Homeಕರ್ನಾಟಕಮಹಿಷ ದಸರಾ ಆಚರಣೆ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಮಹಿಷ ದಸರಾ ಆಚರಣೆ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

- Advertisement -
- Advertisement -

ಮಹಿಷ ದಸರಾ ಆಚರಣೆ ಸಮಿತಿಯ ಅಧ್ಯಕ್ಷರ ವಿರುದ್ಧ ಸಾಮಾಜಿಕ ಕಾರ್ಯಕರ್ತನೆನ್ನಲಾದ ಸ್ನೇಹಮಯಿ ಕೃಷ್ಣ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಸಮಿತಿ ಅಧ್ಯಕ್ಷರಿಗೆ ಈ ಬಗ್ಗೆ ಕೋರ್ಟ್ ತುರ್ತು ನೊಟೀಸ್ ನೀಡಿ ಅ.11ಕ್ಕೆ ವಿಚಾರಣೆ ಮುಂದೂಡಿದೆ.

ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಪುರಾಣದಲ್ಲಿ ರಾಕ್ಷಸನೆಂದು ಗುರುತಿಸಲ್ಪಟ್ಟ ಮಹಿಷಾಸುರನನ್ನು ವೈಭವೀಕರಿಸಿ ಮಹಿಷಾ ದಸರಾ ಆಚರಿಸಲಾಗುತ್ತಿದೆ. ಈ ಬಗ್ಗೆ ಮಾದ್ಯಮಗಳಲ್ಲಿ ಮಾತನಾಡುವಾಗ ಚಾಮುಂಡೇಶ್ವರಿ ದೇವಿಯ ಬಗ್ಗೆ ಆಧಾರ ಇಲ್ಲದೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಮಹಿಷಾ ದಸರಾದ ಬಗ್ಗೆಅವಹೇಳನಾಕಾರಿಯಾಗಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಾರದ ಬೆಟ್ಟಯ್ಯ ಕೋಟೆ, ಆಲಗೂಡ್‌ ಶಿವಕುಮಾರ್‌ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗ ಸ್ವಾಮಿ ಅವರು ಈ ಕುರಿತು ಜಂಟಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ಮಹಿಷ ದಸರಾ ಬಗ್ಗೆ ಅವಹೇಳನ ಮಾಡುವ ಪ್ರತಾಪ್‌ ಸಿಂಹ ಅವರಿಗೆ ಇತಿಹಾಸ ಮತ್ತು ಸಂವಿಧಾನದ ಪಾಠ ಮಾಡಬೇಕಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ರಾವಣನ ದೇವಸ್ಥಾನಗಳಿವೆ. ಮಾತ್ರವಲ್ಲದೆ ಹಿರಣ್ಯ ಕಶ್ಯಪುವಿನ ದೇವಸ್ಥಾನಗಳಿವೆ. ಅಲ್ಲಲ್ಲಿ ಪೂಜೆ ನಡೆಯುತ್ತಿದೆ. ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇಂತಹ ಬಹುತ್ವದ ದೇಶ ನಮ್ಮದು. ಮೈಸೂರು ಮೂಲತಃ ಮಹಿಷನ ನಾಡು. ಓಣಂ, ಬಲಿ ಚಕ್ರವರ್ತಿ ಹಬ್ಬದಂತೆ ದಸರಾ ವೇಳೆ ಪಿತೃಪಕ್ಷ ಆಚರಣೆಯಾಗಿ ಮಹಿಷನ ದಿನಾಚರಣೆಯನ್ನು ಮೂಲನಿವಾಸಿಗಳು ಆಚರಿಸುತ್ತಾರೆ. ಸಂಸದ ಪ್ರತಾಪ್‌ ಸಿಂಹ ಈ ನೆಲದ ಮೂಲ ನಿವಾಸಿಗಳ ಭಾವನೆಗಳನ್ನು ಘಾಸಿಗೊಳಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

ವಿಧತೆಯಲ್ಲಿ ಏಕತೆ ಹೇಳುವ ಸಂವಿಧಾನದಲ್ಲಿ ಎಲ್ಲಾ ಆಚರಣೆಗೆ ಅವಕಾಶ ಇರುವಾಗ ಮಹಿಷ ದಸರಾ ಬೇಡ ಎನ್ನುವುದಕ್ಕೆ ಪ್ರತಾಪ್‌ ಸಿಂಹಗೆ ಯೋಗ್ಯತೆ ಏನಿದೆ ಎಂದು ದಸಂಸ ಪ್ರಶ್ನಿಸಿದೆ.

ಇನ್ನು ಮೈಸೂರಿನಲ್ಲಿ ಮಹಿಷ ದಸರಾಗೆ ಸರ್ಕಾರ ಅನುಮತಿ ಕೊಟ್ಟಾಗಿನಿಂದ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅ.13 ರಂದು ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಬಿಗ್‌ ಬಾಸ್‌ ಮನೆಗೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...