Homeಮುಖಪುಟಇಸ್ರೇಲ್ ಹಿಂಸಾಚಾರ: ಹಮಾಸ್‌ ಗುಂಪಿನ 150 ಸುರಂಗ ಮಾರ್ಗಗಳು ಧ್ವಂಸ

ಇಸ್ರೇಲ್ ಹಿಂಸಾಚಾರ: ಹಮಾಸ್‌ ಗುಂಪಿನ 150 ಸುರಂಗ ಮಾರ್ಗಗಳು ಧ್ವಂಸ

- Advertisement -
- Advertisement -

ಹಮಾಸ್‌ ಶಸಸ್ತ್ರ ಗುಂಪಿನ ಹಿಂಸಾಚಾರ ಮುಂದುವರೆಸಿರುವ ಇಸ್ರೇಲ್‌ ರಕ್ಷಣಾ ಪಡೆಯು ಉತ್ತರ ಗಾಜಾದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಒಂದು ಕಡೆ ಭೂ ದಾಳಿ ನಡೆಸಿದರೆ ಮತ್ತೊಂದು ಕಡೆ ವಾಯು ದಾಳಿಯ ಮೂಲಕ ಹಮಾಸ್‌ ಗುಂಪಿನ ಮೇಲೆ ಯುದ್ಧ ಆರಂಭಿಸಿದೆ.

ಶುಕ್ರವಾರ ರಾತ್ರಿಯಿಂದ ಗಾಜಾಪಟ್ಟಿ ಮೇಲೆ ವ್ಯಾಪಕ ದಾಳಿ ನಡೆಸಿರುವ ಇಸ್ರೇಲ್‌ ಸೇನಾಪಡೆ, ಬೃಹತ್‌ ಪ್ರಮಾಣದ ಬಾಂಬ್‌ ದಾಳಿಯಿಂದ ಗಾಜಾಪಟ್ಟಿಯಲ್ಲಿ ಇಂಟರ್ನೆಟ್‌, ಫೋನ್‌ ಸೇವೆಗಳು ಕಡಿತಗೊಂಡಿವೆ. 2.3 ಮಿಲಿಯನ್‌ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಇಸ್ರೇಲ್‌ ವಾಯುಸೇನೆಯ ಭೀಕರ ದಾಳಿಗೆ ಗಾಜಾ ಪಟ್ಟಣ ಪೂರ್ಣ ಪ್ರಮಾಣದಲ್ಲಿ ಅಯೋಮಯವಾಗಿದೆ.

ಉತ್ತರ ಗಾಜಾದಲ್ಲಿ ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ತೀವ್ರ ದಾಳಿಯಲ್ಲಿ ಹಮಾಸ್‌ ಗುಂಪಿನ ಸುಮಾರು 150 ಅಡಗುತಾಣಗಳು ಧ್ವಂಸಗೊಂಡಿವೆ. ಗಾಜಾದಲ್ಲಿನ ಸುರಂಗ ಮಾರ್ಗಗಳನ್ನು ನಾಶಪಡಿಸಿದ ಕುರಿತು ಇಸ್ರೇಲ್ ಸೇನೆ ಅಧಿಕೃತ ಮಾಹಿತಿ ನೀಡಿದೆ. ದಾಳಿಗೊಳಗಾದ ಪ್ರದೇಶಗಳಲ್ಲಿ ಹಮಾಸ್‌ ಗುಂಪಿನ ಸುರಂಗ ಅಡಗುದಾಣಗಳು, ಸುರಂಗ ಮಾರ್ಗಗಳು, ಭೂಗತ ಯುದ್ಧ ಸ್ಥಳಗಳು ಹಾಗೂ ಅವರ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಭಾನುವಾರ, ಗಾಜಾದಲ್ಲಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಕ್ಟೋಬರ್ 7 ರಿಂದ ಗಾಜಾದಲ್ಲಿ ಒಟ್ಟು ಸಾವಿನ ಸಂಖ್ಯೆ 8,005 ಜನರಿಗೆ ಏರಿದೆ ಎಂದು ಹೇಳಿದೆ. ಹಮಾಸ್ ನಡೆಸುತ್ತಿರುವ ಗಾಜಾದಲ್ಲಿನ ಆರೋಗ್ಯ ಸಚಿವಾಲಯವು ಇಸ್ರೇಲಿ ದಾಳಿಯಲ್ಲಿ 7,703 ಜನರು ಸಾವನ್ನಪ್ಪಿದ್ದಾರೆ, ಮುಖ್ಯವಾಗಿ ನಾಗರಿಕರು, 3,500 ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಹೇಳಿದ್ದಾರೆ.

ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧದ ಎರಡನೇ ಹಂತವನ್ನು ಇಸ್ರೇಲ್ ಪಡೆಗಳು ಪ್ರವೇಶಿಸಿವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಪ್ರಕಟಿಸಿದ್ದಾರೆ. ಶತ್ರುಗಳನ್ನು ‘ನೆಲದ ಕೆಳಗೆ ಹಾಗೂ ನೆಲದ ಮೇಲೆ’ ಎರಡೂ ಕಡೆಗಳಿಂದ ನಿರ್ಮೂಲನೆ ಮಾಡುವುದಾಗಿ ಶಪಥ ಮಾಡಿದ್ದಾರೆ. ಈ ಯುದ್ಧವು ಸುದೀರ್ಘ ಹಾಗೂ ಕ್ಲಿಷ್ಟಕರವಾಗಲಿದೆ ಎಂದಿರುವ ಅವರು, ಪರಿಸ್ಥಿತಿಯು ಇಸ್ರೇಲ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದಿದ್ದಾರೆ

ಇದನ್ನೂ ಓದಿ: ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ: UN ಜನರಲ್ ಅಸೆಂಬ್ಲಿಯಲ್ಲಿ ನಾಗರಿಕರ ರಕ್ಷಣೆಯ ಕುರಿತ ನಿರ್ಣಯ ಅಂಗೀಕಾರ: ದೂರ ಉಳಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...