Homeಮುಖಪುಟಗಾಝಾ ಹತ್ಯಾಕಾಂಡ ಜಗತ್ತಿಗೆ ತೆರೆದಿಟ್ಟಿದ್ದ ಅಲ್ ಜಝೀರಾದ ಅಲ್‌-ದಹದೌಹ್‌ಗೆ 'ಕೇರಳದ ಮೀಡಿಯಾ ಪರ್ಸನ್‌ ಆಫ್‌ ದಿ...

ಗಾಝಾ ಹತ್ಯಾಕಾಂಡ ಜಗತ್ತಿಗೆ ತೆರೆದಿಟ್ಟಿದ್ದ ಅಲ್ ಜಝೀರಾದ ಅಲ್‌-ದಹದೌಹ್‌ಗೆ ‘ಕೇರಳದ ಮೀಡಿಯಾ ಪರ್ಸನ್‌ ಆಫ್‌ ದಿ ಇಯರ್‌’ ಪ್ರಶಸ್ತಿ

- Advertisement -
- Advertisement -

2023ರ ಕೇರಳ ಸರಕಾರದ ಮಾದ್ಯಮ ಪ್ರಶಸ್ತಿಗೆ ಅಲ್ ಜಝೀರಾದ ಗಾಝಾ ಬ್ಯೂರೋ ಮುಖ್ಯಸ್ಥ ವೇಲ್ ಅಲ್-ದಹದೌಹ್ ಅವರನ್ನು ಆಯ್ಕೆ ಮಾಡಲಾಗಿದೆ. ಯುದ್ಧ ಪೀಡಿತ ಗಾಝಾದಲ್ಲಿ ಸಂಭವಿಸಿದ ದುರಂತದ ನೈಜ ಚಿತ್ರವನ್ನು ಜಗತ್ತಿಗೆ ನೋಡಲು ಅವಕಾಶ ಮಾಡಿಕೊಟ್ಟ ನಿರ್ಭೀತ ವರದಿಗಾಗಿ ದಹದೌಹ್ ಅವರನ್ನು ಗುರುತಿಸಲಾಗಿದೆ ಎಂದು ಕೇರಳ ಮಾದ್ಯಮ ಅಕಾಡೆಮಿ ಹೇಳಿದೆ.

ಕೇರಳ ಮಾಧ್ಯಮ ಅಕಾಡೆಮಿ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದು, ಅಲ್ ಜಝೀರಾದ ಗಾಝಾ ಬ್ಯೂರೋ ಮುಖ್ಯಸ್ಥ ವೇಲ್ ಅಲ್-ದಹದೌಹ್ ಅವರನ್ನು ಕೇರಳ ಮಾದ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ ಮತ್ತು ಪ್ರಶಸ್ತಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನ ಮಾಡಲಿದ್ದಾರೆ. ತನಿಖಾ ಪತ್ರಕರ್ತರ ಸಂಘ ಮತ್ತು ಸಂಪಾದಕರ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಪ್ಯಾಲೆಸ್ತೀನ್ ಪತ್ರಕರ್ತ ದಹದೌಹ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ಅಲ್-ದಹದೌಹ್ ಅವರ ಪತ್ನಿ ಅಮ್ನಾ, ಮಗ ಮಹಮೂದ್, ಮಗಳು ಶಾಮ್ ಮತ್ತು ಮೊಮ್ಮಗ ಆಡಮ್ ಅವರು ಮೃತಪಟ್ಟಿದ್ದರು. ಅವರ ಇನ್ನೋರ್ವ ಮಗ ಹಮ್ಜಾ, ಅಲ್ ಜಝೀರಾ ಪತ್ರಕರ್ತನಾಗಿದ್ದು, ವೀಡಿಯೋಗ್ರಾಫರ್ ಮುಸ್ತಫಾ ತುರಾಯಾ ಅವರೊಂದಿಗೆ ಕರ್ತವ್ಯದಲ್ಲಿದ್ದಾಗ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ ದಕ್ಷಿಣ ಗಾಝಾದ ಖಾನ್ ಯೂನಿಸ್‌ನಲ್ಲಿ ಕೊಲ್ಲಲ್ಪಟ್ಟಿದ್ದರು.  ತನ್ನ ಕುಟುಂಬದ 8 ಮಂದಿಯನ್ನು ಯುದ್ಧದಲ್ಲಿ ಕಳೆದುಕೊಂಡಿದ್ದರೂ ಅಲ್‌ ದಹದಹ್‌ ಯುದ್ಧ ಭೂಮಿಯಲ್ಲಿ ವರದಿಯನ್ನು ಮುಂದುವರಿಸಿದ್ದರು.

ಕೇರಳ ಮಾದ್ಯಮ ಅಕಾಡೆಮಿಯ ಅಧ್ಯಕ್ಷರಾದ ಆರ್‌ ಎಸ್‌ ಬಾಬು ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು,  ಕೇರಳ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಗ್ಗೆ ಅವರಿಗೆ ತಿಳಿಸಿದಾಗ ವೇಲ್ ಅಲ್-ದಹದೌಹ್ ಈ ಪ್ರಶಸ್ತಿಯನ್ನು ಅಮೂಲ್ಯವಾದ ಗೌರವವೆಂದು ಬಣ್ಣಿಸಿದ್ದಾರೆ ಮತ್ತು ಅದರ ಬಗ್ಗೆ ತಿಳಿಸಿದ ನಂತರ ಅದಕ್ಕಾಗಿ ತಮ್ಮ ಮೆಚ್ಚುಗೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅಲ್ ಜಝೀರಾ ಪತ್ರಕರ್ತನ ಹೋರಾಟ ಮತ್ತು ಯುದ್ಧ ವಲಯದಿಂದ ವರದಿ ಮಾಡುವ ಸ್ಥೈರ್ಯವನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಅವರು ಅಲ್ ಜಝೀರಾ ಮೂಲಕ ಯುದ್ಧ ಪೀಡಿತ ಗಾಝಾದ ಕರುಣಾಜನಕ ದುಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳು ಸೇರಿದಂತೆ ಕುಟುಂಬದ ಒಟ್ಟು 8 ಸದಸ್ಯರನ್ನು ಕಳೆದುಕೊಂಡಿದ್ದಾರೆ. ಈ ಎಲ್ಲಾ ನಷ್ಟಗಳ ನಂತರವೂ ವೇಲ್ ಅಲ್-ದಹದೌಹ್ ಯುದ್ಧ ಭೂಮಿಯಲ್ಲಿ ಧೃರ್ಯ ಮತ್ತು ಸ್ತೈರ್ಯದಿಂದ ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.

ಡಿಸೆಂಬರ್ 2023ರಲ್ಲಿ ಯುಎನ್ ಶಾಲೆಯ ಮೇಲೆ ಇಸ್ರೇಲ್‌ ದಾಳಿ ಮಾಡುವುದನ್ನು ಚಿತ್ರೀಕರಿಸುವಾಗ ಅಲ್-ದಹದೌಹ್ ಮತ್ತು ಅವರ ಸಹೋದ್ಯೋಗಿ ಸಮರ್ ಅಬುದಾಕಾ ಗಾಯಗೊಂಡಿದ್ದರು, ಇಸ್ರೇಲ್‌ ಸೈನ್ಯವು ವೈದ್ಯಾಧಿಕಾರಿಗಳು ಸಮರ್‌ ಬಳಿ ತಲುಪದಂತೆ ತಡೆಯುತ್ತಿದ್ದರಿಂದ ಅವರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ದಾಳಿಯಲ್ಲಿ ಉಂಟಾದ ಗಾಯಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಲ್-ದಹದೌಹ್ ಕತಾರ್‌ಗೆ ತೆರಳಿದ್ದರು.

ಯುಎನ್ ವರದಿಗಳ ಪ್ರಕಾರ, ಗಾಝಾ ಮೇಲೆ ಇಸ್ರೇಲ್‌ ಸುಮಾರು 4 ತಿಂಗಳಿನಿಂದ ಆಕ್ರಮಣವನ್ನು ನಡೆಸುತ್ತಿದೆ. ಆಕ್ರಮಣದಲ್ಲಿ  27,000 ಜನರ ಹತ್ಯೆ ನಡೆದಿದೆ. ಅವರಲ್ಲಿ 122ಕ್ಕೂ ಹೆಚ್ಚು ಪತ್ರಕರ್ತರು ಸೇರಿದ್ದಾರೆ.

ಇದನ್ನು ಓದಿ: ಉತ್ತರಾಖಂಡ: UCC ಕುರಿತ 750 ಪುಟಗಳ ಅಂತಿಮ ಕರಡು ವರದಿ ಸಲ್ಲಿಕೆ; ತ್ರಿವಳಿ ತಲಾಖ್‌ಗೆ ಕಠಿಣ ಶಿಕ್ಷೆ ಸೇರಿ ಹಲವು ಅಂಶಗಳು ಉಲ್ಲೇಖ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...