Homeಮುಖಪುಟಪ್ರತಿಭಟನೆ ಪರ ನಿಲ್ಲದಿದ್ದರೂ ಪರವಾಗಿಲ್ಲ ದುರ್ಬಲಗೊಳಿಸದಿರು: ಬಬಿತಾ ಫೋಗಟ್‌ಗೆ ವಿನೇಶ್ ಫೋಗಟ್ ತಾಕೀತು

ಪ್ರತಿಭಟನೆ ಪರ ನಿಲ್ಲದಿದ್ದರೂ ಪರವಾಗಿಲ್ಲ ದುರ್ಬಲಗೊಳಿಸದಿರು: ಬಬಿತಾ ಫೋಗಟ್‌ಗೆ ವಿನೇಶ್ ಫೋಗಟ್ ತಾಕೀತು

- Advertisement -
- Advertisement -

ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ದುರ್ಬಲಗೊಳಿಸದಂತೆ ಕುಸ್ತಿಪಟು ವಿನೇಶ್ ಫೋಗಟ್ ಅವರು ಬಿಜೆಪಿ ಸದಸ್ಯೆ ಬಬಿತಾ ಫೋಗಟ್‌ಗೆ ತಾಕೀತು ಮಾಡಿದ್ದಾರೆ. ವಿನೇಶ್ ಫೋಗಟ್ ಹಾಗೂ ಬಬಿತಾ ಫೋಗಟ್ ಸೋದರ ಸಂಬಂಧಿಗಳಾಗಿದ್ದು, ಇದೀಗ ಇಬ್ಬರ ನಡುವೆ ನಡುವೆ ವಾಕ್ಸಮರ ಸ್ಫೋಟಗೊಂಡಿದೆ.

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬೃಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೇಶದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ಕಳೆದ ರವಿವಾರದಿಂದ ಪುನಃ ಪ್ರತಿಭಟನೆ ಆರಂಭಿಸಿದ್ದಾರೆ. ಈ ಬಾರಿ ಬೆಂಬಲಕ್ಕಾಗಿ ರಾಜಕೀಯ ಪಕ್ಷಗಳಿಗೂ ಆಹ್ವಾನ ನೀಡಿದ್ದಾರೆ.

ವಿನೇಶ್ ಫೋಗಟ್ ಅವರು ಬಬಿತಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದು, ”ನೀವು ದೌರ್ಜನ್ಯಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳ ಹಕ್ಕಿನ ಪರವಾಗಿ ನಿಲ್ಲದಿದ್ದರೂ ಪರವಾಗಿಲ್ಲ. ಆದರೆ, ಬಬಿತಾ ಸಹೋದರಿ, ನಮ್ಮ ಹೋರಾಟವನ್ನು ದುರ್ಬಲಗೊಳಿಸದಿರಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ. ತಮಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಮಾತನಾಡಲು ಮಹಿಳಾ ಕುಸ್ತಿ ಪಟುಗಳಿಗೆ ವರ್ಷಗಳೇ ಆಗಿವೆ. ನೀವೂ ಕೂಡಾ ಓರ್ವ ಹೆಣ್ಣು, ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ” ಎಂದು ಹೇಳಿದ್ದಾರೆ.

Vinesh Phogat asks cousin Babita to not weaken wrestlers' protest

ಈ ವಾಕ್ಸಮರ ಶುರುವಾಗುವ ಮುನ್ನ ಪ್ರತಿಭಟನಾ ಸ್ಥಳ ಜಂತರ್ ಮಂತರ್‌ಗೆ ಬಂದಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕುಸ್ತಿಪಟುಗಳನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಕಳೆದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಬಬಿತಾ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ದೇಶಕ್ಕೆ ಕಳಂಕ ಎಂದ ಪಿಟಿ ಉಷಾ: ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

ಬಬಿತಾ ಅವರ ಟ್ವೀಟ್‌ನಲ್ಲಿ, ”ಮಹಿಳಾ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಲು ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಆಪ್ತ ಸಹಾಯಕ ಸಂದೀಪ್ ಸಿಂಗ್‌ನೊಂದಿಗೆ ಜಂತರ್ ಮಂತರ್‌ಗೆ ಹೋಗಿದ್ದಾರೆ. ಆದರೆ, ಈ ವ್ಯಕ್ತಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಹಾಗೂ ದಲಿತ ಮಹಿಳೆಗೆ ಅಪಮಾನ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ” ಎಂದು ವ್ಯಂಗ್ಯವಾಡಿದ್ದರು.

PM Modi campaign for Babita Phogat, say's she will prove her mettle in political 'dangle' - Inside Sport India
ಬಬಿತಾ ಪೋಗಟ್

ಬಬಿತಾ ಅವರ ಟ್ವೀಟ್‌ನಿಂದ ಕೆರಳಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರು, ಸಹೋದರಿಯ ವಿರುದ್ದವೇ ಇದೀಗ ಟ್ವೀಟ್ ಮಾಡಿದ್ದಾರೆ. ಒಂದು ಹೆಣ್ಣಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ ಆದರೆ ಪ್ರತಿಭಟನೆಯನ್ನು ದುರ್ಬಲಗೊಳಿಸಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ದೆಹಲಿ ಪೊಲೀಸರು, ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಹೊರಿಸಿದ್ದ ಆರೋಪದ ಮೇಲೆ ಎರಡು ಎಫ್ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.

ಅಪ್ರಾಪ್ತ ಮಹಿಳಾ ಕುಸ್ತಿ ಪಟು ನೀಡಿರುವ ದೂರನ್ನು ಆಧರಿಸಿ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಘನತೆಗೆ ಕುಂದುಂಟು ಮಾಡಿದ ಆರೋಪವನ್ನು ಮೊದಲ ಎಫ್‌ಐಆರ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ.

ಎರಡನೆಯ ಎಫ್‌ಐಆರ್‌ನಲ್ಲಿ ವಯಸ್ಕ ಕುಸ್ತಿಪಟುಗಳು ನೀಡಿರುವ ದೂರುಗಳನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಪ್ರಸ್ತುತ ಸೆಕ್ಷನ್‌ಗಳಡಿಯಲ್ಲಿ ಘನತೆಗೆ ಕುಂದುಂಟು ಮಾಡಿದ ಆರೋಪವನ್ನು ದಾಖಲಿಸಿಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...