Homeಮುಖಪುಟಇಸ್ರೇಲ್‌ಗೆ ಮಿಲಿಟರಿ ಸಹಾಯ ಮಾಡಿದ್ದಕ್ಕೆ ಅಸಮಾಧಾನ: ಅಮೆರಿಕಾದಲ್ಲಿ ಅಧಿಕಾರಿ ರಾಜೀನಾಮೆ

ಇಸ್ರೇಲ್‌ಗೆ ಮಿಲಿಟರಿ ಸಹಾಯ ಮಾಡಿದ್ದಕ್ಕೆ ಅಸಮಾಧಾನ: ಅಮೆರಿಕಾದಲ್ಲಿ ಅಧಿಕಾರಿ ರಾಜೀನಾಮೆ

- Advertisement -
- Advertisement -

ಇಸ್ರೇಲ್‌ಗೆ ಮಿಲಿಟರಿ ಸಹಾಯವನ್ನು ಹೆಚ್ಚಿಸುವ ಅಮೆರಿಕಾದ ನಿರ್ಧಾರವನ್ನು ಖಂಡಿಸಿ US ರಾಜ್ಯ ಇಲಾಖೆಯ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದು, ಇಸ್ರೇಲ್‌ಗೆ ಯುಎಸ್‌ ಬೆಂಬಲಿಸುವುದರಿಂದ ಹೆಚ್ಚು ಸಾವು ನೋವುಗಳು ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಸ್ಟೇಟ್ ಡಿಪಾರ್ಟ್ಮೆಂಟ್ ಬ್ಯೂರೋ ಆಫ್ ಪೊಲಿಟಿಕಲ್-ಮಿಲಿಟರಿ ಅಫೇರ್ಸ್‌ನ ನಿರ್ದೇಶಕ ಜೋಶ್ ಪಾಲ್ ಅವರು ರಾಜ್ಯ ಇಲಾಖೆಗೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಅಮೆರಿಕಾ ದಶಕಗಳಿಂದ ಮಾಡುತ್ತಿದ್ದ ಅದೇ ತಪ್ಪುಗಳನ್ನು ಪುನರಾವರ್ತಿಸುತ್ತಿದೆ ಎಂದು ಹೇಳಿದ್ದಾರೆ.

ಅಮೆರಿಕಾದ ಬೆಂಬಲದೊಂದಿಗೆ ಇಸ್ರೇಲ್ ನೀಡುವ ಪ್ರತಿಕ್ರಿಯೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಜನರ ಹೆಚ್ಚು ಮತ್ತು ಆಳವಾದ ದುಃಖಕ್ಕೆ ಕಾರಣವಾಗುತ್ತದೆ. ಈ ಹಿಂದೆ ನಾವು ಮಾಡಿದ ಅದೇ ತಪ್ಪುಗಳನ್ನು ನಾವು ಪುನರಾವರ್ತಿಸುತ್ತಿದ್ದೇವೆ ಎಂದು ನಾನು ಭಯಪಡುತ್ತೇನೆ ಮತ್ತು ದೀರ್ಘಕಾಲದವರೆಗೆ ಅದರ ಭಾಗವಾಗಿರಲು ನಾನು ನಿರಾಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಡೆನ್ ಆಡಳಿತವು ಕಣ್ಣು ಮುಚ್ಚಿಕೊಂಡು ಒಂದು ಬದಿಗೆ ಮಾತ್ರ ಬೆಂಬಲ ನೀಡುತ್ತಿದೆ. ಇದು ವಿನಾಶಕಾರಿ, ಅನ್ಯಾಯ ಮತ್ತು ನಾವು ಸಾರ್ವಜನಿಕವಾಗಿ ಪ್ರತಿಪಾದಿಸುವ ಮೌಲ್ಯಗಳಿಗೆ ವಿರುದ್ಧವಾದವು ಎಂದು ಹೇಳಿದ್ದಾರೆ.

11 ವರ್ಷಗಳಿಗೂ ಹೆಚ್ಚು ಕಾಲ US ಮಿತ್ರರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ ಪಾಲ್ ಇದೇ ವೇಳೆ ಹೇಳಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ರಾಕೆಟ್ ದಾಳಿ ನಡೆಸಿದ ಬಳಿಕ ಅಮೆರಿಕಾ ಇಸ್ರೇಲ್‌ಗೆ ಬೆಂಬಲ ಸೂಚಿಸಿತ್ತು. ಇಸ್ರೇಲ್‌ಗೆ ಅಮೆರಿಕಾ ಯುದ್ದಕ್ಕೆ ನೆರವು ಕೂಡ ನೀಡಿದ್ದು, ಶಸ್ತ್ರಾಸ್ತ್ರಗಳು ಅಥವಾ ಮಿಲಿಟರಿ ಉಪಕರಣಗಳನ್ನು ಹೊತ್ತ  ಯುದ್ಧ ವಿಮಾನವನ್ನು ಕಳುಹಿಸಿಕೊಟ್ಟಿತ್ತು. ಇದರ ಬೆನ್ನಲ್ಲೆ ಅಮೆರಿಕಾಗೆ ದೂರ ಉಳಿಯುವಂತೆ ರಷ್ಯಾ ಕೂಡ ಎಚ್ಚರಿಕೆಯನ್ನು ನೀಡಿತ್ತು.

ಇದನ್ನು ಓದಿ: ಯುದ್ಧದ ವಿರುದ್ಧ ಪ್ರತಿಭಟಿಸಿದರೆ ಬಸ್‌ಗಳಲ್ಲಿ ತುಂಬಿ ಗಾಝಾಕ್ಕೆ ಕಳುಹಿಸುತ್ತೇವೆ: ಇಸ್ರೇಲ್ ಪ್ರಜೆಗಳಿಗೆ ವಾರ್ನಿಂಗ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read