Homeಕರ್ನಾಟಕಕರ್ನಾಟಕ ರಾಜ್ಯೋತ್ಸವ | ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕರ್ನಾಟಕ ರಾಜ್ಯೋತ್ಸವ | ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

- Advertisement -
- Advertisement -

ಒಡೆದು ಚೂರು ಚೂರಾಗಿದ್ದ ಕರ್ನಾಕಟ ಮತ್ತೇ ಒಂದಾದ ದಿನ ನವೆಂಬರ್‌ 1. ವಿಶ್ವದಾದ್ಯಂತ ಇರುವ ಕರ್ನಾಟಕದವರು 66 ನೇ ‘ನಾಡಹಬ್ಬ’ವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಾ ಒಂದು ವಾರ ಮುಂಚೆಯೇ ‘ನಾಡಹಬ್ಬ’ಕ್ಕೆ ಬೇಕಾದ ತಯಾರಿಯನ್ನು ಮಾಡಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯ ವಿಶೇಷ ಸಂದರ್ಭದಲ್ಲಿ “ಕನ್ನಡಕ್ಕಾಗಿ ನಾವು” ಅಭಿಯಾನದ ಭಾಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.ಗೌರಿ ಮೀಡಿಯಾದ ಪುಸ್ತಕಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿರುವ ಮೇಳವು ಅಕ್ಟೋಬರ್ 29 ರಂದು ಆರಂಭವಾಗಿದ್ದು, ನವೆಂಬರ್ 02ರ ಸಂಜೆಯವರೆಗೂ ನಡೆಯಲಿದೆ. ಮೇಳದಲ್ಲಿ ಸಾಂಪ್ರದಾಯಿಕ ಉಡುಗೆ ತೊಡಿಗೆ, ದೇಸೀಯ ಆಹಾರ ಮೇಳ, ಚಿತ್ರಕಲೆ / ಶಿಲ್ಪಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ವಿಶೇಷ ಅಭಿಯಾನದ ಭಾಗವಾಗಿ ಎಲ್ಲಾ ರೀತಿಯ ಪುಸ್ತಕಗಳನ್ನೂ 20% ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಕನ್ನಡದ ಓದು ಕಟ್ಟಿಕೊಟ್ಟ ವೈವಿಧ್ಯತೆಯ, ಸಹನೆಯ, ಬಹುತ್ವದ ವಿವೇಕ

ಸುಮಾರು 60ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, 15ಕ್ಕೂ ಹೆಚ್ಚು ಚಿತ್ರಕಲಾ, ಆಹಾರ ಮಳಿಗೆಗಳು ಪುಸ್ತಕ ಪ್ರೇಮಿಗಳು, ಕಲಾ ಪ್ರೇಮಿಗಳು ಹಾಗೂ ಗ್ರಾಹಕರನ್ನು ಸೆಳೆಯುತ್ತಿವೆ.

ಅಕ್ಟೋಬರ್ 29 ರಂದು ಆರಂಭವಾದ ಈ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್ ಅವರು ಉದ್ಘಾಟಿಸಬೇಕಿತ್ತು. ಆದರೆ, ಕನ್ನಡದ ಖ್ಯಾತ ನಟ ಪುನೀತ್‌ ಅವರ ಹಠಾತ್‌ ಅಗಲಿಕೆಯಿಂದ ಮೇಳವು ಉದ್ಘಾಟನೆಯೇ ಇಲ್ಲದೆ ಆರಂಭವಾಗಿದೆ. ಪುನೀತ್‌ ಅವರ ಅಗಲಿಕೆಯಿಂದ ಇಡೀ ರಾಜ್ಯವೇ ಶೋಕದಲ್ಲಿದ್ದರಿಂದಾಗಿ ಮೇಳವೂ ಗ್ರಾಹಕರಿಲ್ಲದೇ, ಸದ್ದು, ಸಡಗರವಿಲ್ಲದೇ ಸೊರಗಿದಂತಾಗಿತ್ತು.

ಆದರೆ, ಇಂದು ಕನ್ನಡ ರಾಜ್ಯೋತ್ಸವದ ದಿನದಂತೆ ಮೇಳವು ಕೊಂಚ ಕಳೆಯನ್ನು ಪಡೆದುಕೊಂಡಿದೆ. ಪುಸ್ತಕ ಪ್ರೇಮಿಗಳು, ಗ್ರಾಹಕರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗಿನಿಂದ ನಿಧಾನಗತಿಯಲ್ಲಿ ಗ್ರಾಹಕರು ರವೀಂದ್ರ ಕಲಾಕ್ಷೇತ್ರದ ಕಡೆಗೆ ಹೆಜ್ಜೆ ಇಡುತ್ತಿದ್ದು, ಮೇಳವು ಹಂತ ಹಂತವಾಗಿ ಮೇಳೈಸಲಾರಂಭಿಸುತ್ತಿದೆ.

ಇದನ್ನೂ ಓದಿ: 66ನೇ ಕನ್ನಡ ರಾಜ್ಯೋತ್ಸವ; ಹಿಂದೆಂದೂ ಕಾಣದ ದೆಹಲಿ ದಾಸ್ಯದ ಸುಳಿಯಲ್ಲಿ ಕರ್ನಾಟಕ!

ಬುದ್ದ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು, ಕಾರ್ಲ್‌ಮಾರ್ಕ್ಸ್‌, ಭಗತ್‌ಸಿಂಗ್, ಚೆಗುವೆರಾ, ಬೇಂದ್ರೆ ಸೇರಿದಂತೆ ಹಲವಾರು ಮಹನೀಯರ ಪುಸ್ತಕಗಳು ರಿಯಾಯತಿ ದರದಲ್ಲಿ ಮಾರಾಟವಾಗುತ್ತಿವೆ.

ಪುಸ್ತಕ ಮೇಳದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುವ ವಂಶಿ ಪ್ರಕಶನದ ಪ್ರಕಾಶ್‌, “ಪುನೀತ್‌ ಅವರ ಅಗಲಿಕೆಯಿಂದಾಗಿ ಗ್ರಾಹಕರು ಪುಸ್ತಕ ಮೇಳದ ಕಡೆಗೆ ಬಂದಿರಲಿಲ್ಲ. ಇಂದು ಗ್ರಾಹಕರು ಮಳಿಗೆಗಳತ್ತ ಮುಖ ಮಾಡಿದ್ದಾರೆ. ಎರಡು ದಿನಳಿಂದ ಗ್ರಾಹಕರಿಲ್ಲದೇ ಕಳೆಗುಂದಿದ್ದ ಮೇಳ, ಈಗ ಮೆರಗು ಪಡೆದುಕೊಳ್ಳುತ್ತಿದೆ” ಎಂದು ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅಭಿನವ ಪ್ರಕಶನದ ರವಿ, “ಮೇಳವು ಉದ್ಘಾಟನೆಗೊಳ್ಳುವ ವೇಳೆಗೆ ಪುನೀತ್‌ ಅವರು ಕೊನೆಯುಸಿರೆಳೆದರು. ಅವರ ಸಾವಿನಿಂದಾಗಿ ಇಡೀ ಅಭಿಮಾನಿ ಬಳಗವೇ ಶೋಕದಲ್ಲಿ ಮುಳುಗಿತ್ತು. ನಾವೂ ಕೂಡ ಪುನೀತ್‌ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೆವು. ಹೀಗಾಗಿ, ಎಲ್ಲವೂ ಸ್ಥಬ್ದವಾಗಿತ್ತು. ಕಳೆದು ಎರಡು ದಿನಗಳಲ್ಲಿ ಯಾವುದೇ ವ್ಯಾಪಾರವೂ ಆಗಿಲ್ಲ. ಇದೀಗ ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ನಾಳೆಯವರೆಗೂ ಮಳಿಗೆಗಳು ತೆರೆದಿರಲಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡವೆಂದರೆ ನಮ್ಮ ದೇವ ಭಾಷೆ; ‘ಅಪ್ಪು’ ನೆನೆದು ಎಚ್‌ಡಿಕೆ ಸರಣಿ ಟ್ವೀಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...