Homeಮುಖಪುಟಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು, ಲಾಡೆನ್ ಅಹಿಂಸೆ ಬಗ್ಗೆ ಮಾತನಾಡಿದಂತೆ: ಸಂಜಯ್‌ ಸಿಂಗ್‌

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು, ಲಾಡೆನ್ ಅಹಿಂಸೆ ಬಗ್ಗೆ ಮಾತನಾಡಿದಂತೆ: ಸಂಜಯ್‌ ಸಿಂಗ್‌

- Advertisement -
- Advertisement -

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಮತ್ತು ಬಿನ್ ಲಾಡೆನ್ ಅಹಿಂಸೆ ಬಗ್ಗೆ ಮಾತನಾಡುವುದು ಎರಡೂ ಒಂದೇ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು, ಮಾಜಿ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಹಿಂಸೆಯ ಬಗ್ಗೆ ಮಾತನಾಡಿದಂತೆ. ಬಿಜೆಪಿ ಭ್ರಷ್ಟ ಪಕ್ಷವಾಗಿದೆ. ಜನಾರ್ದನ ರೆಡ್ಡಿ, ಅಜಿತ್ ಪವಾರ್, ಛಗನ್ ಭುಜಬಲ್, ನಾರಾಯಣ ರಾಣೆ, ಮುಕುಲ್ ರಾಯ್ ಮತ್ತು ಸುಭೇಂದು ಅಧಿಕಾರಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದು ಅವರು ಬಿಜೆಪಿ ಪಕ್ಷದ ನಾಯಕರು ಎಂದು ಹೇಳಿದ್ದಾರೆ. ನಾನು ಎಷ್ಟು ಹೆಸರುಗಳನ್ನು ಎಣಿಸಬೇಕೆಂದು ನೀವು ಬಯಸುತ್ತೀರಿ? ಭ್ರಷ್ಟ ನಾಯಕರ ಪಟ್ಟಿ ಮಾಡಿದರೆ ಎಲ್ಲರೂ ಈಗ ಬಿಜೆಪಿಯಲ್ಲಿರುವುದು ಕಂಡು ಬರುತ್ತದೆ ಎಂದು ಸಂಜಯ್ ಸಿಂಗ್‌ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಎಎಪಿ ಏಪ್ರಿಲ್ 7ರಂದು ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹವನ್ನು ನಡೆಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಎಪಿಗೆ ಕೇಜ್ರಿವಾಲ್ ಬಂಧನವು ದೊಡ್ಡ ವಿಷಯವಾಗಿದೆ. ಜೈಲಿನಿಂದ ಸರ್ಕಾರವನ್ನು ನಡೆಸುತ್ತಿರುವ ಕೇಜ್ರಿವಾಲ್ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿದ್ದಾರೆ, ಮಣಿಪುರ ಸುಮಾರು ಒಂದು ವರ್ಷದಿಂದ ಜನಾಂಗೀಯ ಹಿಂಸಾಚಾರದಲ್ಲಿ ಸಿಲುಕಿದೆ. ಕೇಸರಿ ಪಕ್ಷವು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅಥವಾ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರಿಂದ ರಾಜೀನಾಮೆ ಕೇಳಿದೆಯೇ ಎಂದು ಸಿಂಗ್ ಕೇಳಿದ್ದಾರೆ.

ನಿನ್ನೆ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ಕೇಜ್ರಿವಾಲ್ ವಿರುದ್ಧ ಬಿಜೆಪಿ ಹೇಗೆ ಸುಳ್ಳು ಕೇಸ್ ಹಾಕಿ ಜೈಲಿಗೆ ತಳ್ಳಿದೆ ಎಂಬುವುದನ್ನು ಬಯಲಿಗೆಳೆಯುವುದು ಈ ಪ್ರತಿಭಟನೆಯ ಏಕೈಕ ಉದ್ದೇಶವಾಗಿತ್ತು. ವಾಸ್ತವದಲ್ಲಿ ಮದ್ಯದ ಹಗರಣದ ಹಿಂದೆ ಬಿಜೆಪಿಯ ಕೈವಾಡವಿದೆ. AAPಯನ್ನು ಲಿಂಕ್ ಮಾಡುವ ಯಾವುದೇ ಹಣದ ಜಾಡು ಕಂಡುಬಂದಿಲ್ಲ. ಲಿಕ್ಕರ್ ಹಗರಣದಲ್ಲಿ ಕಿಂಗ್ ಪಿನ್ ಎನ್ನಲಾದ ಶರತ್ ರೆಡ್ಡಿಯಿಂದ ಬಿಜೆಪಿ 55 ಕೋಟಿ ರೂ. ಪಡೆದುಕೊಂಡಿದೆ. ಇದು ಆರಂಭ ಮಾತ್ರ, ಬಿಜೆಪಿಯನ್ನು ಬಯಲಿಗೆಳೆಯಲು ಧರಣಿ, ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡೂ ಬೆದರಿಕೆಗಳನ್ನು ಎದುರಿಸುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಚುನಾಯಿತ ಸಿಎಂಗಳನ್ನು ಬಂಧಿಸುವ ರೀತಿ ನೋಡಿದಾಗ ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವುದು ಮನವರಿಕೆಯಾಗುತ್ತದೆ. ಸ್ವತಂತ್ರ ಭಾರತದಲ್ಲಿ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ ಎಂಬ ಅಂಶವನ್ನೂ ನಾವು ಎತ್ತಿ ತೋರಿಸುತ್ತೇವೆ. ಬಿಜೆಪಿ ಇಡೀ ದೇಶವನ್ನು ಅದಾನಿಗೆ ಒತ್ತೆ ಇಟ್ಟಿದೆ, ತನ್ನ ದೊಡ್ಡ ಉದ್ಯಮಿ ಸ್ನೇಹಿತರ ಸಾಲವನ್ನು ಮನ್ನಾ ಮಾಡಿದೆ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಇದನ್ನು ಓದಿ: ಗುಜರಾತ್‌: ನಮಾಝ್‌ ಮಾಡುತ್ತಿದ್ದಾಗ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ: ಹಾಸ್ಟೆಲ್‌ ಬಿಟ್ಟು ತೆರಳುವಂತೆ ಸಂತ್ರಸ್ತರಿಗೆ ಸೂಚನೆ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...