Homeಚಳವಳಿಕಸಾಪ ಅಧ್ಯಕ್ಷರ ಹೊಸ ವಿವಾದ: ಸದಸ್ಯರಾದರಷ್ಟೇ ಪುಸ್ತಕ ಮಳಿಗೆಗೆ ಅವಕಾಶ!

ಕಸಾಪ ಅಧ್ಯಕ್ಷರ ಹೊಸ ವಿವಾದ: ಸದಸ್ಯರಾದರಷ್ಟೇ ಪುಸ್ತಕ ಮಳಿಗೆಗೆ ಅವಕಾಶ!

ಕಸಾಪ ಸದಸ್ಯರಾದರಷ್ಟೇ ಸಮ್ಮೇಳನದ ಪ್ರತಿನಿಧಿಯಾಗಲು, ಪುಸ್ತಕ ಮಳಿಗೆ ಪಡೆಯಲು ಸಾಧ್ಯ- ಇದು ತುಘಲಕ್ ದರ್ಬಾರ್‌ ಎಂದ ಪ್ರಕಾಶಕರು

- Advertisement -
- Advertisement -

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಬಾರಿ ಮುಂದೂಡಿಕೆಗಳೊಂದಿಗೆ ಕೊನೆಗೂ 2023ರ ಜನವರಿ 6,7,8 ರಂದು ಹಾವೇರಿಯಲ್ಲಿ ನಡೆಸಲು ತಯಾರಿಗಳು ನಡೆದಿವೆ. ಸಾಮರಸ್ಯದ ಭಾವ – ಕನ್ನಡದ ಜೀವ ಎಂಬ ಧ್ಯೇಯವಾಕ್ಯದೊಂದಿಗೆ ಕನ್ನಡಿಗರೆಲ್ಲರೂ ಸೇರಿ ‘ಕನ್ನಡಿಗರ ಹಬ್ಬ’ ಎಂಬ ಭಾವನೆಯಿಂದ ಒಗ್ಗಟಾಗಿ ಆಚರಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಕಸಾಪ ಸದಸ್ಯರಾದರಷ್ಟೇ ಸಮ್ಮೇಳನದ ಪ್ರತಿನಿಧಿಯಾಗಲು, ಪುಸ್ತಕ ಮಳಿಗೆ ಪಡೆಯಲು ಸಾಧ್ಯ, ಅದು ಕೂಡ ಮೊಬೈಲ್ ಆಪ್ ಮೂಲಕ ಮಾತ್ರ ಪಡೆಯಬಹುದು ಎಂಬ ನೂತನ ನಿಯಮವನ್ನು ಜಾರಿಗೊಳಿಸುವ ಮೂಲಕ ಒತ್ತಾಯಪೂರ್ವಕವಾಗಿ ಸದ್ಯಸ್ಯತ್ವ ಮಾಡಿಸಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.

ಇನ್ನು ಪತ್ರಿಕಾ ಪ್ರಕಟಣೆ ಹೊರಡಿಸುವಾಗಲೂ ನಾಡೋಜ ಡಾ.ಮಹೇಶ ಜೋಶಿಯವರ ಹೆಸರು ಮೇಲುಗಡೆ ಮತ್ತು ಕಸಾಪ ಹೆಸರು ಕೆಳಗಡೆ ಬರುವಂತೆ ಲೆಟರ್ ಹೆಡ್ ರಚಿಸಲಾಗಿದೆ. ಅದಕ್ಕೆ “ಮಹೇಶ ಜೋಶಿ ಮೊದಲೋ, ಕನ್ನಡ ಸಾಹಿತ್ಯ ಪರಿಷತ್ತು ಮೊದಲೋ? ನಾಡೋಜ ದೊಡ್ಡವರೋ? ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡದೋ”ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಎಂಬುದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಖ್ಯಾತಿ ಪಡೆದಿತ್ತು. ಆದರೆ ಅದು ಇತ್ತೀಚಿನ ದಿನಗಳಲ್ಲಿ ಕೇಂದ್ರೀಕರಣಗೊಂಡು ಕೆಲವೇ ಕೆಲವರು ಸ್ವತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದಕ್ಕೆ ಇಂಬು ಕೊಡುವಂತೆ ಅಧ್ಯಕ್ಷರಾದ ಮಹೇಶ್ ಜೋಶಿಯವರು ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ “30 ಸಾವಿರಕ್ಕೂ ಹೆಚ್ಚು ಹೆಬ್ಬೆಟ್ಟುಗಳು ಕಸಾಪದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಸದಸ್ಯ ಸ್ಥಾನದಿಂದ ತೆಗೆಯಬೇಕು” ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಲು ಹೋಗಿ ಭಾರೀ ವಿರೋಧದ ನಂತರ ಹಿಂದ್ಸರಿದಿದ್ದರು. ಈಗ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಬೇಕಾದರೆ ಕಡ್ಡಾಯವಾಗಿ ಸದಸ್ಯರಾಗಬೇಕು ಎಂಬ ನಿಯಮ ರೂಪಿಸುವ ಮೂಲಕ ಪರಿಷತ್ತಿನ ಘನತೆಗೆ ಚ್ಯುತಿ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ನವೆಂಬರ್ 30 ರಂದು ನಾಡೋಜ ಡಾ.ಮಹೇಶ್ ಜೋಶಿಯವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಮ್ಮೇಳನದ ಪ್ರತಿನಿಧಿಯಾಗಿ ನೋಂದಣಿ ಮಾಡಿಸುವುದನ್ನು ಕಡ್ಡಾಯವಾಗಿ ಮೊಬೈಲ್ ಆಪ್ (ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಮೂಲಕ ಮಾತ್ರವೇ ಮಾಡಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರತಿನಿಧಿಯಾಗಿ ಭಾಗವಹಿಸಲು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಯಸ್ಯತ್ವ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಪುಸ್ತಕ ಮಳಿಗೆ ನೋಂದಣಿ

ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಪ್ರಕಾಶಕರು, ಮಾರಾಟಗಾರರು ವೈಯಕ್ತಿಕವಾಗಿ ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ವಾಣಿಜ್ಯ ಮಳಿಗೆಗಳನ್ನು ತೆರೆಯಲು ಇಚ್ಛಿಸುವವರಿಗೂ ಸಹ ಇದೇ ನಿಯಮ ಅನ್ವಯವಾಗಲಿದೆ. ಅಲ್ಲದೇ ಮೊಬೈಲ್ ಆಪ್ ಮೂಲಕ ಮಾತ್ರವೇ ಮಳಿಗೆಗಳ ನೋಂದಣಿ ಮಾಡಬೇಕೆಂದು ತೀರ್ಮಾನಿಸಲಾಗಿದೆ.

ಓಪನ್ ಆಗದ ಮೊಬೈಲ್ ಆಪ್

ಸಾಮಾನ್ಯವಾಗಿ ಮೊದಲು ಪುಸ್ತಕ ಮಳಿಗೆಗಾಗಿ ಬುಕಿಂಗ್ ಮಾಡಿದವರಿಗೆ ಮೊದಲ ಆದ್ಯತೆಯಂತೆ ಸಭಾಂಗಣಕ್ಕೆ ಹತ್ತಿರದ ಪುಸ್ತಕ ಮಳಿಗೆ ಮತ್ತು ವಾಣಿಜ್ಯ ಮಳಿಗೆಗಳನ್ನು ನೀಡಲಾಗುತ್ತದೆ. ಅದರಂತೆ ಈ ಬಾರಿ ಮೊಬೈಲ್ ಆಪ್ ನಲ್ಲಿ ಮತ್ತು ಸದಸ್ಯರಾದವರಿಗೆ ಮಾತ್ರ ಬುಕಿಂಗ್ ಮಾಡಲು ಅವಕಾಶ ಎಂಬ ನಿಯಮ ಜಾರಿಯಾದ್ದರಿಂದ ಹಲವಾರು ಜನ ಪ್ರಕಾಶಕರು, ಪುಸ್ತಕ ಮಾರಾಟಗಾರರು ಬುಕಿಂಗ್ ಮಾಡಲು ಯತ್ನಿಸುತ್ತಿದ್ದರೂ ಸಹ ಮೊಬೈಲ್ ಆಪ್ ಓಪನ್ ಆಗದ ಕಾರಣ ಬುಕಿಂಗ್ ಮಾಡಲು ಸಾಧ್ಯವಾಗಿಲ್ಲ.

ಇನ್ನು ಕೆಲವು ಪ್ರಕಾಶಕರು ಮತ್ತು ಮಾರಾಟಗಾರರು ಸದಸ್ಯತ್ವ ಕಡ್ಡಾಯಗೊಳಿಸಿದ್ದರಿಂದ ಅನಿವಾರ್ಯವಾಗಿ ಮೊಬೈಲ್ ಆಪ್ ಮೂಲಕ ಸದಸ್ಯತ್ವ ಮಾಡಿಸಿಕೊಂಡಿದ್ದಾರೆ. ಆದರೆ ಪುಸ್ತಕ ಮಳಿಗೆ ಬುಕಿಂಗ್ ಮಾಡಲು ಮೊಬೈಲ್ ಆಪ್ ಕಾರ್ಯನಿರ್ವಹಿಸದ ಕಾರಣ ಕಾದು ಕುಳಿತಿದ್ದಾರೆ. ಡಿಸೆಂಬರ್ 1 ರ ಮಧ್ಯರಾತ್ರಿ 12 ಗಂಟೆಯಿಂದಲೇ ಮೊಬೈಲ್ ಆಪ್ ನಲ್ಲಿ ಬುಕಿಂಗ್ ಮಾಡಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ 18 ಗಂಟೆ ಕಳೆದರೂ ಸಹ ಆಪ್ ಕಾರ್ಯನಿರ್ವಹಿಸಿಲ್ಲ!

ಆಧುನಿಕ ತುಘಲಕ್ ವ್ಯವಸ್ಥೆಯಾಗಿದೆ: ಲೇಖಕ, ಪ್ರಕಾಶಕ ಬಸವರಾಜ ಸೂಳಿಭಾವಿ ಆಕ್ರೋಶ

ಕಸಾಪ ರಾಜಾಶ್ರಯ ಮತ್ತು ಪ್ರಭುತ್ವದ ನೆರಳಿನಲ್ಲಿದ್ದರೂ ಸಹ ಇದುವರೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿತ್ತು. ಜನರು ಅದರ ಸದಸ್ಯತ್ವ ಪಡೆದಿರಲೇಬೇಕೆಂಬ ಯಾವುದೇ ನಿಯಮವಿಲ್ಲದೆ, ಎಲ್ಲಾ ಜನರು ಸಮ್ಮೇಳನದ ಪ್ರತಿನಿಧಿಯಾಗಬಹುದಿತ್ತು. ಆದರೆ ಈಗ ಮಹೇಶ್ ಜೋಶಿಯವರು ಈ ನಿಯಮ ಹೇರಿರುವುದು ಒಂದು ರೀತಿಯ ಆಧುನಿಕ ತುಘಲಕ್ ದರ್ಬಾರಿನ ನಡಾವಳಿಯನ್ನು ನೆನಪಿಗೆ ತರುತ್ತದೆ ಎನ್ನುತ್ತಾರೆ ಲಡಾಯಿ ಪ್ರಕಾಶನದ ಮುಖ್ಯಸ್ಥರು ಮತ್ತು ಕನ್ನಡದ ಲೇಖಕರಾದ ಬಸವರಾಜ ಸೂಳಿಭಾವಿಯವರು.

ಕಸಾಪ ಸದಸ್ಯರು ಮಾತ್ರ ಪುಸ್ತಕ ಮಳಿಗೆ ಹಾಕಬೇಕೆಂಬ ನಿಯಮ ಕನ್ನಡದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದುವರೆಗೂ ನೂರಾರು ಪ್ರಕಾಶಕರು ಕನ್ನಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಸಾಪ ಕನ್ನಡದ ಬೆಳವಣಿಗೆಗೆ ಎಷ್ಟು ಶ್ರಮಿಸಿದೆಯೋ ಅದರ ನೂರು ಪಟ್ಟು ಹೆಚ್ಚಾಗಿ ಕನ್ನಡದ ಪ್ರಕಾಶಕರು ಶ್ರಮಿಸಿದ್ದಾರೆ. ಇವತ್ತು ಕನ್ನಡ ಉಳಿದಿದೆ, ಬೆಳೆದಿದೆ, ನಾಡನ್ನು ದಾಟಿ ಹಬ್ಬಿದೆ ಎಂದರೆ ಅದಕ್ಕೆ ನಾಡಿನ ಪ್ರಕಾಶಕರು, ಲೇಖಕರು ಕಾರಣವೇ ಹೊರತು ಕಸಾಪ ನಿಮಿತ್ತ ಮಾತ್ರ. ಕನ್ನಡದ ಪ್ರಕಾಶಕರಿಗೆ ಹೋಲಿಸಿದರೆ ಅದೊಂದು ಸಣ್ಣ ಸಂಸ್ಥೆ. ಅಂತಹ ಪ್ರಕಾಶಕರಿಗೆ ಈ ರೀತಿಯ ನಿಯಮ ಹೇರುವುದರಿಂದ ಅನೇಕ ಪ್ರಕಾಶರು ಈ ಸಮ್ಮೇಳನದಿಂದ ಹೊರಗುಳಿಯುವ ಅಪಾಯವಿದ ಎಂದರು.

ಇನ್ನೊಂದೆಡೆ ಪ್ರತಿನಿಧಿಯಾಗಲು ಸದಸ್ಯತ್ವ ಪಡೆದಿರಲೇಬೇಕೆಂಬ ನಿಯಮದಿಂದ ಸಾವಿರಾರು ಕನ್ನಡಿಗರು ಸಮ್ಮೇಳನದಿಂದ ಹೊರಗುಳಿಯಬಹುದು. ಕಸಾಪ ಅಧ್ಯಕ್ಷರಾಗಿ ಮಹೇಶ್ ಜೋಶಿ ಆಯ್ಕೆಯಾದ ನಂತರವೇ ಈ ರೀತಿಯ ಕನ್ನಡದ ಹಿತಾಸಕ್ತಿಗೆ ವಿರುದ್ಧವಾದ ಕೆಲಸಗಳು ಆರಂಭವಾಗಿವೆ. ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ, ಈ ಕೂಡಲೇ ಈ ನಿಯಮಗಳು ರದ್ದಾಗಬೇಕು ಎಂದು ಆಗ್ರಹಿಸಿದರು.

ಇದೊಂದು ಬ್ಲಾಕ್‌ಮೇಲ್ ತಂತ್ರ – ಎನ್ ಧನಂಜಯ್

“ಕಸಾಪದ ಕನ್ನಡಪರ ಕೆಲಸಗಳನ್ನು ನೋಡಿ, ಮೆಚ್ಚಿ ನಾವು ಅದರ ಸದಸ್ಯರಾಗಬೇಕೆ ಹೊರತು, ಈ ರೀತಿ ಒತ್ತಾಯಪೂರ್ವಕವಾಗಿ ಆಗುವುದು ಅರ್ಥಹೀನ” ಎನ್ನುತ್ತಾರೆ ಜೀರುಂಡೆ ಪ್ರಕಾಶನದ ಎನ್.ಧನಂಜಯ್‌ರವರು.

ಕಸಾಪ ಅತ್ಯುತ್ತಮವಾಗಿ ಕೆಲಸ ಮಾಡಿದರೆ, ಅತ್ಯುತ್ತಮ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಪ್ರಕಟಿಸಿದರೆ, ಪಾರದರ್ಶಕವಾಗಿ ಎಲ್ಲರನ್ನು ಒಳಗೊಂಡು ಕೆಲಸ ಮಾಡಿದರೆ, ಕನ್ನಡತನವನ್ನು ಎತ್ತಿ ಹಿಡಿಯುವ ಮೂಲಕ ಕನ್ನಡಿಗರನ್ನು ತಲುಪಿದರೆ ಜನರು ತಾವಾಗಿಯೇ ಕಸಾಪದ ಸದಸ್ಯರಾಗುತ್ತಾರೆ. ಆ ರೀತಿಯ ಸದಸ್ಯರಾಗುವ ಆಯ್ಕೆ ಪ್ರತಿಯೊಬ್ಬರಿಗೂ ಇರಬೇಕೆ ಹೊರತು ಈ ರೀತಿ ಸಮ್ಮೇಳನವನ್ನು ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ರೀತಿಯಲ್ಲಿ ಮಾಡಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಈ ವಿವಾದದ ಕುರಿತು ಪ್ರತಿಕ್ರಿಯೆ ಪಡೆಯಲು ಕಸಾಪ ಅಧ್ಯಕ್ಷರಾದ ಡಾ.ಮಹೇಶ್ ಜೋಶಿಯವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಕರೆಗೆ ಉತ್ತರಿಸಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಅದನ್ನು ಅಪ್ಡೇಟ್ ಮಾಡಲಾಗುವುದು.

ಇದನ್ನೂ ಓದಿ; ತೀವ್ರ ಕೇಂದ್ರೀಕರಣ ಆರೋಪ; ಸರ್ಕಾರಿ ಸಂಸ್ಥೆಯಾಗುತ್ತಿದೆಯೇ ’ಕಸಾಪ’?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಶರಣಾರ್ಥಿಗಳು.
    ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆಯದವರು ಸಮ್ಮೇಳನದಲ್ಲಿ ಭಾಗವಹಿಸುವಂತಿಲ್ಲವೆ…?
    ಇದನ್ನು ಸ್ಥಾಪಿಸಿದ ಮಹಾರಾಜರು ರಾಜ ಆಡಳಿತದಿಂದ ದೂರ ಇಟ್ಟಿದ್ದರು ಎನ್ನುವುದು ಐತಿಹಾಸಿಕ ಸತ್ಯ.
    ಈಗೇಕೆ ಈ ಪಕ್ಷ ನಿಷ್ಟೆಯ ಮಾತುಗಳು.

    ಒಂದು ಪಕ್ಷಕ್ಕೆ ಸೇರಿದವರು ಬೇರೆ ಪಕ್ಷದವರು ಮಾಡುವ ಯಾವುದೆ ಸಾರ್ವಜನಿಕ ಉತ್ಸವದಲ್ಲಿ ಭಾಗವಹಿಸುವುದಿಲ್ಲ. ಭಾಗವಹಿಸ ಬಾರದು ಎನ್ನುವುದು ಅಲಿಖಿತ ಶಾಸನ .

    ಹಾಗಾದರೆ ವೇದಿಕೆಯ ಮೇಲೆ ರಾರಾಜಿಸುವವರೆಲ್ಲರೂ ಕ.ಸಾ.ಪ ಸದಸ್ಯರು ಮಾತ್ರವೆ….?

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...