Homeಕರ್ನಾಟಕಕನಕದಾಸರ ಪಠ್ಯ ಕಡಿತಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ನಿರಂಜನಾನಂದಪುರಿ ಸ್ವಾಮೀಜಿ

ಕನಕದಾಸರ ಪಠ್ಯ ಕಡಿತಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ನಿರಂಜನಾನಂದಪುರಿ ಸ್ವಾಮೀಜಿ

ಸರ್ಕಾರದ ಉದ್ಧಟತನಗಳು, ಕಾರ್ಯವೈಖರಿಗಳು ಇದೇ ರೀತಿಯಾಗಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ.

- Advertisement -
- Advertisement -

ಪಠ್ಯ ಪರಿಷ್ಕರಣೆಯಲ್ಲಿ ನೂರಾರು ಲೋಪಗಳು ಸಂಭವಿಸಿದ್ದರೂ ಸರ್ಕಾರ ಅದೇ ಪಠ್ಯಗಳನ್ನು ಬೋಧಿಸಲು ಮುಂದಾಗುತ್ತಿದ್ದಂತೆ ಹಲವು ವಲಯಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಪಠ್ಯ ಪರಿಷ್ಕರಣೆ ವಿರೋಧಿ ಹೋರಾಟಕ್ಕೆ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿಗಳು ದನಿಗೂಡಿಸಿದ್ದು, ತಪ್ಪು ಸರಿಪಡಿಸಿಕೊಳ್ಳದಿದ್ದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯಲ್ಲಿ ಒಂದು ಪುಟದಷ್ಟಿದ್ದ ಕನಕದಾಸರ ಪಠ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿಯು ಒಂದು ವಾಕ್ಯಕ್ಕೆ ಇಳಿಸಿದೆ ಎಂಬು ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಉದ್ಧಟತನಗಳು, ಕಾರ್ಯವೈಖರಿಗಳು ಇದೇ ರೀತಿಯಾಗಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರೀ ಗೊಂದಲ ಸೃಷ್ಟಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಆದಂತಹ ಲೋಪದೋಷಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ ಎಂದು ಮಾಧ್ಯಮಗಳ ಮೂಲಕ ಹೇಳಲು ಇಷ್ಟಪಡುತ್ತೇನೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಶಿಕ್ಷಣವನ್ನು ಯಾವುದೇ ಒಂದು ಜಾತಿಗೆ ಸೀಮಿತ ಮಾಡಬಾರದು ಎಂಬುದು ನಮ್ಮ ಧ್ಯೇಯ. ಕುವೆಂಪುರವರ, ಜಗಜ್ಯೋತಿ ಬಸವಣ್ಣನವರ, ಕನಕದಾಸರ ಸತ್ಯವಾದ ಜೀವನ ಚರಿತ್ರೆಯನ್ನು ಎಲ್ಲಾ ಸಮುದಾಯಕ್ಕೆ ಪ್ರಾಮಾಣಿಕವಾಗಿ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರಲ್ಲಿ ಕೆಲವೊಂದು ಅಂಶಗಳನ್ನು ಮುಚ್ಚಿಟ್ಟು, ಇಲ್ಲ ಸಲ್ಲದ ಅಂಶಗಳನ್ನು ಮಕ್ಕಳಿಗೆ ಕಲಿಸುವುದು, ಸಮಾಜಕ್ಕೆ ತಿಳಿಸುವುದು ಅಕ್ಷಮ್ಯ. ಈ ತಪ್ಪನ್ನು ನೀವು ಆದಷ್ಟು ಬೇಗ ಸರಿಪಡಿಸಿಕೊಳ್ಳುತ್ತೀರಿ ಎಂದು ನಂಬಿದ್ದೇನೆ. ತಪ್ಪಿದ್ದಲ್ಲಿ ನಾವು ಕೂಡ ಎಲ್ಲರ ಜೊತೆಗೂಡಿ ಹೋರಾಟಕ್ಕಿಳಿಯಬೇಕಾಗುತ್ತೆ ಎಂದು ಅವರು ಹೇಳಿದ್ದಾರೆ.

ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಶಿಶುನಾಳ ಷರೀಫರ ವ್ಯಕ್ತಿಚಿತ್ರಣವನ್ನು ಪರಿಚಯಿಸಲಾಗಿತ್ತು. ಸಮಾಜದ ಮೇಲೆ ಅವರು ಬೀರಿದ ಪ್ರಭಾವವನ್ನು ತಿಳಿಸಲಾಗಿತ್ತು. ಆದರೆ ಈ ವಿವರಗಳನ್ನು ತೆರವು ಮಾಡಿರುವ ಚಕ್ರತೀರ್ಥ ಸಮಿತಿಯು, ಕರ್ನಾಟಕದಲ್ಲಿ ಭಕ್ತಿಪಂಥ ಚಳಿವಳಿಕಾರರ ಇತಿಹಾಸವನ್ನು ಎರಡು ವಾಕ್ಯಗಳಿಗೆ ಸೀಮಿತ ಮಾಡಿದೆ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ಹೊಸದಾಗಿ ಸೇರಿಸಲಾಗಿದೆ. ಆದರೆ ಕರ್ನಾಟಕದ ದಾಸವರೇಣ್ಯರ ವಿವರ ಕೈಬಿಡಲಾಗಿದೆ. ಅಲ್ಲದೆ ಗುರುನಾನಕರ್‌ರ ಪಾಠದಲ್ಲೂ ಕತ್ತರಿ ಪ್ರಯೋಗ ನಡೆದಿದೆ. ಪೂರ್ತಿ ವಿವರಗಳಿಗಾಗಿ ಈ ಸುದ್ದಿ ಓದಿ

ಇದನ್ನೂ ಓದಿ: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...