Homeಮುಖಪುಟಇಸ್ರೇಲ್-ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಪ್ರತಿಭಟನೆಯಲ್ಲಿ 100-300 ಜನ ಸಾವು

ಇಸ್ರೇಲ್-ಹಮಾಸ್ ಯುದ್ಧ: ಗಾಜಾ ಆಸ್ಪತ್ರೆಯ ಪ್ರತಿಭಟನೆಯಲ್ಲಿ 100-300 ಜನ ಸಾವು

- Advertisement -
- Advertisement -

ಗಾಜಾ ಆಸ್ಪತ್ರೆಯ ದಾಳಿಯ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ 100 ರಿಂದ 300 ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅಮೆರಿಕ ಗುಪ್ತಚರವು ಅಂದಾಜಿಸಿದೆ.

”ಈ ಘಟನೆಯಲ್ಲಿನ ಸಾವುನೋವುಗಳ ಅಂಕಿಅಂಶಗಳನ್ನು ನಿರ್ಣಯಿಸುತ್ತಿದ್ದೇವೆ ಮತ್ತು ನಮ್ಮ ಸಾವುಗಳ ಸಂಖ್ಯೆ ಹೆಚ್ಚಾಗು ಸಾಧ್ಯತೆ ಇದೆ. ಈ ಸಾವಿನ ಸಂಖ್ಯೆಯು ಇನ್ನೂ ದಿಗ್ಭ್ರಮೆಗೊಳಿಸುವಂತೆ ತೋರುತ್ತಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು, ಇಸ್ರೇಲ್‌ಗೆ ಬಂದಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಇದೀಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ರಹಸ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ಈಗಾಗಲೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದು, ಇದೇ ಸಮಯದಲ್ಲಿ ದಿಢೀರ್ ಇಸ್ರೇಲ್‌ಗೆ ಸುನಕ್ ವಿಸಿಟ್ ಕೊಟ್ಟಿದ್ದಾರೆ.

ಅಮೆರಿಕ ಮತ್ತು ಬ್ರಿಟನ್ ಈಗ ನೇರವಾಗಿ ಇಸ್ರೇಲ್ ಪರ ನಿಲ್ಲುವ ಸೂಚನೆ ನೀಡಿವೆ. ಹಾಗೇ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಗಾಜಾದ ನಾಗರಿಕರಿಗೂ ಮಾನವೀಯ ನೆರವು ಒದಗಿಸುವುದೂ ಮುಖ್ಯ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಚರ್ಚೆ ಮಧ್ಯೆ ಇದೀಗ ದಿಢೀರ್ ಸುನಕ್ ಇಸ್ರೇಲ್ ನೆಲಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಬುಧವಾರ ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಮಾಡಿದೆ ಎಂದು ವರದಿಯಾಗಿತ್ತು. ಈ ಆಸ್ಪತ್ರೆಯಲ್ಲಿ ಸಾವಿರಾರು ನಾಗರಿಕರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ದಾಳಿಯ ಪರಿಣಾಮ ನಿರಾಶ್ರಿತರೂ ಆಸ್ಪತ್ರೆಯಲ್ಲಿ ಆಶ್ರಯ ಪಡೆಯುತ್ತಿದ್ದರು ಎನ್ನಲಾಗಿದೆ.

ಬಾಂಬ್ ದಾಳಿಯಿಂದಾಗಿ ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವ ಸಂಸ್ಥೆ ನಡೆಸುತ್ತಿದ್ದ ಶಾಲೆಯಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರ ಮೇಲೂ ದಾಳಿ ನಡೆಸಲಾಗಿದೆ.

ಅಕ್ಟೋಬರ್ 7ರಂದು ಹಮಾಸ್ ಗುಂಪು ನಡೆಸಿದ ದಾಳಿಯಿಂದ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 3,785 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಮತ್ತು 12,493 ಮಂದಿ ಗಾಯಗೊಂಡಿದ್ದಾರೆ ಎಂದು ಯುದ್ಧ-ಹಾನಿಗೊಳಗಾದ ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಗಾಝಾ ಆಸ್ಪತ್ರೆಯ ಮೇಲೆ ಇಸ್ರೇಲ್ ಭೀಕರ ದಾಳಿ: 500ಕ್ಕೂ ಹೆಚ್ಚು ಜನರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read