Homeಮುಖಪುಟಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ; ಮೂರು ದಿನಗಳ ಕಾಲ ದಾಖಲೆ ಪರಿಶೀಲನೆ ಬಳಿಕ ಮುಕ್ತಾಯ

ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ; ಮೂರು ದಿನಗಳ ಕಾಲ ದಾಖಲೆ ಪರಿಶೀಲನೆ ಬಳಿಕ ಮುಕ್ತಾಯ

- Advertisement -
- Advertisement -

ಐಟಿ ಅಧಿಕಾರಿಗಳು, ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದರು. ಈ ದಾಳಿಯನ್ನು ಅಧಿಕಾರಿಗಳು ಸಮೀಕ್ಷೆ ಎಂದು ಹೇಳಿಕೊಂಡಿದ್ದರು. ಮೂರು ದಿನಗಳ ಕಾಲ ಐಟಿ ಅಧಿಕಾರಿಗಳು, ಡಿಜಿಟಲ್ ದಾಖಲೆಗಳು ಮತ್ತು ಫೈಲ್‌ಗಳನ್ನು ಪರಿಶೀಲಿಸುವ ಮೂಲಕ ಆದಾಯ ತೆರಿಗೆ “ಸಮೀಕ್ಷೆ”ಯನ್ನು ಗುರುವಾರ ರಾತ್ರಿ ಕೊನೆಗೊಳಿಸಿದ್ದಾರೆ.

ಬ್ರಿಟನ್‌ನ ಪಬ್ಲಿಕ್ ಬ್ರಾಡ್‌ಕಾಸ್ಟರ್‌ನ ಹಿರಿಯ ಸಂಪಾದಕರು ಸೇರಿದಂತೆ ಸುಮಾರು 10 ಉದ್ಯೋಗಿಗಳು ದೆಹಲಿಯ ಕಚೇರಿಯಲ್ಲಿ ಮೂರು ದಿನಗಳ ಕಾಲ ಕಳೆದು, ಮನೆಗೆ ಮರಳಿದರು. ಆದಾಯ ತೆರಿಗೆ ಇಲಾಖೆ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ, ಶುಕ್ರವಾರ ಹೇಳಿಕೆ ನೀಡುವ ಸಾಧ್ಯತೆ ಇದೆ.

ತೆರಿಗೆ ಅಧಿಕಾರಿಗಳು, ಬಿಬಿಸಿ ಹಿರಿಯ ಉದ್ಯೋಗಿಗಳ ಮೊಬೈಲ್ ಫೋನ್‌, ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಸ್ಕ್ಯಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಇಮೇಜ್‌ಗೆ ಧಕ್ಕೆ ತಂದಿದ್ದಕ್ಕೆ ಬಿಬಿಸಿ ಕಚೇರಿಗಳ ಮೇಲೆ ದಾಳಿ: ದಿಗ್ವಿಜಯ ಸಿಂಗ್

ತೆರಿಗೆ ಅಧಿಕಾರಿಗಳು, “ತೆರಿಗೆ”, “ಕಪ್ಪು ಹಣ” ಮತ್ತು “ಬೇನಾಮಿ”ಯಂತಹ ಕೀವರ್ಡ್‌ಗಳನ್ನು ಬಳಸಿಕೊಂಡು ಮೊಬೈಲ್, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಇದು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಮಾಡುವ ವ್ಯವಹಾರ ಆಗಿರುವುದಿಲ್ಲ, ಒಬ್ಬರ ಕೈಯಿಂದ ಕೈಗೆ ನೀಡಿ ವ್ಯವಹರಿಸುವುದನ್ನು ಸೂಚಿಸುತ್ತದೆ.

ಬಿಬಿಸಿಯ ಪತ್ರಿಕಾ ತಂಡ ಟ್ವೀಟ್ ಮಾಡಿದ್ದು, ”ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ನಮ್ಮ ಕಚೇರಿಗಳನ್ನು ತೊರೆದಿದ್ದಾರೆ. ನಾವು ಮುಂದೆಯೂ ಅಧಿಕಾರಿಗಳೊಂದಿಗೆ ಸಹಕರಿಸುತ್ತೇವೆ ಮತ್ತು  ಸಾಧ್ಯವಾದಷ್ಟು ಬೇಗ ಈ ವಿಷಯಗಳನ್ನು ಪರಿಹರಿಸಲಾಗುವುದು ಎಂದು ಭಾವಿಸುತ್ತೇವೆ. ನಾವು ನಮ್ಮ ಸಿಬ್ಬಂದಿಗಳನ್ನು ಬೆಂಬಲಿಸುತ್ತೇವೆ. ಅವರಲ್ಲಿ ಕೆಲವರು ಸುದೀರ್ಘ ವಿಚಾರಣೆಯನ್ನು ಎದುರಿಸಿದ್ದಾರೆ ಮತ್ತು ರಾತ್ರಿಯಿಡೀ ಕಚೇರಿಯಲ್ಲಿ ಉಳಿದಿದ್ದಾರೆ. ಅವರೊಟ್ಟಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಭಾರತ ಮತ್ತು ಅದರಾಚೆಗೆ ನಮ್ಮ ಪ್ರೇಕ್ಷಕರಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಸರಣಿ ಪ್ರಸಾರ ಮಾಡಿದ ಕೆಲವೇ ವಾರಗಳಲ್ಲಿ ಐಟಿ ಅಧಿಕಾರಿಗಳು, ಭಾರತದಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ.

ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆಯಾದ ಬಳಿಕ ಬಿಜೆಪಿಯು, ಬಿಬಿಸಿ “ವಿಷಪೂರಿತ ವರದಿ” ಬಿತ್ತರಿಸತ್ತದೆ ಎಂದು ಹೇಳಿತ್ತು. ಭಾರತದಲ್ಲಿ ಬಿಬಿಸಿಯನ್ನು ನಿಷೇಧಿಸುವ ಕೋರಿಕೆಯನ್ನು ಸುಪ್ರೀಂ ಕೋರ್ಟ್, “ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ” ಮತ್ತು “ಸಂಪೂರ್ಣವಾಗಿ ಅರ್ಹವಲ್ಲದ” ಕೋರಿಕೆ ಎಂದು ಕಳೆದ ವಾರ ವಜಾಗೊಳಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...