Homeಕರ್ನಾಟಕಕವಿ ಜನಾರ್ದನ್ ಕೆಸರಗದ್ದೆ ಅವರಿಗೆ ಅಭಿನಂದನೆ ಸಲ್ಲಿಸಲಿರುವ ಒಡನಾಡಿಗಳು

ಕವಿ ಜನಾರ್ದನ್ ಕೆಸರಗದ್ದೆ ಅವರಿಗೆ ಅಭಿನಂದನೆ ಸಲ್ಲಿಸಲಿರುವ ಒಡನಾಡಿಗಳು

- Advertisement -
- Advertisement -

“ಪ್ರೀತಿಯ ಗಾಳಿ ಬೀಸುತಿದೆ! ಹಟ್ಟಿಮೊಹಲ್ಲಗಳಾ ನಡುವೆ! ಗಡಿಗಳ ಮೀರಿ ಗೆಳೆತನವಾ ಮಾಡೋಣ ಬಾ ನನ್ನ ಸಂಗಾತಿಯೇ….” ಎನ್ನುತ್ತಾ ಪ್ರೀತಿಯ ಗಾಳಿ ಬೀಸಿದ ಜನಕವಿ ಜನಾರ್ದನ್ ಕೆಸರಗದ್ದೆ ಅವರಿಗೆ ಅಭಿನಂದನೆ ಸಲ್ಲಿಸಲ್ಲು ಅವರ ಒಡನಾಡಿಗಳು ಕಾರ್ಯಕ್ರಮ ಆಯೋಜಿಸಿದ್ದಾರೆ.

ಕಳೆದ ಮೂರು ದಶಕಗಳಿಂದ ಕವಿ ಜನಾರ್ದನ್ ಕೆಸರಗದ್ದೆ ಅವರ ಒಡನಾಡದಲ್ಲಿದ್ದರು ಈ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದೇ ಶುಕ್ರವಾರ (ಜನವರಿ.7) ಸಂಜೆ 4 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೋವಿಡ್ ನಿಯಮಗಳ‌ ಪ್ರಕಾರವೇ ಕಾರ್ಯಕ್ರಮ ನಡೆಸಲು ಸಿದ್ಧತೆಗಳು ನಡೆದಿದಿದ್ದು, ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ನಿಗದಿತ ಸಮಯಕ್ಕೆ ಮೊದಲೇ ಬಂದರೆ ಅನುಕೂಲ ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಪರಿಸರ ಗೀತೆಗಳು, ಪರಿಸರಕ್ಕೆ ಮಾರಕವಾಗುವ ಅಭಿವೃದ್ದಿಯ ವಿರುದ್ಧ, ಲಿಂಗ ತಾರತಮ್ಯ, ಜಾತಿ ತಾರತಮ್ಯಗಳ ವಿರುದ್ಧ, ಪ್ರಜಾಪ್ರಭುತ್ವದಲ್ಲಿ ಮಾಹಿತಿ ಹಕ್ಕಿನ ಪ್ರಾಮುಖ್ಯತೆಯನ್ನು ತಿಳಿಸುವ ಇವರು ರಚಿಸಿರುವ ಗೀತೆಗಳು ಯುಜನತೆಯಲ್ಲಿ ಅರಿವಿನ ಕಿಚ್ಚು ಹಚ್ಚಿದೆ.

ಪ್ರತಿಭಟನೆ, ಕಾರ್ಯಕ್ರಮಗಳಲ್ಲಿ ಇವರ ಹೋರಾಟದ ಹಾಡುಗಳು ಕೇಳಿಸದೆ ಇರುವುದಿಲ್ಲ. ಇಂತಹ ಕವಿಯನ್ನು ಅಭಿನಂದಿಸುವ ಮೂಲಕ ನಮ್ಮ ನಂಬಿಕೆಯನ್ನೇ, ನಮ್ಮ ನಡಿಗೆಯನ್ನೇ ಗೌರವಿಸಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಜನಕವಿತಾ ವೆಬ್ಸೈಟ್ ಬಿಡುಗಡೆಯಾಗಲಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜನಕರು.


ಇದನ್ನೂ ಓದಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...