Homeಮುಖಪುಟಲೋಕಸಭೆ ಚುನಾವಣೆ ಪ್ರಜಾಪ್ರಭುತ್ವದ ರಕ್ಷಣೆಗಿರುವ 'ಮಾಡು ಇಲ್ಲವೇ ಮಡಿ' ಯುದ್ಧವಾಗಿದೆ: ಸ್ಟಾಲಿನ್

ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವದ ರಕ್ಷಣೆಗಿರುವ ‘ಮಾಡು ಇಲ್ಲವೇ ಮಡಿ’ ಯುದ್ಧವಾಗಿದೆ: ಸ್ಟಾಲಿನ್

- Advertisement -
- Advertisement -

ಲೋಕಸಭೆ ಚುನಾವಣೆಯನ್ನು ಭಾರತದ ಪ್ರಜಾಪ್ರಭುತ್ವದ ತಿರುಳನ್ನು ರಕ್ಷಿಸುವ ಮಾಡು ಇಲ್ಲವೇ ಮಡಿ ಯುದ್ಧವಾಗಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟದ ಮಧ್ಯೆ ನಾವು ಇದ್ದಂತೆ ಭಾಸವಾಗುತ್ತಿದೆ.  ಇದು ಭಾರತದ ತಿರುಳನ್ನು ರಕ್ಷಿಸುವುದು: ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ನಮ್ಮ ಬಹುತ್ವ ಸಮಾಜವನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.

ತಮ್ಮ ಚೆನ್ನೈ ನಿವಾಸದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಎಂಕೆ ಮುಖ್ಯಸ್ಥರು ಆಗಿರುವ ಸ್ಟಾಲಿನ್‌, ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಬಲವಾದ ತಂಡ ಹೊಂದಿವೆ. ಅಖಿಲೇಶ್ ಯಾದವ್, (ಅರವಿಂದ್) ಕೇಜ್ರಿವಾಲ್, ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಮತ್ತು ತೇಜಸ್ವಿ ಯಾದವ್ ಅವರಂತಹ ನಾಯಕರು ನಮ್ಮೊಂದಿಗೆ ಇದ್ದಾರೆ. ಈ ಹೋರಾಟದಲ್ಲಿ ನಾವು ಒಗ್ಗಟ್ಟಾಗಿದ್ದೇವೆ, ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯಂತಹ ಕ್ರಿಯಾಶೀಲ ಯುವ ನಾಯಕ ಮೋದಿಯ ಆ ಬೆಳೆಸಿದ ಚಿತ್ರಣವನ್ನು ಮತ್ತು ಆರೆಸ್ಸೆಸ್‌ ನಿರೂಪಣೆಯನ್ನು ಕೆಡವಲು ಸಜ್ಜಾಗಿದ್ದಾರೆ ಎಂದು ಸ್ಟಾಲಿನ್ ಹೇಳಿದರು. ಲೋಕಸಭೆ ಚುನಾವಣೆಯನ್ನು “ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಮಾಡು ಇಲ್ಲವೇ ಮಡಿ ಯುದ್ಧ” ಎಂದು ಬಣ್ಣಿಸಿದ್ದಾರೆ.

ಬಿಜೆಪಿಗೆ ತೆರಳಿದ ನಂತರ ಆಪ್ ನಾಯಕರ ವಿರುದ್ಧದ ಪ್ರಕರಣಗಳು ಹಿಂತೆಗೆದುಕೊಳ್ಳುವ ಕುರಿತ ವರದಿಯನ್ನು ಉಲ್ಲೇಖಿಸಿದ ಸ್ಟಾಲಿನ್, ‘ಒಂದು ದಶಕದ ಅಧಿಕಾರದ ನಂತರ, ಮೋದಿ ಸರ್ಕಾರವು ತಮ್ಮ ಸಾಧನೆಗಳನ್ನು ಪ್ರದರ್ಶಿಸುವ ಬದಲು ಹಿಂದಿನದನ್ನು ಕೆದಕುವ ಕೆಲಸದಲ್ಲಿ ನಿರತವಾಗಿದೆ,  ಪಂಡಿತ್ ನೆಹರೂ ಮತ್ತು ಇಂದಿರಾ ಗಾಂಧಿಯಂತಹ ದಿಗ್ಗಜರ ಬಳಿ ಬೆರಳು ತೋರಿಸುತ್ತಿದೆ. ಮತ್ತು ಈಗ ಅವರ ಮುಖ್ಯ ಕಾರ್ಯಸೂಚಿ ಏನು? ಮೇಲ್ನೋಟಕ್ಕೆ, ಪ್ರತಿಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಾಗಿದೆ ಎಂದು ಹೇಳಿದ್ದಾರೆ.

ಆರ್‌ಟಿಐ ಉತ್ತರದ ಆಧಾರದ ಮೇಲೆ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪಕ್ಷ ಎತ್ತಿರುವ ಕಚ್ಚತೀವು ವಿಷಯವನ್ನು ಉಲ್ಲೇಖಿಸಿ ಬಿಜೆಪಿ ತನ್ನ ಉದ್ದೇಶಗಳಿಗಾಗಿ ಆರ್‌ಟಿಐನ್ನು ಬಳಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಮೋದಿಯವರ ಮಾತುಗಳನ್ನು ಇನ್ನು ಮುಂದೆ ಜನರು ನಂಬಲಾರರು ಎಂಬ ಭಯದಿಂದ ಅವರು ಆರ್‌ಟಿಐಗೆ ಮೊರೆ ಹೋಗಿದ್ದಾರೆ ಎಂದು ಹೇಳಿದರು.

ಡಿಎಂಕೆ ತನ್ನ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಯಾವಾಗಲೂ ಬದ್ಧವಾಗಿದೆ ಎಂದು ಪ್ರತಿಪಾದಿಸಿದ ಸ್ಟಾಲಿನ್‌, “ಎಲ್ಲರಿಗೂ ಎಲ್ಲವೂ” ಎಂಬ ತತ್ವದ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದೆ ಎಂದು ಹೇಳಿದ್ದು, ಬಿಜೆಪಿ ಬೇರೆಯೇ ಆಟವನ್ನು ಆಡುತ್ತದೆ, ಅವರು ದ್ವೇಷವನ್ನು ಬೆಳೆಸುತ್ತಾರೆ ಮತ್ತು ಆರೆಸ್ಸೆಸ್ ಸಿದ್ಧಾಂತದಲ್ಲಿ ರಾಜಕೀಯವನ್ನು ಮಾಡುತ್ತಾರೆ. ಇಂದು ಮೋದಿಯನ್ನು ಮುಂದಾಳತ್ವವನ್ನಾಗಿ ಮಾಡಿಕೊಂಡಿದ್ದಾರೆ. ನಿನ್ನೆ ಬೇರೊಬ್ಬರಿದ್ದರು ಮತ್ತು ಅದು ನಾಳೆ ಮತ್ತೊಂದು ಮುಖವನ್ನು ಹುಡುಕುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿಗರು ಪ್ರಜಾಪ್ರಭುತ್ವ ಮತ್ತು ಸಹಕಾರಿ ಸಂಯುಕ್ತ ವ್ಯವಸ್ಥೆಯ  ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ, ಆದರೆ ಅದು ನಿಜವಾಗಿಯೂ ಎಲ್ಲಿದೆ? ಪ್ರಾಯೋಗಿಕವಾಗಿ ಇದು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಚಂಡೀಗಢ: ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದ ಚುನಾವಣಾಧಿಕಾರಿ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚನೆ

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...