Homeಮುಖಪುಟದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ

ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್: ಬಡಗಲಪುರ ನಾಗೇಂದ್ರ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಕರ್ನಾಟಕದ ಬಜೆಟ್ ಮಂಡಿಸಿದ್ದಾರೆ. ಕೃಷಿ ಕ್ಷೇತ್ರದ ಪ್ರಮುಖ ಅಂಕಿ-ಅಂಶಗಳು ಇಲ್ಲಿವೆ.

- Advertisement -
- Advertisement -

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಕರ್ನಾಟಕದ ಬಜೆಟ್ ಮಂಡಿಸಿದ್ದಾರೆ. ಕೃಷಿ ಕ್ಷೇತ್ರದ ಪ್ರಮುಖ ಅಂಕಿ-ಅಂಶಗಳು ಈ ಕೆಳಗಿನಂತಿವೆ.

  • ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂಗಳಿಂದ 5 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ.
  • ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂಗಳ ಹೆಚ್ಚುವರಿ ಸಹಾಯ ಧನ ನೀಡಲಾಗುವುದು.
  • ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ 962 ಕೋಟಿ ರೂ ವೆಚ್ಚ ಮಾಡಲಾಗಿದೆ.
  • ನೀರಾವರಿ ಪಂಪ್‌ಸೆಟ್‌ಗಳಿಗೆ 52,590 ಕೋಟಿ ರೂ ವಿದ್ಯುತ್‌ ಸಹಾಯ ಧನ ನೀಡಲಾಗಿದೆ.
  • ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4,900 ಕೋಟಿ ರೂ ಪ್ರೀಮಿಯಂ ಪಾವತಿಸಲಾಗಿದೆ.
  • ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ ಒದಗಿಸಲಾಗಿದೆ.
  • ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್‌ ಜ್ಯೋತಿ ವಿಮಾ ಯೋಜನೆಯಡಿ ಭದ್ರತೆ ನೀಡಲಾಗುವುದು.
  • ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು 2,037 ಕೋಟಿ ರೂ ನೀಡಲಾಗಿದೆ.
  • ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ 5,245 ಕೋಟಿ ರೂ ವೆಚ್ಚ ಮಾಡಲಾಗಿದೆ.
  • ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ 125 ಕೋಟಿ ರೂ ನೀಡಲಾಗಿದೆ.
  • ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ₹ 2,900 ಕೋಟಿಗೆ ಮಾರುಕಟ್ಟೆ ನೆರವು ನೀಡಲಾಗಿದೆ.

ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಚಾರದ ಬಜೆಟ್: ಬಡಗಲಪುರ ನಾಗೇಂದ್ರ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-24ನೇ ಸಾಲಿನ ಕರ್ನಾಟಕದ ಬಜೆಟ್ ಮಂಡಿಸಿದ್ದಾರೆ. ಇದು ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಗುಮಾಸ್ತ ತಯಾರಿಸಿದ ಲೆಕ್ಕಾಚಾರದ ಬಜೆಟ್ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರರವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಅವರು, “ಈ ಬಜೆಟ್‌ನಲ್ಲಿ ಯಾವುದೇ ತಿರುಳು ಇಲ್ಲ. ಏಕೆಂದರೆ ರೈತರ ಆದಾಯ ಹೆಚ್ಚಿಸುವ ಯಾವುದೇ ಕಾರ್ಯಗಳಿಲ್ಲ, ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಮೀಸಲಿಟ್ಟಿಲ್ಲ” ಎಂದರು.

ಶೂನ್ಯ ಬಡ್ಡಿತರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಆದರೆ ಸ್ಕೇಲ್ ಬೆಳೆ ಸಾಲದ ಆಫ್ ಫೈನಾನ್ಸ್ ಅದನ್ನು ಹೆಚ್ಚಿಸದೇ ಇದ್ದರೆ ಕರ್ನಾಟಕದಲ್ಲಿರುವ 87% ಸಣ್ಣ ಇಳುವಳಿದಾರರಿಗೆ ಇದು ಉಪಯೋಗವಾಗುವುದಿಲ್ಲ ಎಂದರು.

ಒಟ್ಟು ಬಜೆಟ್ 3.07 ಲಕ್ಷ ಕೋಟಿಯಲ್ಲಿ ನೀರಾವರಿ ಬಾಬ್ತಿಗೆ ಕೇವಲ 6.5% ಅನ್ನು ಮೀಸಲಿಡಲಾಗಿದೆ. ಪಕ್ಕದ ಆಂಧ್ರ ಮತ್ತು ತೆಲಂಗಾಣ ರಾಜ್ಯದಗಳು 14-15% ವರೆಗೆ ಬಜೆಟ್ ಹಣ ಮೀಸಲಿಡುತ್ತಿವೆ. ಕೃಷಿ- ತೋಟಗಾರಿಕೆಗೆ ಕೇವಲ 11% ಮೀಸಲಿಡಲಾಗಿದೆ. ಈ ಅಂಕಿ ಅಂಶಗಳು ಕೃಷಿಕರ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಕೃಷಿಕರು ಸಾಲದ ಹೊರೆಯಿಂದ ಹೊರಬರಲು ಯಾವುದೇ ಕ್ರಮಗಳು ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ ಎಂದರು.

ಇದನ್ನೂ ಓದಿ: ‘ಅನರ್ಹಗೊಳ್ಳಬೇಕಿದ್ದ ವಿವಾದಾತ್ಮಕ ಅಂಬೇಡ್ಕರ್ ಸ್ಕಿಟ್ ಮೊದಲ ಸ್ಥಾನ ಪಡೆದಿದೆ!’: ಮೂಲಗಳ ಮಾಹಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...