Homeಮುಖಪುಟಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿದ್ದಾರೆ: ಮುಂಬೈ ಸಿವಿಲ್ ಕೋರ್ಟ್

ಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿದ್ದಾರೆ: ಮುಂಬೈ ಸಿವಿಲ್ ಕೋರ್ಟ್

- Advertisement -
- Advertisement -

ಮಹಾರಾ‍‍ಷ್ಟ್ರ ಸರ್ಕಾರ ಮತ್ತು ಕಂಗನಾ ರಾಣಾವತ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮುಂಬೈ ಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿರುವುದು ಸ್ಪಷ್ಟ ಎಂದು ಮುಂಬೈ ಸಿವಿಲ್ ಕೋರ್ಟ್ ಹೇಳಿದೆ. ಕಂಗನಾ ತನ್ನ ಮೂರು ಫ್ಲ್ಯಾಟ್‌ಗಳನ್ನು ವಿಲೀನಗೊಳಿಸುವಾಗ ಮಂಜೂರಾದ ಯೋಜನೆಯನ್ನು ಉಲ್ಲಂಘಿಸಿದ್ದಾರೆ ಎಂದಿರುವ ಕೋರ್ಟ್ ತನ್ನ ಅನಧಿಕೃತ ಫ್ಲ್ಯಾಟ್‌ ಕೆಡವದಂತೆ ಕಂಗನಾ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆಯು ತನ್ನ ಅನಧಿಕೃತ ಕಟ್ಟಡವನ್ನು ಕೆಡವದಂತೆ ತಡೆಯಬೇಕೆಂದು ಕಳೆದ ವಾರ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಉಪನಗರ ದಿಂಡೋಶಿಯಲ್ಲಿನ ನ್ಯಾಯಾಧೀಶರಾದ ಎಲ್ ಎಸ್ ಚವಾಣ್ ಕಂಗನಾ ಮನವಿಯನ್ನು ತಿರಸ್ಕರಿಸಿದ್ದಾರೆ.

ಮುಂಬೈನ ಖಾರ್ ಪ್ರದೇಶದಲ್ಲಿ 16 ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ಮೂರು ಫ್ಲ್ಯಾಟ್‌ಗಳನ್ನು ಹೊಂದಿರುವ ಕಂಗನಾ ಅವನ್ನು ಒಂದಾಗಿ ವಿಲೀನಗೊಳಿಸಿದ್ದಾರೆ. ಹಾಗೆ ಮಾಡುವಾಗ ಫ್ಲ್ಯಾಟ್‌ಗಳ ಸಾಮಾನ್ಯ ಹಾದಿ, ಹೊರಾಂಡ, ಬಾಲ್ಕನಿ ಸೇರಿದಂತೆ ಇತರರಿಗೂ ಸೇರಿದ ಹಲವು ಜಾಗಗಳನ್ನು ನಿಯಮಬಾಹಿರವಾಗಿ ವಾಸಯೋಗ್ಯ ಪ್ರದೇಶವಾಗಿ ಪರಿವರ್ತಿಸಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

“ಇವು ಮಂಜೂರಾದ ಯೋಜನೆಯ ಗಂಭೀರ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ಸಮರ್ಥ ಪ್ರಾಧಿಕಾರದ ಅನುಮತಿ ಅಗತ್ಯ” ಎಂದು ನ್ಯಾಯಾಲಯ ಹೇಳಿದೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆಯು 2018ರ ಮಾರ್ಚ್‌ನಲ್ಲಿಯೇ ಇದು ಅನಧಿಕೃತ ನಿರ್ಮಾಣವೆಂದು ಕಂಗನಾ ರಾಣವತ್‌ಗೆ ನೋಟಿಸ್ ನೀಡಿತ್ತು. ಅಲ್ಲದೇ ಮತ್ತೊಂದು ನೋಟಿಸ್‌ನಲ್ಲಿ ಈ ಫ್ಲ್ಯಾಟ್‌ಗಳ ವಿಲೀನವನ್ನು ಮೊದಲಿದ್ದ ಯಥಾಸ್ಥಿತಿಗೆ ತರಬೇಕೆಂದು ಹೇಳಿ, ಇಲ್ಲದಿದ್ದಲ್ಲಿ ಅನಧಿಕೃತ ಭಾಗವನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.

ಈ ತೆರವು ನೋಟಿಸ್‌ ಅನ್ನು ಕೋರ್ಟ್‌ನಲ್ಲಿ ಕಂಗನಾ ಪ್ರಶ್ನಿಸಿ, ಮಹಾನಗರ ಪಾಲಿಕೆಯು ತೆರವು ಕಾರ್ಯಾಚರಣೆ ನಡೆಸದಂತೆ ಒತ್ತಾಯಿಸಿದ್ದರು. ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು.

ಇತ್ತೀಚಿಗಿನ ಡಿಸೆಂಬರ್ 23ರ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ಮುಂಬೈ ಸಿವಿಲ್ ಕೋರ್ಟ್ ಕಂಗನಾ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ ಈ ಕೋರ್ಟ್‌ನ ಮಧ್ಯಪ್ರವೇಶ ಅಗತ್ಯವಿಲ್ಲ. ಹಾಗಿದ್ದರೂ ಇನ್ನು ಆರು ವಾರಗಳಲ್ಲಿ ಮುಂಬೈ ಹೈಕೋರ್ಟ್‌ ಅನ್ನು ಸಂಪರ್ಕಿಸಬಹುದೆಂದು ಹೇಳಿತ್ತು.

ಸೆಪ್ಟೆಂಬರ್ 9 ರಂದು, “ಅನಧಿಕೃತ” ನಿರ್ಮಾಣದ ಆರೋಪದ ಮೇಲೆ ಬಿಎಂಸಿಯು ಪಾಲಿ ಹಿಲ್ ಪ್ರದೇಶದಲ್ಲಿನ ಕಂಗನಾರ ಬಂಗಲೆಯ ಕೆಲ ಭಾಗಗಳನ್ನು ನೆಲಸಮ ಮಾಡಿತ್ತು. ಅವರು ಅದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಿಎಂಸಿಯ ಕ್ರಮವನ್ನು ಕಾನೂನುಬಾಹಿರ ಮತ್ತು ದುರುದ್ದೇಶಪೂರಿತ ಎಂದು ಹೈಕೋರ್ಟ್ ಹೇಳಿತ್ತು.


ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...