರ ರೂಗಳ ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಯಿತು. ಅದಕ್ಕೂ ಮುನ್ನ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಎಂಬ ವ್ಯಕ್ತಿ ಸಿಎಎ ವಿರೋಧಿ ಹೋರಾಟಗಾರರನ್ನು ಎತ್ತಂಗಡಿ ಮಾಡದಿದ್ದರೆ ನಾವು ಬೀದಿಗಿಳಿಯುತ್ತೇವೆ ಎಂದು ಪೊಲೀಸರ ಎದುರೇ ಬೆದರಿಕೆ ಹಾಕಿದ್ದ. ಅದಕ್ಕೂ ಮುಂಚೆ ಅನುರಾಗ್ ಠಾಕೂರ್ ಎಂಬ ಬಿಜೆಪಿ ಸಂಸದ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಸಾರ್ವಜನಿಕ ವೇದಿಕೆಯಲ್ಲಿ ಘೋಷಣೆ ಕೂಗಿದ್ದ. ಅದರ ವಿಡಿಯೋ ನೋಡಿ

ದೆಹಲಿ ಹಿಂಸಾಚಾರದ ಗಾಯಾಳುಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲು ಪೊಲೀಸರು ರಕ್ಷಣೆ ನೀಡುತ್ತಿಲ್ಲ ಎಂದು ವಕೀಲರೊಬ್ಬರು ನ್ಯಾಯಾಧೀಶರಿಗೆ ಕರೆ ಮಾಡಿ ಮನವಿ ಮಾಡಿದರು. ತಡರಾತ್ರಿ ವಿಚಾರಣೆ ನಡೆಸಿದ ನ್ಯಾ.ಎಸ್ ಮುರಳೀಧರ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ರಕ್ಷಣೆ ನೀಡಲು ಆದೇಶಿಸಿದರು.

ಇನ್ನು ಹಿಂಸಾಚಾರ ಪ್ರಕರಣಕ್ಕೆ ಕಾರಣವೇನೆಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂತು. ಆಗ ನ್ಯಾ.ಮುರಳೀಧರ್ ಆ ದ್ವೇಷ ಭಾಷಣದ ವಿಡಿಯೋಗಳನ್ನು ಕೋರ್ಟ್‌ನಲ್ಲಿ ಪ್ರಸಾರ ಮಾಡಿ ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಸೇರಿದಂತೆ ನಾಲ್ಕು ಜನರ ಮೇಲೆ ಎಫ್‌ಐಆರ್ ಹಾಕಬೇಕೆಂದು ತಾಕೀತು ಮಾಡಿದರು. ಆ ನ್ಯಾಯಮೂರ್ತಿಗಳ ಪರವಾಗಿ ಹಲವು ಪತ್ರಿಕೆಗಳು ವರಿದಿ ಮಾಡಿದರು. ಬಹಳಷ್ಟು ಜನ ಅವರ ಧೈರ್ಯ ಮತ್ತು ನ್ಯಾಯವಂತಿಕೆಯನ್ನು ಮೆಚ್ಚಿಕೊಂಡರು.

ಇದನ್ನೂ ಓದಿ: ಬಿಜಿಪಿ ನಾಯಕರ ವಿರುದ್ಧ FIR ದಾಖಲಿಸಲು ದೆಹಲಿ ಹೈಕೋರ್ಟ್ ಆದೇಶ

ಅದಾದ ಒಂದು ದಿನಕ್ಕೆ ಆ ನ್ಯಾಯಮೂರ್ತಿಯನ್ನು ದೆಹಲಿಯಿಂದ ಪಂಜಾಬ್ – ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಯಿತು.

ಅಷ್ಟೇ ಅಲ್ಲದೇ ಅವರು ಕಾಂಗ್ರೆಸ್ ಪಕ್ಷದ ಸಮರ್ಥಕರು, ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಅವರ ಜೊತೆಗಿದ್ದರು. ಹಾಗಾಗಿಯೇ ಅವರು ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಕ್ರಮ ತೆಗೆದುಕೊಳ್ಳೂವ ಬದಲು ಬಿಜೆಪಿ ಮುಖಂಡರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಹರಿಬಿಡಲಾಯಿತು.

ಈ ಕುರಿತು ಫ್ಯಾಕ್ಟ್ಚೆಕ್ ನಡೆಸಿದಾಗ ನ್ಯಾ.ಮುರಳೀಧರ್ ಕಾಂಗ್ರೆಸ್ ಬೆಂಬಲಿಗರಲ್ಲ, ಸ್ವತಂತ್ರ ನ್ಯಾಯಾಧೀಶರು ಎಂಬುದು ಸ್ಪಷ್ಟವಾಗಿದೆ. ಜೊತೆಗೆ ಸೋನಿಯಾ ಗಾಂಧಿ ಜೊತೆಗೆ ನಾಮಪತ್ರ ಸಲ್ಲಿಸುವಾಗ ಇದ್ದವರು ಕೆ.ಸಿ ಕೌಶಿಕ್ ಎಂಬುವರು ಸೋನಿಯಾರವರ ವಕೀಲರೇ ಹೊರತು ಮುರಳೀಧರ್ ಅಲ್ಲ ಎಂಬುದು ತಿಳಿದುಬಂದಿದೆ.

ಈ ಕುರಿತು ಯೂತ್‌ ಕಾಂಗ್ರೆಸ್‌ ಈ ಹಿಂದೆಯೇ ಹಲವಾರು ಫೋಟೊಗಳನ್ನು ಹಂಚಿಕೊಂಡಿದೆ.

ಆಲ್ಟ್‌ ನ್ಯೂಸ್‌ ಈ ಕುರಿತು ಸಮಗ್ರ ವರದಿ ಮಾಡಿದ್ದು ಮುರಳೀಧರ್‌ ಅಲ್ಲ ಅವರು ಕೌಶಿಕ್‌ ಎಂದು ಸ್ಪಷ್ಟಪಡಿಸಿದೆ. ಆ ಫೋಟೊ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...