Homeಕರ್ನಾಟಕಈಗ ಶಿವಮೊಗ್ಗಕ್ಕೆ ಪ್ರವಾಹ: ರಸ್ತೆಗಳ ತುಂಬಾ ನೀರು

ಈಗ ಶಿವಮೊಗ್ಗಕ್ಕೆ ಪ್ರವಾಹ: ರಸ್ತೆಗಳ ತುಂಬಾ ನೀರು

- Advertisement -
- Advertisement -

ಬೆಳಗಾವಿ ಬಾಗಲಕೋಟೆಗಳಲ್ಲಿ ಆರ್ಭಟಿಸುತ್ತಿದ್ದ ಪ್ರವಾಹ ಈಗ ಶಿವಮೊಗ್ಗಕ್ಕೂ ವಿಸ್ತರಿಸಿದೆ. ಶಿವಮೊಗ್ಗದ ರಸ್ತೆಗಳೆಲ್ಲಾ ನೀರು ನಿಂತಿದ್ದು ಮನೆಯಿಂದ ಯಾರು ಬರಬಾರದೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಇನ್ನು ಕೆಲವು ರಸ್ತೆಗಳಲ್ಲಿ ಪ್ರವಾಹದ ಕಾರಣಕ್ಕೆ ವಾಹನ ಸಂಚಾರ ನಿಷೇಧವಾಗಿದ್ದು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಅವುಗಳೆಂದರೆ

ತೂದೂರು ಗ್ರಾಮ ರಸ್ತೆಯಲ್ಲಿ ನೀರು ನಿಂತಿದ್ದು ಜೆಜ್ಜವಳ್ಳಿ-ಹಣಗರಕಟ್ಟೆ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಪಿಳ್ಳಂಗೆರೆ- ಹೊಳೆಹೊನ್ನೂರು ಸಂಚಾರ ಸ್ಥಗಿತಗೊಂಡಿದ್ದು, ಹೊಳಲೂರು ಮಾರ್ಗವಾಗಿ ಸಂಚರಿಸಬಹುದು.

ತೀರ್ಥಹಳ್ಳಿ-ರಂಜದಕಟ್ಟೆ ಸಂಚಾರ ನಿರ್ಬಂಧಿಸಲಾಗಿದ್ದು, ಎಡೆಹಳ್ಳಿ-ಕವಲೆದುರ್ಗ ಕ್ರಾಸ್ ಮೂಲಕ ಸಂಚರಿಸಬಹುದು.

ಗಾಜನೂರು ಬಳಿ ಸಂಚಾರ ವ್ಯತ್ಯಯವಾಗಿದ್ದು, ಮಾಳೂರು-ಹಣಗರಕಟ್ಟೆ ಮೂಲಕ ಸಂಚರಿಸಬಹುದು.

ಅಯನೂರು-ರಿಪ್ಪನಪೇಟೆ ರಸ್ತೆಯಲ್ಲಿ ಮಂಡಗಟ್ಟ ಬಳಿ ರಸ್ತೆಗೆ ನೀರು ನುಗ್ಗಿದ್ದು ಆನಂದಪುರ-ಎಡೆಹಳ್ಳಿ-ರಿಪ್ಪನಪೇಟೆ ಮೂಲಕ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಿವಮೊಗ್ಗದ ಎಸ್ಪಿ ಶಾಂತರಾಜ್ ರವರು ತಿಳಿಸಿದ್ದಾರೆ.

ಈ ನಡುವೆ ಚೋರಡಿ ಕುಮುದ್ವತಿ ಸೇತುವೆ ಮೇಲೆ ಅಪಘಾತ ಸಂಭವಿಸದ್ದು ನೀರು ವೀಕ್ಷಿಸಲು ಬಂದಿದ್ದವರಿಗೆ ಬೊಲೆರೋ ವಾಹನ ಅಪ್ಪಳಿಸಿದೆ. ಇದರಿಂದ ಮೂವರು ನೀರು ಪಾಲಾಗೊದ್ದಿ ಅವರಲ್ಲಿ ಓರ್ವನ ರಕ್ಷಣೆ ಮಾಡಲಾಗಿದ್ದು ಇನ್ನಿಬ್ಬರು‌ ನಾಪತ್ತೆಯಾಗಿದ್ದರೆಂದು ತಿಳಿದುಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ: 11 ಶಸ್ತ್ರಸಜ್ಜಿತರನ್ನು ಬಂಧಿಸಿದ ಸೇನಾ ಸಿಬ್ಬಂದಿ; ಮಹಿಳೆಯರಿಂದ ಪ್ರತಿಭಟನೆ

0
ಸೇನಾ ಗಸ್ತು ಸಿಬ್ಬಂದಿಯು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ 11 ಶಸ್ತ್ರಸಜ್ಜಿತ ಪುರುಷರನ್ನು ಪತ್ತೆ ಮಾಡಿ ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಮಹಿಳಾ ಪ್ರತಿಭಟನಾಕಾರರು...