Homeಅಂತರಾಷ್ಟ್ರೀಯಬಾಲಕೋಟ್ ನಲ್ಲಿ ಉಗ್ರರು ಮತ್ತೆ ಸಕ್ರಿಯರಾಗಿದ್ದಾರೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಬಾಲಕೋಟ್ ನಲ್ಲಿ ಉಗ್ರರು ಮತ್ತೆ ಸಕ್ರಿಯರಾಗಿದ್ದಾರೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

- Advertisement -
- Advertisement -

ಭಾರತಕ್ಕೆ ನುಸುಳಲು ಇಸ್ರೇಲಿ ನಿರ್ಮಿತ ಲೇಸರ್ ಮಾರ್ಗದರ್ಶಿ ಬಾಂಬುಗಳಿಂದ ಸುಮಾರು 129 ಜೈಶ್ ಭಯೋತ್ಪಾದಕರು ಬಾಲಕೋಟ್ ಶಿಬಿರದಲ್ಲಿ ಕಾಯುತ್ತಿದ್ದಾರೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಭಾರತದಿಂದ ಬಾಂಬ್ ದಾಳಿಗೊಳಗಾದ ಪಾಕಿಸ್ತಾನದ ಬಾಲಕೋಟ್ನಲ್ಲಿನ ಭಯೋತ್ಪಾದಕ ಶಿಬಿರವನ್ನು ಇತ್ತೀಚೆಗೆ ಪುನಃ ಸಕ್ರಿಯಗೊಳಿಸಲಾಗಿದ್ದು, ಸುಮಾರು 500 ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

“ಬಾಲಕೋಟ್ ಅನ್ನು ಪಾಕಿಸ್ತಾನವು ಇತ್ತೀಚೆಗೆ ಪುನಃ ಸಕ್ರಿಯಗೊಳಿಸಿದೆ. ಬಾಲಾಕೋಟ್ ನಲ್ಲಿ ಸಾಕಷ್ಟು ಹಾನಿ ನಡೆದಿದೆ ಎಂಬುದನ್ನು ಇದು ತೋರಿಸುತ್ತದೆ. ಹಾಗಾಗಿ ಬಾಲಕೋಟ್ ನಲ್ಲಿ ಭಾರತೀಯ ವಾಯುಪಡೆಯು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದ್ದರಿಂದ ಪಾಕಿಸ್ತಾನ ಈಗ ಅವರ ಜನರನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುತ್ತಿದ್ದಾರೆ ” ಎಂದು ಜನರಲ್ ರಾವತ್ ರವರಯ ಚೆನ್ನೈನಲ್ಲಿ, ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಹೇಳಿದ್ದಾರೆ.

ನಿನ್ನೆ ಹೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ಮೋದಿಯವರು, ಭಯೋತ್ಪಾದನೆ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ಹೋರಾಡುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ. “ಇದು ಅಮೆರಿಕಾದಲ್ಲಿ 9/11 ಆಗಿರಲಿ ಅಥವಾ ಮುಂಬೈಯಲ್ಲಿ 26/11 ಆಗಿರಲಿ, ಅದರ ಸಂಚುಕೋರರು ಎಲ್ಲಿದ್ದಾರೆ? ನೀವು ಮಾತ್ರವಲ್ಲ, ಈ ಜನರು ಯಾರೆಂದು ಇಡೀ ಜಗತ್ತಿಗೆ ತಿಳಿದಿದೆ” ಎಂದು ಅವರು ಪಾಕಿಸ್ತಾನವನ್ನು ಹೆಸರಿಸದೆ ಟೀಕಿಸಿದ್ದಾರೆ.

ಫೆಬ್ರವರಿ 26 ರಂದು, ಭಾರತೀಯ ವಾಯುಸೇನೆಯ ಹಲವು ಫ್ರೆಂಚ್ ಮೂಲದ ಮಿರಾಜ್ 2000 ಜೆಟ್‌ಗಳೊಂದಿಗೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿನ ಜೈಷ್-ಎ-ಮೊಹಮ್ಮದ್ ಕ್ಯಾಂಪ್‌ ಮೇಲೆ ವಾಯುದಾಳಿ ನಡೆಸಿತ್ತು. ಇದರಿಂದ ಹಲವು ಉಗ್ರರು ಹತರಾಗಿದ್ದರು ಎನ್ನಲಾಗುತ್ತಿದೆ.

ಇದಕ್ಕೂ ಮೊದಲು ಕಾಶ್ಮೀರದ ಪುಲ್ವಾಮಾದ ಅರೆಸೈನಿಕ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲೆ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ 45ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು.

ಬಾಲಕೋಟ್ ಜೈಶ್ ಶಿಬಿರವನ್ನು ಪುನಃ ಸಕ್ರಿಯಗೊಳಿಸುವ ಪಾಕಿಸ್ತಾನದ ಕ್ರಮವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡದಿರುವ ಬಗ್ಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ತನ್ನ ಬದ್ಧತೆಯನ್ನು ನಿರಾಕರಿಸುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.

ಜಾಗತಿಕ ಭಯೋತ್ಪಾದಕ ಹಣಕಾಸು ವಾಚ್‌ಡಾಗ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ -ಎಫ್‌ಎಟಿಎಫ್) ಪಾಕಿಸ್ತಾನವನ್ನು “ವರ್ಧಿತ ಕಪ್ಪುಪಟ್ಟಿ” ಯಲ್ಲಿ ಇರಿಸಿದೆ. ಭಯೋತ್ಪಾದಕರನ್ನು ಬಂಧಿಸುವುದು ಮತ್ತು ಅವರ ನಿಧಿ ಮೂಲಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಎಫ್‌ಎಟಿಎಫ್‌ನ 27 ಅಂಶಗಳ ಕ್ರಿಯಾ ಯೋಜನೆಯನ್ನು ಪಾಕಿಸ್ತಾನವು ಅಳವಡಿಸಿಕೊಳ್ಳಲು 15 ತಿಂಗಳ ಗಡುವು ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ.

ಎಫ್‌ಎಟಿಎಫ್‌ನ ಗುರಿಯನ್ನು ಪೂರೈಸದಿರುವುದು ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ಗಳು ಯಾವ ರೀತಿ ನೋಡುತ್ತವೆ ಎಂಬುದು ಗೊತ್ತಾಗಲಿದೆ. ಜೊತೆಗೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಾದ ಮೂಡಿಸ್, ಸ್ಟ್ಯಾಂಡರ್ಡ್ & ಪೂವರ್ಸ್ ಮತ್ತು ಫಿಚ್‌ನ ಋಣಾತ್ಮಕ ಮೌಲ್ಯಮಾಪನಗಳನ್ನು ಎದುರಿಸಬೇಕಾಗುತ್ತದೆ. ಇದು ಆರ್ಥಿಕ ಕುಸಿತವನ್ನು ನಿವಾರಿಸಲು ಸಾಧ್ಯವಿರುವ ಎಲ್ಲ ಅಂತಾರಾಷ್ಟ್ರೀಯ ಮೂಲಗಳಿಂದ ನೆರವು ಪಡೆಯುತ್ತಿರುವ ಪಾಕಿಸ್ತಾನದ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...