Homeಮುಖಪುಟಉತ್ತರಾಖಂಡ:ತುಂಡು ಉಡುಗೆ ಧರಿಸಿದವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ-ಬೋರ್ಡ್ ಅಳವಡಿಕೆ

ಉತ್ತರಾಖಂಡ:ತುಂಡು ಉಡುಗೆ ಧರಿಸಿದವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ-ಬೋರ್ಡ್ ಅಳವಡಿಕೆ

- Advertisement -
- Advertisement -

ಉತ್ತರಾಖಂಡದ ಪ್ರಸಿದ್ಧ ಕೈಂಚಿ ಧಾಮ್ ದೇವಾಲಯದಲ್ಲಿ ತುಂಡು ಉಡುಗೆಗಳನ್ನು ಧರಿಸುವ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ತುಂಡು ಉಡುಗೆಗಳನ್ನು ಧರಿಸುವುದು ‘ಅಗೌರವ’ ಮತ್ತು ‘ಅಸಭ್ಯ’  ವರ್ತನೆ ಎಂದು ಹೇಳಲಾಗಿದೆ.ಇದಲ್ಲದೆ  ದೇವಾಲಯದ ಒಳಗೆ ಫೋಟೊ ಕ್ಲಿಕ್ಕಿಸುವುದು  ಮತ್ತು ವೀಡಿಯೊಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ದೇವಸ್ಥಾನದ ಟ್ರಸ್ಟ್ ಸಭೆಯ  ಮೂಲಕ ಈ ನಿರ್ಧಾರವನ್ನು ಕೈಗೊಂಡಿದೆ. ಬಳಿಕ ಕೈಂಚಿ ಧಾಮ್ ದೇವಸ್ಥಾನದ ಹೊರಗಡೆ ಬೋರ್ಡ್ ಹಾಕಲಾಗಿದೆ. ಬೋರ್ಡ್‌ನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಸ್ತ್ರಗಳ ನೀತಿಸಂಹಿತೆ ಬಗ್ಗೆ ಸೂಚನೆ ನೀಡಲಾಗಿದೆ.

ನೈನಿತಾಲ್‌ನಿಂದ 19 ಕಿಮೀ ದೂರದಲ್ಲಿ ಕೈಂಚಿ ಧಾಮ್ ದೇವಾಲಯ ಇದೆ. ಕೈಂಚಿ ಧಾಮ ದೇವಾಲಯದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿರುವ ಬೋರ್ಡ್‌ನಲ್ಲಿ, “ಶ್ರೀ ಕೈಂಚಿ ಧಾಮದ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಲು ಬರುವ ಎಲ್ಲಾ ಭಕ್ತರು ದೇವಾಲಯದ ಆವರಣವನ್ನು ‘ಅಗೌರವ’ ಮತ್ತು ‘ಅಸಭ್ಯ’ ಉಡುಪುಗಳನ್ನು ಧರಿಸಿ ಪ್ರವೇಶಿಸುವುದನ್ನು ನಿಷೇಧಿಸಿದೆ” ಎಂದು ಬರೆಯಲಾಗಿದೆ.

ಇದನ್ನು ಓದಿ:ದೆಹಲಿ ಸೇವಾ ಮಸೂದೆಗೆ ಅನುಮೋದನೆ: ದೇಶದ ಇತಿಹಾಸದಲ್ಲೇ ಇದು ಕರಾಳ ದಿನ ಎಂದು ಕಿಡಿಕಾರಿದ ಕೇಜ್ರಿವಾಲ್

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read