Homeಮುಖಪುಟಜಾಮಿಯಾ ಹಿಂಸೆ | ವಿದ್ಯಾರ್ಥಿಗಳ ಕೈಯಲ್ಲಿ ಇದ್ದುದು ಕಲ್ಲಲ್ಲ, ವಾಲೆಟ್..

ಜಾಮಿಯಾ ಹಿಂಸೆ | ವಿದ್ಯಾರ್ಥಿಗಳ ಕೈಯಲ್ಲಿ ಇದ್ದುದು ಕಲ್ಲಲ್ಲ, ವಾಲೆಟ್..

- Advertisement -
- Advertisement -

ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ನಡೆದ ಪೊಲೀಸ್ ದೌರ್ಜನ್ಯ ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಹೊರಬರುತ್ತಿವೆ. ಅದರಲ್ಲಿ ವಿದ್ಯಾರ್ಥಿಯೊಬ್ಬ ಎರಡು ಕೈಯಲ್ಲಿ ಕಲ್ಲು ಹಿಡಿದಿದ್ದ ಎಂದು ಹಲವಾರು ಚಾನೆಲ್‌ಗಳು ಪ್ರತಿಪಾದಿಸಿವೆ.

ಫೆಬ್ರುವರಿ 16ರಂದು ಇಂಡಿಯಾ ಟುಡೇ ಚಾನೆಲ್ ಎಸ್‌ಐಟಿಯ ಅಧಿಕಾರಿಯೊಬ್ಬರು ನೀಡಿದ ಫೂಟೇಜ್ ಅನ್ನು ಅಥೆಂಟಿಕ್ ಎಂದು ತೋರಿಸುತ್ತ, ವಿದ್ಯಾರ್ಥಿಗಳು ಗ್ರಂಥಾಲಯದೊಳಕ್ಕೆ ಕಲ್ಲು ಒಯ್ದಿದ್ದರು ಎಂದು ಪ್ರತಿಪಾದಿಸಿತು. ಕೊಂಚ ಲಿಬರಲ್ ಎನಿಸಿದ ಈ ಚಾನೆಲ್ಲೇ ಹೀಗೆ ಮೂರ್ಖತನ ಪ್ರದರ್ಶಿಸಿದ ಮೇಲೆ ಹೆಂಡ ಕುಡಿದ ಮಂಗಗಳಂತಿರುವ ಸ್ವರಾಜ್ ಇಂಡಿಯಾ, ಒಪಿ ಇಂಡಿಯಾದಂತಹ ಖಟ್ಟರ್ ಬಲಪಂಥಿಯ ವೆಬ್‌ಸೈಟ್‌ಗಳಂತೂ ಇದನ್ನು ವ್ಯಾಪಕವಾಗಿ ಹರಡಿದವು.

ಆದರೆ ಫ್ಯಾಕ್ಟ್ ಚೆಕ್ ಮಾಡುವ ದಿ ಕ್ವಿಂಟ್ ಸೇರಿದಂತೆ ಇಂಗ್ಲಿಷ್ ಸುದ್ದಿ ಸಂಸ್ಥೆಗಳಾದ ಟೈಮ್ಸ್ ಆಫ್ ಇಂಡಿಯಾ, ಟೈಮ್ಸ್ ನೌ, ರಿಪಬ್ಲಿಕ್ ಭಾರತ್, ಮಿರರ್ ನೌ, ಡಿಎನ್‌ಎ ಮತ್ತು ಹಿಂದಿ ಸುದ್ದಿ ಸಂಸ್ಥೆಗಳಾದ ಜೀ ನ್ಯೂಸ್, ಆಜ್‌ತಕ್, ಇಂಡಿಯಾ ಟುಡೇ, ಎನ್‌ಡಿಟಿವಿ ಇಂಡಿಯಾ, ನ್ಯೂಸ್ ನೇಷನ್ ಕೂಡ ಇದೇ ಸತ್ಯ ಎಂಬಂತೆ ಪ್ರತಿಪಾದಿಸಿದವು.

ಕ್ಲಿಪ್ಪಿಂಗ್‌ನಲ್ಲಿ ಮೇಲ್ನೋಟಕ್ಕೆ ವಾಲೆಟ್ ಕಲ್ಲಿನಂತೆ ಕಾಣುತ್ತದೆ. ವಿಡಿಯೋವನ್ನು ಒಡೆದೊಡೆದು ಜೂಮ್‌ ಮಾಡಿ ಸೂಕ್ಷ್ಮವಾಗಿ ನೋಡಿದಾಗ ಕಲ್ಲು ಕರಗುವ ಸಮಯ ಸಿಗುತ್ತದೆ. ಅಲ್ಟ್ ನ್ಯೂಸ್ ಈ ಕೆಲಸವನ್ನು ಮಾಡಿದೆ.

ಇಂಡಿಯಾ ಟುಡೇ ತೋರಿಸಿದ ಫೂಟೇಜ್ ಇರುವ ವಿಡಿಯೋದ ಹೈ ರೆಸ್ಯುಲೂಷನ್ ಆವೃತ್ತಿಯನ್ನು ಪಡೆದುಕೊಂಡ ಅಲ್ಟ್ ನ್ಯೂಸ್, ವಿಡಿಯೋವನ್ನು ಸ್ಲೋ ಮಾಡಿ, ಸಣ್ಣ ಸಣ್ಣ ಫ್ರೇಮ್‌ಗಳಾಗಿ ಒಡೆದು ವಿಶ್ಲೇಷಣೆ ಮಾಡಿದೆ.

ಸತ್ಯ ಏನೆಂದರೆ, ವಿದ್ಯಾರ್ಥಿ ಒಂದು ಕೈಯಲ್ಲಿ ವಾಲೆಟ್ ಮತ್ತು ಇನ್ನೊಂದು ಕೈಯಲ್ಲಿ  ಬಹುಷ: ಮೊಬೈಲ್ ಹಿಡಿದಿದ್ದಾನೆ. ಚಿತ್ರಗಳಲ್ಲಿ ಇದನ್ನು ಗಮನಿಸಬಹುದು.

ಆದರೆ, ಮಾಹಿತಿ ಸಿಕ್ಕ ತಕ್ಷಣ ಹಿಂದೆ ಮುಂದೆ ನೋಡದೇ ಪ್ರಸಾರ ಮಾಡುವ ಕಲ್ಲು ಮನಸ್ಸುಗಳನ್ನು ಕರಗಿಸುವುದು ಸದ್ಯಕ್ಕೆ ಕಷ್ಟವೇ. ಆದರೆ, ಪ್ರಗತಿಪರ ಎನಿಸಿದ ಹಲವಾರು ಚಾನೆಲ್‌ಗಳು ಈ ವಿಷಯದಲ್ಲಿ ದುಡುಕಿದ್ದು ಖೇದಕರ. ಎಸ್‌ಐಟಿಯ ಅಧಿಕಾರಿ ಕ್ಲಿಪ್ಪಿಂಗ್ ಕೊಟ್ಟಾಗಲೇ ಇಂಡಿಯಾ ಟುಡೇ ಟ್ರಾಪ್‌ ಗೆ ಬಿದ್ದಿತ್ತು ಅಲ್ಲವೇ?

ಈಗಲಾದರೂ ಪೊಲೀಸರ  ಆ ಅಮಾನುಷ ದೌರ್ಜನ್ಯವನ್ನು ಈ ಟಿವಿ ಚಾನೆಲ್‌ಗಳು ಖಂಡಿಸುತ್ತವೇ ಎಂದು ಆಶಿಸೋಣವೇ?


ಇದನ್ನೂ ಓದಿ | ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ: ವಿಡಿಯೋಗಳಿಂದ ಬಯಲು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...