Homeಕರ್ನಾಟಕ'ಅನರ್ಹಗೊಳ್ಳಬೇಕಿದ್ದ ವಿವಾದಾತ್ಮಕ ಅಂಬೇಡ್ಕರ್ ಸ್ಕಿಟ್ ಮೊದಲ ಸ್ಥಾನ ಪಡೆದಿದೆ!': ಮೂಲಗಳ ಮಾಹಿತಿ

‘ಅನರ್ಹಗೊಳ್ಳಬೇಕಿದ್ದ ವಿವಾದಾತ್ಮಕ ಅಂಬೇಡ್ಕರ್ ಸ್ಕಿಟ್ ಮೊದಲ ಸ್ಥಾನ ಪಡೆದಿದೆ!’: ಮೂಲಗಳ ಮಾಹಿತಿ

- Advertisement -
- Advertisement -

ಮೌಂಟ್ ಕಾರ್ಮೆಲ್ ಕಾಲೇಜ್ (ಎಂಸಿಸಿ) ಫೆಸ್ಟ್ ಸಮಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾದ ವಿವಾದಾತ್ಮಕ ಸ್ಕಿಟ್‌ ಪ್ರದರ್ಶಿಸಲಾಯಿತು. ಇಂತಹ ವಿವಾದಾತ್ಮಕ ಸ್ಕಿಟ್ ಪ್ರದರ್ಶಿಸಿದ ಜೈನ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್‌(ಸಿಎಂಎಸ್‌)ನ ಡೆಲ್ರಾಯ್ಸ್ ಬಾಯ್ಸ್‌ಗೆ ಪ್ರಥಮ ಬಹುಮಾನ ನೀಡಲಾಗಿದೆ ಎಂದು ಎಂಸಿಸಿ ಮೂಲಗಳು ಬಹಿರಂಗಪಡಿಸಿವೆ.

ಎಂಸಿಸಿಯ ವಿದ್ಯಾರ್ಥಿ ಸಂಘಟನೆಯು 25 ವರ್ಷದೊಳಗಿನವರಿಗಾಗಿ ಮ್ಯಾಡ್‌ಆಡ್ಸ್ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದರಲ್ಲಿ ಜೈನ್ ವಿಶ್ವವಿದ್ಯಾಲಯದ ಸಿಎಂಎಸ್‌ನ ಥಿಯೇಟರ್ ಗ್ರೂಪ್ ಡೆಲ್ರಾಯ್ಸ್ ಬಾಯ್ಸ್ ಸ್ಕಿಟ್ ಪ್ರದರ್ಶಿಸಿದ್ದರು. ವಾಸ್ತವವಾಗಿ ಈ ಸ್ಕಿಟ್‌ನ್ನು ಅನರ್ಹಗೊಳಿಸಬೇಕಿತ್ತು ಆದರೆ ಇದೇ ಸ್ಕಿಟ್‌ಗೆ ಮೊದಲ ಬಹುಮಾನ ನೀಡಲಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ”ಈ ಸ್ಕಿಟ್ ಪ್ರದರ್ಶನದ ಸಮಯದಲ್ಲಿ, ಕೆಲವು ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾದಾಗ, ತೀರ್ಪುಗಾರರು ‘ಆಕ್ಟ್ ಅಸಭ್ಯವಲ್ಲ’ ಎಂದು ಹೇಳುವ ಮೂಲಕ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ” ಎಂದು ಮೂಲಗಳು ತಿಳಿಸಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

”ಇದಕ್ಕೂ ಮೊದಲು ಈ ಸ್ಕಿಟ್‌ನ್ನು ಇತರ ಎರಡು ಫೆಸ್ಟ್‌ಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ಇದು ಈಗಲೇ ತಯಾರಿಸಿದ ಸ್ಕ್ರಿಪ್ಟ್ ಅಲ್ಲ” ಎಂದು ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ ಅಧಿಕಾರಿಯೊಬ್ಬರು ಖಚಿತಪಡಿಸಿದ್ದರು.

ಎಂಸಿಸಿಯ ವಿದ್ಯಾರ್ಥಿ ಸಂಘಟನೆ ಪ್ರಕಾರ, ಈ ಮ್ಯಾಡ್‌ಆಡ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ (ಎಸ್‌ಜೆಸಿಸಿ) ಕೌನ್ಸಿಲ್‌ನ ಮಾಜಿ ಉಪಾಧ್ಯಕ್ಷ ರೆಬೆಕಾ ಫ್ಲಾರೆನ್ಸ್, ಬಾಲ್ಡ್‌ವಿನ್ಸ್ ಮೆಥೋಡಿಸ್ಟ್ ಕಾಲೇಜಿನ ಮಾಜಿ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ನಿಸ್ ಜಿಯೋ ಮತ್ತು ಹರ್ಷಿಲ್ ಜೆ ಶಾ ಇದ್ದರು ಎಂದು ಹೇಳಲಾಗಿದೆ.

ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿ ಸಂಘಟನೆಯು ಈ ಸ್ಕಿಟ್‌ನ ಪ್ರದರ್ಶಕರನ್ನು ಅನರ್ಹಗೊಳಿಸಲು ತೀರ್ಪುಗಾರರನ್ನು ಕೇಳಿಕೊಂಡಿದ್ದಾರೆ. ಆದರೆ ನ್ಯಾಯಾಧೀಶರು ಅದನ್ನು ‘ಡಾರ್ಕ್ ಹ್ಯೂಮರ್’ (ಇದು ಅತ್ಯಂತ ಹಾಸ್ಯಮಯವಾದುದು) ಎಂದು ಲೇಬಲ್ ಮಾಡಿದರು ಮತ್ತು ಸ್ಕಿಟ್ ಚೆನ್ನಾಗಿದೆ ಎಂದು ಹೇಳಿದರು. ಅದಾದಮೇಲೂ ನಮ್ಮ ಸಂಘಟನೆಯ ಕೆಲವು ಸದಸ್ಯರು ಸ್ಕಿಟ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಸಂಘವನ್ನು ತೊರೆದರು” ಎಂದು ಎಂಸಿಸಿಯ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಸ್ಕಿಟ್‌ನ ಪ್ರದರ್ಶನದ ಬಳಿಕ ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಸಾಕಷ್ಟು ಜನರು ಜೈನ್ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಂಘಟನೆಗಳು ಜೈನ್ ವಿವಿ ಬ್ಯಾನ್ ಮಾಡಬೇಕು ಎಂದು ಹೋರಾಟಗಳನ್ನು ಮಾಡಿದರು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕೆ.ಎನ್.ಮಧುಸೂದನ ಅವರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಅಂಬೇಡ್ಕರ್‍‌ಗೆ ಅವಮಾನ: ಜೈನ್ ವಿವಿ ಮಾನ್ಯತೆ ರದ್ದುಪಡಿಸಲು ವಿಪಕ್ಷಗಳ ಆಗ್ರಹ

ದೂರಿನಲ್ಲಿ ಏನಿದೆ?

ಜೈನ್‌ ವಿಶ್ವವಿದ್ಯಾನಿಲಯದ ಕಾಲೇಜು ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ಆ ದಿನ ನೀಡಿದ  ಸ್ಕಿಟ್‌ನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಮೀಸಲಾತಿಯ ಕುರಿತು ಅವಹೇಳನ ಮಾಡಲಾಗಿದೆ. @sunilhc ಎಂಬ ಟ್ವಿಟರ್ ಖಾತೆಯ ಮೂಲಕ ವಿಡಿಯೊವನ್ನು ಟ್ವೀಟ್ ಮಾಡಲಾಗಿದ್ದು ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಕಮಿಷನರ್‌, ಡಿಜಿಪಿ ಮತ್ತು ಇತರೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಸದರಿ ಟ್ವೀಟ್‌ನಲ್ಲಿ ಮಾಡಲಾದ ವಿಡಿಯೊದಲ್ಲಿ ಮೇಲ್ನೋಟಕ್ಕೆ ಆಪಾದನೆಗಳು ಸರಿಯೆಂದು ಕಂಡು ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ, ಸ್ಕಿಟ್‌ ಮೂಲಕ ಜಾತಿ ನಿಂದನೆ ಮಾಡಿರುವುದರಿಂದ ಇದನ್ನು ನೋಡಿದಲ್ಲಿ ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ. ಇದರಿಂದ ಜಾತಿ ಜಾತಿಗಳ ವಿರುದ್ಧ ವಿಷಬೀಜ ಬಿತ್ತಿದಂತಾಗಿರುತ್ತದೆ. ಈ ಹಿನ್ನೆಲೆಯಲ್ಲಿ- ಕಾರ್ಯಕ್ರಮದ ಉಸ್ತುವಾರಿಗಳು ಆದ ಜೈನ್ ವಿಶ್ವವಿದ್ಯಾಲಯದ ಪ್ರಾಂಶುಪಾಲರು (A1), ಡೀನ್ (A2), ಕಾರ್ಯಕ್ರಮದ ಆಯೋಜಕರು (A3), ಸ್ಕಿಟ್‌ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು (A4), ಸ್ಕಿಟ್‌ ಬರೆದ ಬರಹಗಾರರು (A5), ಇತರರರು (A6) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಅವಹೇಳನ ಮಾಡಿರುವುದು ಕಂಡುಬಂದಿದೆ. ಇದರಿಂದಾಗಿ ಸದರಿ ಮೇಲೆ ಹೆಸರಿಸಲಾದ ಎಲ್ಲರ ವಿರುದ್ಧ ದೌರ್ಜನ್ಯ ತಡೆ (ಪ್ರತಿಬಂಧಕ) ಕಾಯ್ದೆ 1989ರ ನಿಯಮ 3ರ ಉಪ ನಿಯಮಗಳಡಿ ಹಾಗೂ ಐ.ಪಿ.ಸಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಅನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(r), 3(1)(s), 3(1)(v) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153A, 149, 295A ಅಡಿಯಲ್ಲಿ ನಾಟಕದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಬೆಂಗಳೂರಿನ ಸಿದ್ದಾಪುರ ಪೊಲೀಸರು ತಿಳಿಸಿದ್ದಾರೆ.

ಸುಜಲ್, ಗೌರವ್ ಪವಾರ್, ನೈಮಾ ನಾಗ್ರಿಯಾ, ಪ್ರಣವ್ ಪಲ್ಲಿಯಿಲ್, ರಿಷಬ್ ಜೈನ್, ಸ್ಮೃತಿ ಆರ್.ಬಿ, ಆಸಿಶ್ ಅಗರ್ವಾಲ್ ಬಂಧಿತ ವಿದ್ಯಾರ್ಥಿಗಳಾಗಿದ್ದಾರೆ. ಇವರೆಲ್ಲರೂ ಬಿಬಿಎ 5 ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ ಎನ್ನಲಾಗಿದೆ.

ಈ ಏಳು ಜನ ಸೇರಿ ಈ ಕಿರು ನಾಟಕ ಪ್ರದರ್ಶಿಸಿದ್ದಾರೆ. ಸೋಮವಾರ ಈ ಏಳು ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ. ವಿಚಾರಣೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಸಿದ್ದಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...