Homeಅಂತರಾಷ್ಟ್ರೀಯ1 ವರ್ಷದಿಂದ ಫ್ರೀಜರ್​ನಲ್ಲಿ ಇಟ್ಟಿದ್ದ ನೂಡಲ್ಸ್ ತಿಂದು 9 ಮಂದಿ ಸಾವು!

1 ವರ್ಷದಿಂದ ಫ್ರೀಜರ್​ನಲ್ಲಿ ಇಟ್ಟಿದ್ದ ನೂಡಲ್ಸ್ ತಿಂದು 9 ಮಂದಿ ಸಾವು!

- Advertisement -
- Advertisement -

ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಫ್ರೀಜರ್‌ನಲ್ಲಿ ಇರಿಸಿದ್ದ ನೂಡಲ್ಸ್ ತಿಂದು ಫುಡ್​ ಪಾಯ್ಸನಿಂಗ್​ನಿಂದ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಈ ನೂಡಲ್ಸ್ ಅನ್ನು ಜೋಳದ ಹಿಟ್ಟಿನೊಳಗೆ ಇರಿಸಲಾಗಿತ್ತು. ಕಲುಷಿತಗೊಂಡಿದ್ದ ಹಿಟ್ಟು, ವಿಷವಾಗಿ ಪರಿವರ್ತನೆಯಾಗಿತ್ತು.

ಚೀನಾದ ಈಶಾನ್ಯ ಭಾಗದ ಹೀಲಾಂಗ್‌ಜಿಯಾಂಗ್‌ ಪ್ರಾಂತ್ಯದ ಜಿಕ್ಸಿ ನಗರದಲ್ಲಿ ಕುಟುಂಬವೊಂದು, ಕಳೆದ ಒಂದು ವರ್ಷದಿಂದ ಫ್ರೀಜರ್​ನಲ್ಲಿ ನೂಡಲ್ಸ್ ಸೂಪ್ ಇಟ್ಟಿತ್ತು. ಅಕ್ಟೋಬರ್ 5ರಂದು ಈ ತಿನಿಸು ಸೇವಿಸಿದ್ದ ಕುಟುಂಬದವರು, ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ. ಬಾಂಗ್​​ಕ್ರೆಕ್​ ಆ್ಯಸಿಡ್​ ಪಾಯ್ಸನಿಂಗ್ ಉಂಟಾಗಿ ಏಳು ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕುಟುಂಬಸ್ಥರು ಸೇವಿಸಿದ ಈ ನೂಡಲ್ಸ್ ಸೂಪ್​ ಸ್ಥಳೀಯ ಚೀನಿ ಅಡುಗೆಯಾಗಿತ್ತು. ಅದೃಷ್ಟವಶಾತ್ ಕುಟುಂಬದ ಮೂವರು ಮಕ್ಕಳು ರುಚಿ ಹಿಡಿಸಿದ ಕಾರಣ ನೂಡಲ್ಸ್ ತಿನ್ನಲು ನಿರಾಕರಿಸಿದ್ದರಿಂದ ಬದುಕುಳಿದಿದ್ದಾರೆ ಎಂದು  ಡೈಲಿಸ್ಟಾರ್.ಕೊ.ಯು ವರದಿ ಮಾಡಿದೆ.

ಇದನ್ನೂ ಓದಿ: ಹುಲಿಗಳಿಗೆ ಗೋಮಾಂಸ ನೀಡುವುದಕ್ಕೆ ಬಿಜೆಪಿ ಪ್ರತಿಭಟನೆ: ಹಾಗಾದರೆ ಇಡ್ಲಿ-ಸಾಂಬಾರ್ ಕೊಡಿ ಎಂದ ನೆಟ್ಟಿಗರು!

ಹೀಲೋಂಗ್​ಜಾಂಗ್ ಸೆಂಟರ್ ಫಾರ್ ಡಿಸೀಸ್​ ಕಂಟ್ರೋಲ್ ಆ್ಯಂಡ್​ ಪ್ರಿವೆನ್ಷನ್​​ನ ಆಹಾರ ಸುರಕ್ಷತೆ ನಿರ್ದೇಶಕ ಗಾವೋ ಫೀ, ಬಾಂಗ್​​ಕ್ರೆಕ್​ ಆ್ಯಸಿಡ್​ ವಿಷವು ಹೆಚ್ಚಾಗಿ ಮಾರಕವಾಗಿದೆ ಎಂದು ಹೇಳಿದರು. “ಇದು ಯಕೃತ್ತು, ಮೂತ್ರಪಿಂಡಗಳು, ಹೃದಯ ಮತ್ತು ಮೆದುಳು ಸೇರಿದಂತೆ ಮಾನವನ ಅನೇಕ ಅಂಗಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ” ಎಂದು ಹೇಳಿದ್ದಾರೆ.

’ಈ ಪಾಯ್ಸನಿಂಗ್​ ನಿವಾರಣೆಗೆ ಯಾವುದೇ ಔಷಧಿ ಇಲ್ಲ. ಒಮ್ಮೆ ಪಾಯ್ಸನಿಂಗ್ ಉಂಟಾದರೆ, ಸಾವಿನ ಪ್ರಮಾಣವು ಶೇ.40ರಿಂದ 100ರಷ್ಟು ಇರುತ್ತದೆ. ಬಾಂಗ್​​ಕ್ರೆಕ್​ ಆ್ಯಸಿಡ್ ಒಂದು ಅಪಾಯಕಾರಿ ವಿಷವಾಗಿದ್ದು, ಕಳಿತ ತೆಂಗಿನಕಾಯಿಯಿಂದ ಇದು ಉತ್ಪಾದನೆಯಾಗುತ್ತದೆ’ ಎಂದು ಗಾವೊ ಫೀ ತಿಳಿಸಿದ್ದಾರೆ ಎಂದು ಡೈಲಿಸ್ಟಾರ್.ಕೊ.ಯು ಉಲ್ಲೇಖಿಸಿದೆ.

ಇಂಡೋನೇಷ್ಯಾದ ಸಾಂಪ್ರದಾಯಿಕ ತಿನಿಸು ‘ಟೆಂಪೆ ಬೊಂಗ್‌ಕ್ರ್ಯಾಕ್’, ಡಿಜೆನ್ಕೋಲ್​ ಬೀನ್ಸ್​ ಅನ್ನು ನಿಷೇಧಿಸಲಾಗಿದೆ. ಏಕೆಂದರೆ ಇವುಗಳು ಕೂಡ ಅನೇಕ ಸಾವುಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 1951ರಿಂದ 1975ರವರೆಗೆ ಇಂಡೋನೇಷ್ಯಾದಲ್ಲಿ ಬಾಂಗ್​​ಕ್ರೆಕ್​ ಆ್ಯಸಿಡ್​​ನಿಂದ ಪ್ರತಿ ವರ್ಷ ಸರಾಸರಿ 288 ಜನರಿಗೆ ಪಾಯ್ಸನಿಂಗ್ ಉಂಟಾಗಿದ್ದು, 34 ಜನರು ಸಾವನ್ನಪ್ಪಿದ್ದರು.


ಇದನ್ನೂ ಓದಿ: ದಕ್ಷಿಣ ಭಾರತೀಯರ ನೆಚ್ಚಿನ ತಿಂಡಿ ’ಇಡ್ಲಿ’ ನಮ್ಮ ಕರ್ನಾಟಕದ್ದು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....