Homeಮುಖಪುಟಪ್ಯಾಲೆಸ್ತೀನ್‌ನ ಸಮಸ್ಯೆ ಪರಿಹರಿಸಲು ಮೆಹಬೂಬಾ ಮುಫ್ತಿ ಕರೆ ನೀಡಿರುವುದು ತಪ್ಪಲ್ಲ: ಸಂಜಯ್ ರಾವತ್

ಪ್ಯಾಲೆಸ್ತೀನ್‌ನ ಸಮಸ್ಯೆ ಪರಿಹರಿಸಲು ಮೆಹಬೂಬಾ ಮುಫ್ತಿ ಕರೆ ನೀಡಿರುವುದು ತಪ್ಪಲ್ಲ: ಸಂಜಯ್ ರಾವತ್

- Advertisement -
- Advertisement -

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಪ್ಯಾಲೆಸ್ತೀನ್‌ನ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಕರೆ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಹೇಳಿದ್ದಾರೆ.

ಸಂಘರ್ಷದ ಕುರಿತು ಭಾರತದ ದಶಕಗಳ ಕಾಲದ ನಿಲುವನ್ನು ಸೂಚಿಸಿದ ರೌತ್, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ಯಾಲೆಸ್ತೀನ್ ರಾಜ್ಯದ ಮಾಜಿ ಅಧ್ಯಕ್ಷ ಯಾಸರ್ ಅರಾಫತ್ ಅವರಿಗೆ ಬೆಂಬಲವನ್ನು ನೀಡಿದ್ದರು ಎಂದು ಹೇಳಿದ್ದಾರೆ.

”ಇದು ಅಂತಾರಾಷ್ಟ್ರೀಯ ಸಮಸ್ಯೆ. ಪ್ಯಾಲೆಸ್ತೀನ್‌ಗೆ ಸಂಬಂಧಿಸಿದಂತೆ, ನಮ್ಮ ದೇಶವು ಒಂದು ಸಂಪ್ರದಾಯವನ್ನು ಹೊಂದಿದೆ. ಆ ಸಮಯದಲ್ಲಿ ಯಾಸರ್ ಅರಾಫತ್ ಅವರಿಗೆ ಇಂದಿರಾಗಾಂಧಿ ಬೆಂಬಲ ನೀಡಿದ್ದರು. ಮೆಹಬೂಬಾ (ಮುಫ್ತಿ) ಜಿ ಅವರು ತಪ್ಪು ಹೇಳಿದ್ದಾರೆ ಎಂದು ನಾನು ಹೇಳುವುದಿಲ್ಲ, ಆದರೆ ಅಂತಹ ಜಾಗತಿಕ ವಿಷಯಗಳಲ್ಲಿ ರಾಷ್ಟ್ರವು ಒಂದು ಪಾತ್ರವನ್ನು ವಹಿಸುತ್ತದೆ” ಎಂದು ರಾವತ್ ಹೇಳಿದರು.

ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ಹಗೆತನವನ್ನು ಕೊನೆಗೊಳಿಸಲೆಂದು ಆಶಿಸುತ್ತೇನೆ ಎಂದು ಹೇಳಿದರು.

”ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ರಕ್ತಪಾತವು ಕೊನೆಗೊಳ್ಳಲು ಪ್ರಾರ್ಥಿಸುತ್ತೇನೆ, ಅಲ್ಲಿ ಶಾಂತಿ ನೆಲೆಸಲಿ” ಎಂದು ಮುಫ್ತಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಂತರ ಮತ್ತೊಂದು ಪೋಸ್ಟ್‌ನಲ್ಲಿ, “ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ ಜಗತ್ತು ಜಾಗೃತಗೊಳ್ಳಲು ಇಂತಹ ಸಾವು ಮತ್ತು ವಿನಾಶದ ಅಗತ್ಯವಿದೆ ಎಂಬುದು ದುರದೃಷ್ಟಕರ. ಮುಗ್ಧ ಪ್ಯಾಲೆಸ್ಟೀನಿಯನ್ನರು ಕೊಲ್ಲುವುದು ಮತ್ತು ಅವರ ಮನೆಗಳು ನಾಶಪಡಿಸುವ ವಿಚಾರದಲ್ಲಿ ಎಲ್ಲರೂ ಮೌನವಹಿಸಿದ್ದಾರೆ” ಎಂದು ಹೇಳಿದರು.

ಹಮಾಸ್ ಸಶಸ್ತ್ರ ಗುಂಪು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ ನಂತರ ಶನಿವಾರ ಸಂಘರ್ಷ ಉಲ್ಬಣಗೊಂಡಿತು, ಇದು ಗಾಜಾ ಪಟ್ಟಿಯಿಂದ ರಾಕೆಟ್‌ಗಳ ಸುರಿಮಳೆಗೈದಿತ್ತು. ಇಸ್ರೇಲ್ ಭಾನುವಾರದಂದು ಔಪಚಾರಿಕವಾಗಿ ಯುದ್ಧವನ್ನು ಘೋಷಿಸಿತು ಮತ್ತು ಹಮಾಸ್ ಸಶಸ್ತ್ರ ಗುಂಪಿನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಿಲಿಟರಿ ಕ್ರಮಗಳಿಗೆ ಆದೇಶ ನೀಡಿತ್ತು.

ಇತ್ತೀಚಿನ ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರು ಮತ್ತು ಯೋಧರು ಸೇರಿದಂತೆ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಆದರೆ ಸೋಮವಾರ ಹಲವಾರು ಸ್ಥಳಗಳಲ್ಲಿ ಹೋರಾಟ ಮುಂದುವರೆದಿದೆ.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಲ್ಲಿ ಮೃತರ ಸಂಖ್ಯೆ ಗಣನೀಯ ಹೆಚ್ಚಳ: ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read