Homeಮುಖಪುಟಶ್ರೀಲಂಕಾದ ತಮಿಳು ಹಿಂದೂಗಳ ಬಗ್ಗೆ ನಿಲುವೇನು? ಸಿಎಎ ಕುರಿತ ಕೇಂದ್ರದ ಸಮರ್ಥನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಮುಸ್ಲಿಂ...

ಶ್ರೀಲಂಕಾದ ತಮಿಳು ಹಿಂದೂಗಳ ಬಗ್ಗೆ ನಿಲುವೇನು? ಸಿಎಎ ಕುರಿತ ಕೇಂದ್ರದ ಸಮರ್ಥನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಮುಸ್ಲಿಂ ಲೀಗ್

- Advertisement -
- Advertisement -

ನೆರೆಯ ದೇಶಗಳ ಕಿರುಕುಳಕ್ಕೆ ಹೆದರಿ ಪಲಾಯನ ಮಾಡಿದ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡಲು ಸಿಎಎ ಉದ್ದೇಶಿಸಿದೆ ಎಂದು ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಯನ್ನು ಭಾರತೀಯ ಯೂನಿಯನ್ ಮುಸ್ಲಿಂ ಲೀಗ್(IUML) ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಪ್ರಶ್ನಿಸಿದೆ.

ಏಪ್ರಿಲ್ 9ರಂದು ವಿಚಾರಣೆಗೆ ಮುಂಚಿತವಾಗಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ IUML, ಪಾಕಿಸ್ತಾನದ ಅಹ್ಮದೀಯರು, ಮ್ಯಾನ್ಮಾರ್‌ನ ಮುಸ್ಲಿಮರು, ಶ್ರೀಲಂಕಾದ ತಮಿಳು ಹಿಂದೂಗಳು, ಚೀನಾದ ಬೌದ್ಧರು ಏನು? ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರು ಅಲ್ಲವೇ? ಅವರು ಮೇಲೆ ಕಿರುಕುಳ ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ-2019ನ್ನು ಪ್ರಶ್ನಿಸಿ ಸಲ್ಲಿಸಿದ್ದ 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ, ಅರ್ಜಿಯಲ್ಲಿ ಸಿಎಎಗೆ ತಡೆ ಕೋರುವಂತೆ ಮನವಿ ಮಾಡಲಾಗಿತ್ತು.  ಪೌರತ್ವ ಕಾಯ್ದೆಯ ಪ್ರಕಾರ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಕ್ರಿಶ್ಚಿಯನ್ನರು, ಪಾರ್ಸಿಗಳು, ಸಿಖ್ಖರು ಮತ್ತು ಜೈನರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದಿದ್ದರೆ ಸಿಎಎ ಅಡಿಯಲ್ಲಿ ಪೌರತ್ವಕ್ಕೆ ಅರ್ಹರು. ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಕಾಯಿದೆ ಸಹಾಯ ಮಾಡುತ್ತದೆ ಎಂಬ ಕೇಂದ್ರದ ಹೇಳಿಕೆಯು “ಮೂಲಭೂತವಾಗಿ ದೋಷಪೂರಿತವಾಗಿದೆ” ಎಂದು IUML ಹೇಳಿದೆ.

ಸಿಎಎ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಗುರಿಯನ್ನು ಹೊಂದಿದೆ ಎಂಬ ಮೂಲಭೂತ ಪ್ರಸ್ತಾಪ ದೋಷ ಪೂರಿತವಾಗಿದೆ ಮತ್ತು ವಿವಿಧ ರೀತಿಯ ಕಿರುಕುಳಕ್ಕೊಳಗಾದ ಗುಂಪುಗಳ ಆಯ್ಕೆಯಲ್ಲಿ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ನಿರಾಶ್ರಿತರ ನೀತಿಯು, ನ್ಯಾಯೋಚಿತ, ಸಮಂಜಸ, ತಾರತಮ್ಯರಹಿತ ಮತ್ತು ಸಾರ್ವತ್ರಿಕ ನಿರಾಶ್ರಿತರ ನೀತಿಯಾಗಿರಬೇಕು, ನೀತಿಯಲ್ಲಿ ಗುಣಲಕ್ಷಣಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು. ಸಿಎಎಯಲ್ಲಿ ಉಭಯ ಪೌರತ್ವದ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಸಿಎಎ ಮತ್ತು ನಿಯಮಗಳಲ್ಲಿ ಅರ್ಜಿದಾರರು ತಮ್ಮ ಸ್ಥಳೀಯ ದೇಶದ ಪೌರತ್ವವನ್ನು ತ್ಯಜಿಸುವ ಅಗತ್ಯವಿಲ್ಲ. ಇದು ದ್ವಿಪೌರತ್ವದ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ:

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಜಾರಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಪೌರತ್ವ (ತಿದ್ದುಪಡಿ) ಮಸೂದೆ-2019ನ್ನು ಡಿಸೆಂಬರ್ 11, 2019ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯು ಪೌರತ್ವ ಕಾಯ್ದೆ-1955ನ್ನು ತಿದ್ದುಪಡಿ ಮಾಡಿದೆ. ಧರ್ಮದ ಆಧಾರದಲ್ಲಿ ವಿದೇಶಿ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಿದ್ದು, ಇದು ವ್ಯಾಪಕವಾದ ವಿರೋಧಕ್ಕೆ ಕಾರಣವಾಗಿತ್ತು.

ಪೌರತ್ವ (ತಿದ್ದುಪಡಿ) ಮಸೂದೆ-2019ರಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರು ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರು ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಅವರಿಗೆ ಪೌರತ್ವವನ್ನು ನೀಡಬಹುದು. ಕಾಯಿದೆಯ ಮೂರನೇ ಶೆಡ್ಯೂಲ್‌ನ ಸೆಕ್ಷನ್ 5ರ ಅಡಿಯಲ್ಲಿನ ಷರತ್ತುಗಳಿಗೆ ಸಮ್ಮತಿಸಿದರೆ ಒಬ್ಬ ವ್ಯಕ್ತಿಗೆ ನೋಂದಣಿ ಪ್ರಮಾಣಪತ್ರ ನೀಡಬಹುದು. ಇದಲ್ಲದೆ ಆ ವ್ಯಕ್ತಿ ಭಾರತದಲ್ಲಿ ಕಡ್ಡಾಯವಾಗಿ ನೆಲೆಸಿದವನಾಗಿರಬೇಕಾಗಿರುವ ವರ್ಷಗಳ ಸಂಖ್ಯೆಯನ್ನು 11 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿತ್ತು.

ಇದನ್ನು ಓದಿ: ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು, ಲಾಡೆನ್ ಅಹಿಂಸೆ ಬಗ್ಗೆ ಮಾತನಾಡಿದಂತೆ: ಸಂಜಯ್‌ ಸಿಂಗ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...