Homeಮುಖಪುಟ''ಪ್ರಧಾನಿ ಪದವಿ ನಕಲಿಯೇ?'': ಮೋದಿ ಶೈಕ್ಷಣಿಕ ದಾಖಲೆ ಕುರಿತು ಮತ್ತೆ ಪ್ರಶ್ನಿಸಿದ ಕೇಜ್ರಿವಾಲ್

”ಪ್ರಧಾನಿ ಪದವಿ ನಕಲಿಯೇ?”: ಮೋದಿ ಶೈಕ್ಷಣಿಕ ದಾಖಲೆ ಕುರಿತು ಮತ್ತೆ ಪ್ರಶ್ನಿಸಿದ ಕೇಜ್ರಿವಾಲ್

- Advertisement -
- Advertisement -

ಶುಕ್ರವಾರ ಗುಜರಾತ್ ಕೋರ್ಟ್ ಅವರ ವಿರುದ್ಧ 25,000 ದಂಡ ವಿಧಿಸಿದ ಒಂದು ದಿನದ ನಂತರ ಅಂದರೆ ಏಪ್ರಿಲ್ 1ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರ ಶಿಕ್ಷಣ ಅರ್ಹತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಪದವಿಯ ಬಗ್ಗೆ ಅನುಮಾನವನ್ನು ಹೆಚ್ಚಿಸಿದೆ. ”ಪ್ರಧಾನಿ ಪದವಿ ನಕಲಿಯೇ?” ಎಂದು ಎಂದು ಕೇಜ್ರಿವಾಲ್ ಅವರು ಕೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಅವರು, ”ಪ್ರಧಾನಿ ಶಿಕ್ಷಣ ಪಡೆಯುವುದು ಮುಖ್ಯ ಏಕೆಂದರೆ ಅವರು ಒಂದೇ ದಿನದಲ್ಲಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಪದವಿಯ ಬಗ್ಗೆ ಅನುಮಾನವನ್ನು ಹೆಚ್ಚಿಸಿದೆ. ಅವರು ಪದವಿ ಹೊಂದಿದ್ದು ನಿಜವಾಗಿದ್ದರೆ, ಅದನ್ನು ಏಕೆ ತೋರಿಸುತ್ತಿಲ್ಲ?” ಎಂದು ಪ್ರಶ್ನೆ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ಹೈಕೋರ್ಟ್ ತೀರ್ಪಿನ ನಂತರ ಟ್ವೀಟ್ ಮಾಡಿದ್ದು, ”ದೇಶಕ್ಕೆ ತಮ್ಮ ಪ್ರಧಾನಿ ಎಷ್ಟು ವಿದ್ಯಾವಂತರು ಎಂದು ತಿಳಿದುಕೊಳ್ಳುವ ಹಕ್ಕಿದೆಯೇ? ಪದವಿಯನ್ನು ನ್ಯಾಯಾಲಯದಲ್ಲಿ ತೋರಿಸುವುದನ್ನು ಅವರು ತೀವ್ರವಾಗಿ ವಿರೋಧಿಸಿದರು ಏಕೆ? ಮತ್ತು ಅವರ ಪದವಿಯನ್ನು ನೋಡಲು ಬೇಡಿಕೆಯಿರುವವರಿಗೆ ದಂಡ ವಿಧಿಸಲಾಗುತ್ತದೆಯೇ? ಏನಾಗುತ್ತಿದೆ? ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಪದವಿ ಪ್ರಮಾಣಪತ್ರ ಒದಗಿಸುವ ಅಗತ್ಯವಿಲ್ಲ: ಕೇಜ್ರಿವಾಲ್‌ಗೆ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಮಾರ್ಚ್ 31 ರಂದು, ಪ್ರಧಾನಿ ಮೋದಿಯವರ ಶೈಕ್ಷಣಿಕ ಪದವಿಗಳ ಬಗ್ಗೆ ಮಾಹಿತಿ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ದೆಹಲಿ ಸಿಎಂ ವಿರುದ್ಧ ಗುಜರಾತ್ ನ್ಯಾಯಾಲಯವು ₹ 25,000 ದಂಡವನ್ನು ವಿಧಿಸಿತು. ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಜಿಎಸ್ಎಲ್ಎಸ್ಎ) ನಾಲ್ಕು ವಾರಗಳಲ್ಲಿ ಮೊತ್ತವನ್ನು ಠೇವಣಿ ಮಾಡುವಂತೆ ಹೇಳಿದರು.

ಸಂಬಂಧಿತ ವಿಶ್ವವಿದ್ಯಾನಿಲಯಗಳಿಂದ ಡೇಟಾವನ್ನು ಒದಗಿಸುವಂತೆ ಮುಖ್ಯ ಮಾಹಿತಿ ಆಯೋಗದ ಹಿಂದಿನ ಆದೇಶವನ್ನು ಏಕಸದಸ್ಯ ಪೀಠವು ರದ್ದುಗೊಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read