Homeಮುಖಪುಟಮೋದಾನಿ ವಿರುದ್ಧ ಜೆಪಿಸಿ ತನಿಖೆಯಾಗಲಿ: ವಿರೋಧ ಪಕ್ಷಗಳ ಒಕ್ಕೊರಲ ಆಗ್ರಹ

ಮೋದಾನಿ ವಿರುದ್ಧ ಜೆಪಿಸಿ ತನಿಖೆಯಾಗಲಿ: ವಿರೋಧ ಪಕ್ಷಗಳ ಒಕ್ಕೊರಲ ಆಗ್ರಹ

- Advertisement -
- Advertisement -

ಅದಾನಿ ಹಗರಣ ಮತ್ತು ಅದರಲ್ಲಿ ಪ್ರಧಾನಿ ಮೋದಿಯವರ ಪಾತ್ರದ ಕುರಿತು ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳ ಸಂಸದರು ಇಂದು ಸಂಸತ್ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಸಂಸತ್ ಭವನದ ಎದುರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ವಿಪಕ್ಷಗಳ ಸಂಸದರು, ಮೋದಿಯವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೋದಿಜಿಯವರ “ಪರಮ ಮಿತ್ರ”ನನ್ನು ಉಳಿಸಲು ಸಂಸತ್ತನ್ನು ಸ್ಥಗಿತಗೊಳಿಸುತ್ತಿರುವ ಬಿಜೆಪಿಯ ಉದ್ದೇಶಪೂರ್ವಕ ಪ್ರಯತ್ನದ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಹೋರಾಡುತ್ತೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.

 

ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿ, “ಜೆಪಿಸಿ ವಿಚಾರದಲ್ಲಿ ಎಲ್ಲ ವಿರೋಧ ಪಕ್ಷಗಳು ಒಮ್ಮತ ಹೊಂದಿವೆ. ಮೋದಿ ಜಿ ಅವರ “ಆಪ್ತ ಸ್ನೇಹಿತ” ಅದಾನಿಯನ್ನು ಒಳಗೊಂಡಿರುವ ಮೆಗಾ ಹಗರಣದ ತನಿಖೆಗಾಗಿ ನಾವು ಇಡಿಗೆ ವಿವರವಾದ ಪತ್ರವನ್ನು ಹಸ್ತಾಂತರಿಸಲಿದ್ದೇವೆ. ಆದರೆ ಸರ್ಕಾರ ನಮ್ಮನ್ನು ತಡೆಯುತ್ತಿದೆ. ವಿರೋಧ ಪಕ್ಷಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಇಡಿ ಮೋದಿಯ ಗೆಳೆಯನ ವಿಳಾಸವನ್ನೇಕೆ ಮರೆತಿದೆ?” ಎಂದರು.

“ಕಳೆದ 3 ದಿನಗಳಲ್ಲಿ ಸ್ಪೀಕರ್ ಓಂ ಬಿರ್ಲಾರವರು ಬಿಜೆಪಿಯ ಮಂತ್ರಿಗಳಿಗೆ ಮಾತ್ರ ಮೈಕ್‌ನಲ್ಲಿ ಮಾತನಾಡಲು ಅವಕಾಶ ನೀಡಿ ಮತ್ತು ನಂತರ ಸಂಸತ್ತನ್ನು ಮುಂದೂಡಿ, ಒಬ್ಬ ವಿರೋಧ ಪಕ್ಷದ ಸದಸ್ಯನಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಮತ್ತು ಸ್ಪೀಕರ್ ಮುಂದೆ ನಿಂತು ಮುನ್ನಡೆಸುತ್ತಿದ್ದಾರೆ” ಎಂದು ಮೊಹುವ ಮೊಯಿತ್ರ ಕಿಡಿಕಾರಿದ್ದಾರೆ. ಅಲ್ಲದೆ ಈ ಟ್ವೀಟ್‌ಗಾಗಿ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ; ಡಬ್ಬಲ್ ಇಂಜಿನ್ ಸರಕಾರದ ಲಾಭ ನಷ್ಟ: ರಾಜ್ಯಗಳು ಕೊಡೋದೆಷ್ಟು? ವಾಪಸ್ ಪಡೆಯೋದೆಷ್ಟು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...