Homeಕರ್ನಾಟಕಜನರಿಗೆ ಪ್ರಾಣಸಂಕಟ, ರಾಜಕಾರಣಿಗಳಿಗೆ ಮತಸಂಕಟ. ರೇಣುಕಾಚಾರ್ಯ ಮೇಲೆ ಮುಗಿಬಿದ್ದ ನೆಟ್ಟಿಗರು: ಟ್ರೋಲ್ ಆಯ್ತು ವಿಡಿಯೋ..

ಜನರಿಗೆ ಪ್ರಾಣಸಂಕಟ, ರಾಜಕಾರಣಿಗಳಿಗೆ ಮತಸಂಕಟ. ರೇಣುಕಾಚಾರ್ಯ ಮೇಲೆ ಮುಗಿಬಿದ್ದ ನೆಟ್ಟಿಗರು: ಟ್ರೋಲ್ ಆಯ್ತು ವಿಡಿಯೋ..

- Advertisement -
- Advertisement -

ಹೊನ್ನಾಳಿ ತಾಲ್ಲೂಕು ಬೇಲಿಮಲ್ಲೂರು ಗ್ರಾಮದ ತುಂಗಭದ್ರಾ ನದಿಪಾತ್ರಕ್ಕೆ ಜನಪ್ರತಿನಿದಿಗಳೊಡನೆ ಬೇಟಿ ನೀಡಿ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿದು ಗ್ರಾಮವೂ ನೀರಿನಿಂದ ಜಲಾವೃತವಾಗಿದ್ದು ಹರಿಗೋಲನ್ನು ಸ್ವತ:ನಡೆಸಿ ಪರಿಸ್ಥಿತಿ ಅವಲೋಕಿಸಿದ ಕ್ಷಣ ಗ್ರಾಮದಲ್ಲಿ..

ಇದು ಹೊನ್ನಾಳಿ ಶಾಸಕ ರೇಣುಕಾಚಾರ್ಯರವರು ಫೇಸ್ ಬುಕ್ ನಲ್ಲಿ ಹಾಕಿದ ಸ್ಟೇಟಸ್ ಮತ್ತು ವಿಡಿಯೋ. ಅದರಲ್ಲಿಯೇ ಕೊಚ್ಚಿಹೋಗುತ್ತಿದ್ದ ಜನರನ್ನು ರಕ್ಷಿಸಿದ ಶಾಸಕ.. ಹ್ಹ ಹ್ಹ ಎಂದು ಒಬ್ಬ ಹೇಳಿ ನಗುತ್ತಾನೆ. ಇನ್ನೊಬ್ಬ ತಗೊಳ್ಳಿ, ತಗೊಳ್ಳಿ, ಪೋಟೊ ತಗೊಳ್ಲಿ, ವಿಡಿಯೋ ಮಾಡಿಕೊಳ್ಳಿ ಎಂದು ಹೇಳುತ್ತಾನೆ. ಎಲ್ಲವೂ ವಿಡಿಯೋದಲ್ಲಿದೆ.

ವಿಡಿಯೋ ನೋಡಿದರನೇ ಕೇವಲ ಫೋಟೊ ಮತ್ತು ವಿಡಿಯೋ ಮಾಡಿಕೊಳ್ಳಲು ಮಾಡಿರುವ ನಾಟಕ ಎಂದು ಅರ್ಥವಾಗುವುದರಿಂದ ನೆಟ್ಟಿಗರು ಫುಲ್ ಟ್ರೋಲ್ ಮಾಡಿದ್ದಾರೆ.

ನಿಮ್ಮ ಯೋಗ್ಯತೆ ನಿಮ್ಮ ಜೊತೆ ಇರುವ ಜನಗಳು ಹೇಳ್ತಾ ಇದ್ದಾರೆ ರಕ್ಷಣೆ ಮಾಡಿಕೊಂಡು ಬಂದರು ಅಂತ ಗೊತ್ತಾಗಲಿ, ಈ ರೀತಿ ಬರಗೆಟ್ಟು ಬದುಕೋದಕ್ಕಿಂತ ಆ ನದಿಯಲ್ಲಿ ಬಿದ್ದು ಸಾಯುವುದು ಮೇಲು ಎಂದು ಸಂಶುದ್ದೀನ್ ಪ್ರತಿಕ್ರಿಯೆ ನೀಡಿದ್ದಾರೆ.

ಅಯ್ಯೋ ರಾಮಾ.. ಪೋಟೋ ಹಾಕಿದ್ರೆ ಸಾಕಿತ್ತು, ವಿಡಿಯೋ ಹಾಕಿ ಮರ್ಯಾದೆ ತೆಗಿತೀರಲ್ಲೋ. ಕರ್ಮವೇ ಎಂದು ರಾಜೇಶ್ ಶೃಂಗೇರಿ ಕಮೆಂಟ್ ಮಾಡಿದ್ದಾರೆ.

“ಭಾರತೀಯ ಜನತಾ ಪಾರ್ಟಿಗೆ ಅದರದೇ ಆದ ಗೌರವ ಮತ್ತು ಪಕ್ಷದ ಕಾರ್ಯಕರ್ತರು ಶಾಸಕರಿಗೆ ಗೌರವವಿದೆ ಈ ರೀತಿ ಹುಡುಗಾಟ ಆಡಬೇಡಿ ಮಾನ್ಯ ರೇಣುಕಾಚಾರ್ಯ ಜಿ” ಎಂದು ರವಿಗೌಡ ಕೆ.ಸಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಸಾಹಸವನ್ನು ಎಲ್ಲಾ ಕಾಮಿಡಿ ಮಾಡ್ತಾ ಇದಾರೆ ಸಾರ್ ಎಂದು ಸಿದ್ದು ಸಿದ್ದಾಪ್ಪಾಜಿ ಟಾಂಗ್ ಕೊಟ್ಟಿದ್ದಾರೆ.

ಥೂ…. ನಾಚಿಕೆ ಆಗಬೇಕು ನಿಮಗೆ…
ಕೇವಲ ಪಾದ ಮುಳುಗುವ ನೀರಿನಲ್ಲಿ ತೆಪ್ಪ ನಡೆಸಿ ವೀಡಿಯೊ ಚಿತ್ರೀಕರಣ ಮಾಡಿದ್ದೀರಲ್ಲಾ..
ನಿಮಗಾಗದಿದ್ದರೆ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಲಿ… ರಾತ್ರಿ ಹಗಲೆನ್ನದೆ ಕಾರ್ಯ ನಿರ್ವಹಿಸುತ್ತಿರುವ ಯಡಿಯೂರಪ್ಪನವರ ಮರ್ಯಾದೆ ತೆಗೀಬೇಡಿ ಎಂದು ಸತೀಶ್ ಡಿ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಪಕ್ಕದಲ್ಲಿ ಬೈಕ್ ಗಳು ಆರಾಮಾಗಿ ಹೋಗುತ್ತಿದೆ. ನೀವು ಯಾಕೆ ಅಷ್ಟೊಂದು ಶ್ರಮ ತಗೊತಿದ್ದೀರಿ? ಎಂದು ದೇವರಾಜು ಎನ್ ಪ್ರತಿಕ್ರಿಯಿಸಿದ್ದಾರೆ.

“ಜನರಿಗೆ ಪ್ರಾಣಸಂಕಟ ಆದರೆ ಇಂತಹ ರಾಜಕಾರಣಿಗಳಿಗೆ ಮತಸಂಕಟ” ಎಂದು ರಮೇಶ್ ರವರು ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...