Homeಮುಖಪುಟಗಾಝಾ ಮೇಲಿನ ಇಸ್ರೇಲ್ ಆಕ್ರಮಣಕ್ಕೆ 6 ತಿಂಗಳು: 33 ಸಾವಿರ ದಾಟಿದ ಸಾವಿನ ಸಂಖ್ಯೆ

ಗಾಝಾ ಮೇಲಿನ ಇಸ್ರೇಲ್ ಆಕ್ರಮಣಕ್ಕೆ 6 ತಿಂಗಳು: 33 ಸಾವಿರ ದಾಟಿದ ಸಾವಿನ ಸಂಖ್ಯೆ

- Advertisement -
- Advertisement -

ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಪ್ರಾರಂಭಗೊಂಡು ಆರು ತಿಂಗಳು ತುಂಬಿದ್ದು, ಗಾಝಾದಲ್ಲಿ ಸಾವಿನ ಸಂಖ್ಯೆ 33 ಸಾವಿರ ದಾಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಗಾಝಾ ಮೇಲೆ ಇಸ್ರೇಲ್ ಆಕ್ರಮಣ ನಡೆಸಲು ಪ್ರಾರಂಭಿಸಿ ಅರ್ಧ ವರ್ಷ ಪೂರ್ಣಗೊಂಡರೂ, ಯುದ್ದ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಪ್ರತಿ ದಿನವೂ ಗಾಝಾದಲ್ಲಿ ಕಟ್ಟಡಗಳು ಉರುಳುವುದು ನೂರಾರು ಜನರು ಸಾವನ್ನಪ್ಪುವುದು ಮುಂದುವರೆಯುತ್ತಲೇ ಇದೆ.

ಇಸ್ರೇಲ್ ಸೇನೆ ಹಮಾಸ್ ಹೆಸರೇಳಿಕೊಂಡು ಗಾಝಾದ ಮೇಲೆ ಮನ ಬಂದಂತೆ ಮಿಸೈಲ್ ದಾಳಿ, ಯುದ್ಧ ಟ್ಯಾಂಕರ್‌ಗಳ ಮೂಲಕ ದಾಳಿ, ಕಂಡ ಕಂಡಲ್ಲಿ ಮನುಷ್ಯರನ್ನು ಗುಂಡಿಟ್ಟು ಕೊಲ್ಲುವ ಮೂಲಕ ಅಕ್ಷರಶಃ ನರಕವನ್ನಾಗಿಸಿದೆ.

ಗಾಝಾದ ಲಕ್ಷಾಂತರ ನಾಗರಿಕರು ತಮ್ಮದೆಲ್ಲವನ್ನು ಬಿಟ್ಟು ದೂರದ ಊರುಗಳಿಗೆ ಪಲಾಯಣ ಮಾಡಿದ್ದಾರೆ. ಆದರೆ, ಅಲ್ಲಿಯೂ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ. ಉತ್ತರ ಗಾಝಾದಲ್ಲಿ ಲಕ್ಷಾಂತರ ಜನರು ಹಸಿವಿನಿಂದ ನರಳುತ್ತಿದ್ದಾರೆ. ಒಂದೆಡೆ ಬರಗಾಲ ಮತ್ತೊಂದೆಡೆ ಆಹಾರದ ಕೊರತೆ ಜನರನ್ನು ನರಳುವಂತೆ ಮಾಡಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಗಾಝಾದ ದಕ್ಷಿಣದ ನಗರದಲ್ಲಿ ಮಕ್ಕಳು, ಮಹಿಳೆಯರು, ವೃದ್ದರೂ ಎನ್ನದೆ ಎಲ್ಲಾ ವರ್ಗದ ಜನರು ಆಹಾರಕ್ಕಾಗಿ ಪಾತ್ರೆ ಹಿಡಿದು ನಿಂತಿರುವ ದೃಶ್ಯಗಳು ಕಾಣುತ್ತಿವೆ. ರಫಾ ನಗರದಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಟೆಂಟ್‌ಗಳು ತುಂಬಿವೆ. ಗಾಝಾದ ಇತರ ಭಾಗಗಳಲ್ಲಿ ಇಸ್ರೇಲ್‌ನ ಆಕ್ರಮಣದಿಂದ ಪಲಾಯನ ಮಾಡಿದ ಲಕ್ಷಾಂತರ ಪ್ಯಾಲೆಸ್ತೀನಿಯರು ತುಂಬಿದ್ದಾರೆ. ರಫಾ ನಗರದಲ್ಲಿ ನಿರಾಶ್ರಿತ ಆಗಮನದಿಂದ ಜನಸಂಖ್ಯೆ ಸುಮಾರು 1.4 ಮಿಲಿಯನ್‌ಗೆ ತಲುಪಿದೆ. ಇದು ಅಲ್ಲಿನ ಸಾಮಾನ್ಯ ಜನಸಂಖ್ಯೆಗಿಂತ ಐದು ಪಟ್ಟು ಹೆಚ್ಚು ಎಂದು ಹೇಳಲಾಗ್ತಿದೆ.

ಆರು ತಿಂಗಳು ಕಳೆದರೂ ಇನ್ನೂ ಇಸ್ರೇಲ್ ಆಕ್ರಮಣ ಯಾವ ದಿಕ್ಕಿದೆ ಮುಂದುವರೆಯಿಲಿದೆ ಎಂದು ಗೊತ್ತಾಗುತ್ತಿಲ್ಲ. ವಿಶ್ವ ಸಂಸ್ಥೆಯ ಭದ್ರತಾ ಸಮಿತಿ, ಮಾನವ ಹಕ್ಕುಗಳ ಸಮಿತಿಯಲ್ಲಿ ಹಲವು ಬಾರಿ ತಕ್ಷಣ ಕದನ ವಿರಾಮಕ್ಕೆ ನಿರ್ಣಯ ಅಂಗೀಕರಿಸಿದರೂ ಯಾವುದೇ ಪರಿಣಾಮ ಬೀರಿಲ್ಲ. ಹಮಾಸ್ ಮತ್ತು ಇಸ್ರೇಲ್ ನಡುವೆ ಯುಎಸ್‌ಎಸ್‌ಎ, ಈಜಿಪ್ಟ್, ಕತಾರ್ ಮಧ್ಯಸ್ಥಿಕೆ ನಡೆಸಿದರೂ, ಅದೂ ಫಲ ಕೊಟ್ಟಿಲ್ಲ. ಇಸ್ರೇಲ್ ತನ್ನ ಆಕ್ರಮಣವನ್ನು ರಫಾಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಅಲ್ಲಿನ ರಕ್ಷಣಾ ಸಚಿವ ಹೇಳಿದ್ದಾರೆ. ಹಾಗೇನಾದರು ಆದರೆ, ಸಾವು-ನೋವುಗಳ ಸಂಖ್ಯೆ ಹೆಚ್ಚಾಗಬಹುದು.

ಅಕ್ಟೋಬರ್ 7, 2023ರಂದು ಪ್ರಾರಂಭಗೊಂಡ ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ 6 ತಿಂಗಳ ಕಳೆದರೂ ಮುಂದುವರೆದಿದೆ. ಈ ಯುದ್ಧದಲ್ಲಿ ಇಸ್ರೇಲ್ ಮತ್ತು ಹಮಾಸ್‌ನ ಎಷ್ಟು ಜನರು ಬಲಿಯಾಗಿದ್ದಾರೆ ಗೊತ್ತಿಲ್ಲ. ಆದರೆ, 30 ಸಾವಿರದಷ್ಟು ಅಮಾಯಕ ನಾಗರಿಕರು ಮಾತ್ರ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಇಸ್ರೇಲ್‌ನ ಯಾವುದೇ ರಾಯಭಾರಿ ಕಚೇರಿಗಳು ಇನ್ನು ಸುರಕ್ಷಿತವಾಗಿರಲ್ಲ: ಪ್ರತಿಕಾರದ ಎಚ್ಚರಿಕೆ ನೀಡಿದ ಇರಾನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...