Homeಮುಖಪುಟಜರ್ಮನಿಯಲ್ಲಿ 2ನೇ ವಿಶ್ವ ಯುದ್ಧದ ಬಾಂಬ್ ಪತ್ತೆ: 13,000 ಜನರಿಗೆ ಮನೆ ತೊರೆಯಲು ಸೂಚನೆ

ಜರ್ಮನಿಯಲ್ಲಿ 2ನೇ ವಿಶ್ವ ಯುದ್ಧದ ಬಾಂಬ್ ಪತ್ತೆ: 13,000 ಜನರಿಗೆ ಮನೆ ತೊರೆಯಲು ಸೂಚನೆ

- Advertisement -
- Advertisement -

ಎರಡನೇ ವಿಶ್ವ ಯುದ್ಧದ ವೇಳೆಯಲ್ಲಿನ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿರುವ ಅಧಿಕಾರಿಗಳು ಸರಿಸುಮಾರು 13,000 ಜನರನ್ನು ಮನೆಗಳನ್ನು ತೊರೆಯುವಂತೆ ಸೂಚಿಸಿದ್ದಾರೆ.

ಸಜೀವ  ಬಾಂಬ್‌ನ್ನು ವಿಲೇವಾರಿ ಮಾಡಲು ಪೊಲೀಸ್ ಮತ್ತು ಬಾಂಬ್ ಸ್ಕ್ವಾಡ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಜರ್ಮನ್ ಸುದ್ದಿವಾಹಿನಿ ಡಿಡಬ್ಲ್ಯೂ ಹೇಳಿದೆ.

ಒಂದು ಟನ್ ತೂಕದ ಬಾಂಬ್ ನ್ನು  ಆಗಸ್ಟ್ 7-8 ರಂದು ಪತ್ತೆಹಚ್ಚಲಾಗಿದೆ. ನಗರದ ಮೃಗಾಲಯದ ಬಳಿ ಕೆಲಸದ ಸಮಯದಲ್ಲಿ ಇದು ಪತ್ತೆಯಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಔಟ್‌ಲೆಟ್  ವರದಿ ಮಾಡಿದೆ.

ಎರಡನೇ ವಿಶ್ವಯುದ್ಧದ ವೇಳೆ ಉಳಿದಿರುವ ಸಾವಿರಾರು ಬಾಂಬ್‌ಗಳನ್ನು ಇನ್ನೂ ಜರ್ಮನಿಯಲ್ಲಿ ಹೂಳಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಡಸೆಲ್ಡಾರ್ಫ್‌ನಲ್ಲಿ, ಅಧಿಕಾರಿಗಳು ಬಾಂಬ್‌ ಪತ್ತೆಯಾದ ಸ್ಥಳದ 500-ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯಲು ಆದೇಶಿಸಿದ್ದಾರೆ. ಬಾಂಬ್ ವಿಲೇವಾರಿ ಕಾರ್ಯಾಚರಣೆಯ ಸಮಯದಲ್ಲಿ ಆ ಭಾಗದ ರಸ್ತೆಗಳನ್ನು ಕೂಡ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಸ್ಥಳೀಯ  ನಿವಾಸಿಗಳು ತಮ್ಮ ಸಾಕುಪ್ರಾಣಿಗಳ  ಜೊತೆ ಮನೆಯನ್ನು ತೊರೆದು ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. 2017ರಲ್ಲಿ 1.4ಟನ್ ಬಾಂಬ್ ಪತ್ತೆಯಾದ ವೇಳೆ ಸರಿಸುಮಾರು 65,000 ಜನರನ್ನು ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿತ್ತು.

2021ರಲ್ಲಿ ಕೂಡ ಎರಡನೇ ವಿಶ್ವ ಯುದ್ಧದ ವೇಳೆಯಲ್ಲಿನ ಸಜೀವ ಬಾಂಬ್ ವೊಂದು ಕಾಮಗಾರಿ ಕಟ್ಟಡದ ಬಳಿ ಸ್ಪೋಟಗೊಂಡು ನಾಲ್ವರು ಗಾಯಗೊಂಡಿದ್ದರು ಮತ್ತು ರೈಲ್ವೇ ಹಳಿಗಳು ಹಾನಿಯಾಗಿದ್ದವು.

ಇದನ್ನು ಓದಿ: ಚಲುವರಾಯಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪತ್ರ ನಕಲಿ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...