Homeಕರ್ನಾಟಕಸದನದಲ್ಲಿ ಮಹತ್ವದ ಚರ್ಚೆ, ಹಾಸ್ಯ, ನೋವು: ಕಲಾಪ ಸೋಮವಾರಕ್ಕೆ..

ಸದನದಲ್ಲಿ ಮಹತ್ವದ ಚರ್ಚೆ, ಹಾಸ್ಯ, ನೋವು: ಕಲಾಪ ಸೋಮವಾರಕ್ಕೆ..

- Advertisement -
- Advertisement -

ರಾಜ್ಯ ಸರ್ಕಾರದ ಹಾವು ಏಣಿ ಆಟ ಮುಂದುವರೆದಿದ್ದು ಇಂದು ಸಹ ಸದನದಲ್ಲಿ ಮಹತ್ವದ ಚರ್ಚೆ, ವಾಗ್ವಾದ ಮತ್ತು ಗದ್ದಲ ನಡೆದು ಕೊನೆಗೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ರವರು ಸೋಮವಾರಕ್ಕೆ ಮುಂದೂಡಿದರು.

ಸೋಮವಾರ ಏನೇ ಆಗಲಿ ಒಂದು ಇತ್ಯರ್ಥ ಮಾಡುತ್ತೇವೆ ಎಂದು ಮಾತುಕೊಟ್ಟ ಬಳಿಕವಷ್ಟೇ ಸದನದ ಕಲಾಪವನ್ನು ಮುಂದೂಡಿದ್ದ ಅಲ್ಲಿಯವರೆಗೂ ಬಿಜೆಪಿ ಕಾಯಬೇಕಾಗಿದೆ ಮಾತ್ರವಲ್ಲ ಬಂಡಾಯವೆದ್ದಿರುವ ಅತೃಪ್ತ ಶಾಸಕರನ್ನು ಕಾಯುವ ಕೆಲಸ ಮಾಡಬೇಕಿದೆ.

ಇನ್ನು ಮೈತ್ರಿ ಸರ್ಕಾರ ಚರ್ಚೆಯನ್ನು ಮನಬಂದಂತೆ ಎಳೆದುದ್ದಲ್ಲದೇ ಸೋಮವಾರ ಕುಮಾರಸ್ವಾಮಿಯವರು ರಾಜೀನಾಮೆ ನೀಡುವುದು ಖಚಿತವಾಗಿದ್ದು ಅಲ್ಲಿಯವರೆಗೂ ಬಿಜೆಪಿಯವರನ್ನು ಕಾಡಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದೆ.

ಇಂದು ರಾತ್ರಿ 12 ಗಂಟೆಯಾದರೂ ಪರವಾಗಿಲ್ಲ, ನಾವು ಸದನದಲ್ಲಿರುತ್ತೇವೆ, ದಯವಿಟ್ಟು ಇಂದು ತೀರ್ಮಾನ ಮಾಡಿ ಎಂದು ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪನವರು ಪದೇ ಪದೇ ಸ್ಪೀಕರ್ ಬಳಿ ಮನವಿ ಮಾಡಿದರೂ ಸ್ಪೀಕರ್ ರವರು ಕರಗದೇ ಕೊನೆಗೂ ಕಲಾಪ ಮುಂದೂಡಿದರು.

ಇದಕ್ಕೂ ಮೊದಲು ಇಂದು 1:30ರವರೆಗೆ ಡೆಡ್ ಲೈನ್ ಕೊಟ್ಟಿದ್ದ ರಾಜ್ಯಪಾಲರು ತಮ್ಮ ಮಾತನ್ನು ಸಿಎಂ ಕುಮಾರಸ್ವಾಮಿಯವರು ಮೀರಿದ್ದರಿಂದ ಸಂಜೆ ಆರು ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಮತ್ತೊಮ್ಮೆ ಡೆಡ್ ಲೈನ್ ಕೊಟ್ಟರೂ ಸಹ ಸಿಎಂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಕೊಡಲಿಲ್ಲ.

ಇನ್ನು ಆಡಳಿತ ಪಕ್ಷದ ಪರ ಒಬ್ಬರ ನಂತರ ಒಬ್ಬರಂತೆ ಭಾಷಣ ಬಿಗಿದರು. ಕಾಂಗ್ರೆಸ್ ನ ಕೃಷ್ಣಭೈರೇಗೌಡ ಮತ್ತು ಜೆಡಿಎಸ್ ಶಿವಲಿಂಗೇಗೌಡರವರು ಅದ್ಭುತವಾಗಿ ಮಾತನಾಡಿ ಮೆಚ್ಚುಗೆ ಗಳಿಸಿದರು. ತದನಂತರ ಎಚ್.ಡಿ ರೇವಣ್ಣನವರು ಮಾತಿನ ಚಟಾಕಿ ಹಾರಿಸಿದರು. ಇಡೀ ವರ್ಷಪೂರ್ತಿ ನನ್ನ ಬಗ್ಗೆಯೇ ಮಾತಾಡಿದ್ದೀರಿ ಇಂದು ನನಗೆ ಮಾತಾಡಲು ಎರಡು ಗಂಟೆ ಅವಕಾಶ ಕೊಡಬೇಕು ಸಭಾಧ್ಯಕ್ಷರೆ ಎಂದರು.

ಆಗ ರಮೇಶ್ ಕುಮಾರ್ ರವರು ಖಂಡಿತ ಸಮಯ ಕೊಡುತ್ತೇವೆ ರೇವಣ್ಣನವರೆ ಅದಕ್ಕೂ ಮೊದಲು ಯಾವಾಗ ಕೊಡಬೇಕು ಎಂದು ನಮ್ಮ ಜ್ಯೋತಿಷಿಯವರನ್ನು ಕೇಳಿ, ಯಾವ ಗಳಿಗೆ ಕೊಡಬೇಕು ಎಂದು ಹೇಳುತ್ತೀವಿ ಎಂದು ತಮಾಷೆ ಮಾಡುವ ಮೂಲಕ ಇಡೀ ಸದನ ನಗೆಗಡಲಲ್ಲಿ ಮುಳುಗುವಂತೆ ಮಾಡಿದರು. ನಂತರ ರೇವಣ್ಣನವರು ಮನೆಲೀ ಹೆಂಗಸರು ಕಾಯುತ್ತಿದ್ದಾರೆ, ಒಂದು ವಾರವಾಯಿತು ಬಂದು, ಹಾಗಾಗಿ ಇಂದಿನ ಸದನದ ಕಲಾಪವನ್ನು ಬೇಗ ಮುಗಿಸಿ ನಾವು ಮನೆಗೆ ಹೋಗಲು ಅವಕಾಶ ಕೊಡಿ ಎಂದರು.

ಸ್ಪೀಕರ್ ರಮೇಶ್ ಕುಮಾರ್ ರವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಳಿ ದಯವಿಟ್ಟು ಇಂದು ಎಷ್ಟು ಗಂಟೆಗೆ ಮುಗಿಸುತ್ತೀರಿ ಹೇಳಿ ಎಂದು ಮನವಿ ಮಾಡಿದಾಗ ಸಿದ್ದರಾಮಯ್ಯನವರು “ಇನ್ನು ಬಹಳಷ್ಟು ಜನ ಮಾತಾಡುವವರಿದ್ದಾರೆ ಹಾಗಾಗಿ ಸೋಮವಾರ ಮುಂದೂಡಬೇಕಾಗಿ ಮನವಿ” ಎಂದು ಹೇಳಿದರು

ನಂತರ ಸ್ಪೀಕರ್ ರವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read