Homeಕರ್ನಾಟಕ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್‌!

“ನಮ್ಮ ಎದುರಿನ ರಸ್ತೆಗೆ ನಮ್ಮತನ ಬೇಕಾಲ್ಲವೇ?” ಎಂದು ಪ್ರಶ್ನಿಸಿದ್ದಾರೆ ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ.

- Advertisement -
- Advertisement -

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಮಂದಿನ ‘ಪಂಪ ಮಹಾಕವಿ ರಸ್ತೆ’ ಎಂಬ ಹೆಸರನ್ನು ಬದಲಿಸುವ ಪ್ರಸ್ತಾಪವನ್ನು ಕಸಾಪ ಮುಂದಿಟ್ಟಿದೆ.

ಈ ರಸ್ತೆಯಲ್ಲಿನ ಸುಮಾರು ಅರ್ಧ ಕಿಮೀಯನ್ನು ‘ಕನ್ನಡ ಸಾಹಿತ್ಯ ಪರಿಷತ್‌ ರಸ್ತೆ’ ಎಂದು ಹೆಸರಿಡಬೇಕೆಂದು ಕಸಾಪ ಬಯಸಿದೆ.

ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆ ಮತ್ತು ಮಕ್ಕಳ ಕೂಟ ಪಾರ್ಕ್ ನಡುವಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಮರುನಾಮಕರಣ ಮಾಡಲು ಕಸಾಪ ಮುಂದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ರಸ್ತೆಗೆ ಪ್ರಸ್ತುತ ಪಂಪ ಮಹಾಕವಿ ಎಂದು ಹೆಸರಿಡಲಾಗಿದೆ. ಇಲ್ಲಿನ ಅರ್ಧ ಕಿ.ಮೀ.ಯಷ್ಟು ರಸ್ತೆಯನ್ನು ಕನ್ನಡ ಪರಿಮಳದಿಂದ, ಕನ್ನಡಮಯದಿಂದ ತುಂಬಬೇಕು ಎಂಬ ಪ್ರಸ್ತಾವನೆಯನ್ನು ಕಸಾಪ ಸಲ್ಲಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಕಸಾಪ ಅಧಿಕಾರಿಗಳು ಸಜ್ಜಾಗಿದ್ದಾರೆ.

ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳು ಇತ್ತೀಚೆಗೆ ಪರಿಷತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೂ ಚರ್ಚಿಸಿದ್ದೇವೆ ಎಂದಿದ್ದಾರೆ.

Interview| ಆರೆಸ್ಸೆಸ್‌ಗೆ ಸೇರಿದವನೆಂಬ ಅಪಪ್ರಚಾರ: ಮಹೇಶ ಜೋಶಿ | Prajavani
ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ

ಕಸಾಪ ರಸ್ತೆ ಕಲ್ಪನೆಯ ಕುರಿತು ಚರ್ಚಿಸಲು ಆ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು/ಸಂಘಟನೆಗಳೊಂದಿಗೆ ಶೀಘ್ರದಲ್ಲೇ ಸಭೆಯನ್ನು ಕರೆಯುವುದಾಗಿ ಜೋಶಿ ಹೇಳಿದ್ದಾರೆ.

“ಈ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಒಂದು ಪ್ರಾದೇಶಿಕ ಪತ್ರಿಕಾ ಕಚೇರಿ, ಕೆಲವು ಬ್ಯಾಂಕ್‌ಗಳು, ಉದ್ಯಾನವನ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಯಂತಹ ಕೆಲವು ಪ್ರಮುಖ ಸಂಸ್ಥೆಗಳಿವೆ. ನಮ್ಮ ಪ್ರಸ್ತಾಪವನ್ನು ಚರ್ಚಿಸಲು ಮತ್ತು ಅವರ ಸಲಹೆಗಳನ್ನು ಪಡೆಯಲು ನಾವು ಎಲ್ಲರನ್ನೂ ಆಹ್ವಾನಿಸುತ್ತೇವೆ” ಎಂದಿದ್ದಾರೆ.

“ಈ ರಸ್ತೆಯು ಕನ್ನಡ ಪ್ರೇಮಿಗಳ ಕಣ್ಣು ಮತ್ತು ಕಿವಿಗೆ ರಸದೌತಣ ನೀಡಲಿದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಆ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಪರ್ಯಾಯ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಕುರಿತು ಕಸಾಪ ಚರ್ಚಿಸುತ್ತಿದೆ. ಈ ರಸ್ತೆಯಲ್ಲಿ ಕನ್ನಡ ಕವಿಗಳ ಭಾವಚಿತ್ರವನ್ನು ಹಾಕಲಾಗುವುದು. ದೀಪಾಲಂಕಾರ ಮಾಡಲಾಗುವುದು. ಕನ್ನಡ ಪದಗಳಿಂದ ಅಲಂಕರಿಸಿದ ಗೋಡೆಗಳನ್ನು ನಿರ್ಮಿಸಲಾಗುವುದು. ಹಳದಿ-ಕೆಂಪು ಬಣ್ಣದಿಂದ ರಸ್ತೆಯ ಮೆರುಗು ಹೆಚ್ಚಿಸಲಾಗುವುದು ಎಂದು ಕಸಾಪ ಪ್ರಸ್ತಾಪಿಸಿದೆ.

ಕನ್ನಡದ ಆದಿಕವಿ ಪಂಪನ ಹೆಸರನ್ನು ಬದಲಿಸುವ ಅವಶ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಹೇಶ್ ಜೋಶಿಯವರು, “ನ್ಯಾಷನಲ್‌ ಕಾಲೇಜಿನಿಂದ ಆರಂಭವಾಗಿ ಮಿಂಟೋ ಆಸ್ಪತ್ರೆಯವರೆಗೆ ಪಂಪ ಮಹಾಕವಿ ರಸ್ತೆ ಇದೆ. ನ್ಯಾಷನಲ್ ಕಾಲೇಜಿನಿಂದ ಮಕ್ಕಳ ಕೂಟದವರೆಗೆ ಪಂಪ ಮಹಾಕವಿ ರಸ್ತೆ ಎಂದೇ ಇರುತ್ತದೆ. ಅದರ ಮುಂದಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ರಸ್ತೆ ಎಂದು ಇಡಬೇಕೆಂದು ಯೋಚಿಸಿದ್ದೇವೆ” ಎಂದರು.

ಪಂಪನ ಹೆಸರಲ್ಲಿರುವ ರಸ್ತೆಯಿಂದ ಕಸಾಪಕ್ಕೆ ಆಗುವ ನಷ್ಟವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕನ್ನಡ ಸಾಹಿತ್ಯ ಪರಿಷತ್‌ ಕೂಡ ಕನ್ನಡಕ್ಕಾಗಿಯೇ ದುಡಿದಿದೆ. ಮೈಸೂರು ಒಡೆಯರಿಂದ ಸ್ಥಾಪನೆಯಾಗಿರುವ ಸಂಸ್ಥೆ ಕಸಾಪ. ನಮ್ಮ ಎದುರಿನ ರಸ್ತೆಗೆ ನಮ್ಮತನ ಬೇಕಾಲ್ಲವೇ? ಕಸಾಪ ಎಂಬ ನಮ್ಮತನ ಬೇಡವೆ? ಪಂಪ ಎಂಬ ಹೆಸರನ್ನು ನಾವು ಬದಲಿಸುತ್ತಿಲ್ಲ. ಪಂಪ ರಸ್ತೆಯೂ ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ರಸ್ತೆಯೂ ಇರುತ್ತದೆ. ಹೀಗಾಗಿ ಈ ರಸ್ತೆಗೆ ಮತ್ತಷ್ಟು ಮೆರಗು ಬರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಕಸಾಪ ಸದಸ್ಯತ್ವ ಮತ್ತು ಅನಕ್ಷರಸ್ಥತೆ; ಅಕ್ಷರಜ್ಞಾನ, ಸಾಹಿತ್ಯ, ಕಲೆ – ಒಂದು ವಿವೇಚನೆ

“ನಮ್ಮ ಸಂಸ್ಕೃತಿಯನ್ನು ತೆರೆದಿಡಬೇಕಿದೆ. ಈ ರಸ್ತೆಯಲ್ಲಿ ಕನ್ನಡತನ ತೆರೆದುಕೊಳ್ಳುತ್ತದೆ. ಹಳೆಯಗನ್ನಡ, ಹೊಸಗನ್ನಡದ ಸೊಬಗು ತೋರಿಸುತ್ತೇವೆ. ಕನ್ನಡತನವನ್ನು ಹೇಗೆಲ್ಲ ತರಬಹುದೆಂದು ಯೋಚನೆ ಮಾಡುತ್ತಿದ್ದೇವೆ. ಈಗ ಒಂದು ಕನಸು ಕಂಡಿದ್ದೇವೆ. ಇನ್ನೂ ಸಾಕಾರವಾಗಿಲ್ಲ” ಎಂದು ತಿಳಿಸಿದರು.

ಲೇಖಕಿ ಪ್ರತಿಭಾ ನಂದಕುಮಾರ್‌ ಅವರು ಈ ಕುರಿತು ಕಮೆಂಟ್ ಮಾಡಿದ್ದು, “ಇದಕ್ಕೆ ನನ್ನ ವಿರೋಧವಿದೆ” ಎಂದಿದ್ದಾರೆ.

ಬಿಜೆಪಿ ಮುಖಂಡ ಪ್ರಕಾಶ್‌ ಶೇಷರಾಘವಾಚರ್‌ ಪ್ರತಿಕ್ರಿಯಿಸಿ, “ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚು ಮಾಡುವ ಕೆಲಸ ಮಾಡೋದು ಬಿಟ್ಟು ರಸ್ತೆಗೆ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

12 COMMENTS

  1. ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಬಾಕಿ ಇರುವ ದತ್ತಿ ಕಾರ್ಯಕ್ರಮಗಳು, ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳನ್ನು ಮಾಡಿ
    ಅದು ಬಿಟ್ಟು ಪಂಪ ಮಹಾಕವಿ ರಸ್ತೆ ಹೆಸರು ಬದಲಿಸೋ ಕೆಲಸ ಬೇಡ… ಅದು ಆದ್ಯತೆಯ ಕೆಲಸವಲ್ಲ.*ಮಾನವ ಕುಲಂ ತಾನೊಂದೇ ವಲಂ* ಎಂದು ಸಮಾನತೆಯ ಸಂದೇಶವನ್ನು ಒಂದು ಸಾವಿರ ಸಾವಿರ ವರ್ಷಗಳ ಹಿಂದೆಯೇ ಪಂಪ‌ ಹೇಳಿದ್ದಾನೆ. ಅಂತ ಶ್ರೇಷ್ಠ ಕವಿಯ ಹೆಸರನ್ನು ಬದಲಿಸಲು ಕಸಾಪ ಅಧ್ಯಕ್ಷರು ಹೊರಟಿರುವುದು ಅಕ್ಷಮ್ಯ ಮತ್ತು ಖಂಡನೀಯ. ಕಸಾಪ ಕೂಡಲೇ ಈ ಹೆಸರು ಬದಲಾವಣೆ ಪ್ರಸ್ತಾಪವನ್ನು ಕೈ ಬಿಡಬೇಕು..

  2. ಈ ಜೋಶಿಗೆ ಎಲ್ಲೋ ತಲೆ ಕೆಟ್ಟಿದೆ. ಪಂಪ ನಮ್ಮವನಲ್ಲವಾ? ಹೆಸರು ಬದಲಾವಣೆ ಬೇಡ.

  3. ಜೋಶಿಯವರೇ, ಪಂಪ ನಮ್ಮವನಲ್ಲವೇ, ಇತ್ತೀಚಿಗೆ ರಸ್ತೆಯ, ಬಡಾವಣೆಯ ಹೆಸರು ಬದಲಾಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ, ದಶಕಗಳಿಂದ ಇಟ್ಟಿರುವ ಹೆಸರನ್ನು ಬದಲಾವಣೆ ಮಾಡುವ ಅಗತ್ಯವೆನಿದೆ, ಅದರ ಬದಲಿಗೆ ಕನ್ನಡ ಉಳಿಸುವ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಿ.

  4. ಮೊದಲು ಶಿಕಾರಿಪುರದಲ್ಲಿ ಕಸಾಪ ಕಟ್ಟಡವೆಲ್ಲಿ ಇದೆ ಅಂತ ಹುಡುಕಿ ತೋರಿಸು ,ಮುಂದೆ ರಸ್ತೆ ಹೆಸರು ಬದಲಾಯಿಸುವಂತೆ…ಮೂರ್ಖ ಶಿಖಾಮಣಿ.

  5. Y this president is acting like RSS man (he may love Bjp)because they are in d habit of changing roads name where ever they rule it’s a bad idea , pampa is our great ADI KAVI , no pl don’t do it 🙏

  6. Y this president is acting like RSS man (he may love Bjp too)because they are in d habit of changing roads name where ever they rule it’s a bad idea , pampa is our great ADI KAVI , no pl don’t do it 🙏

  7. ಇಂತಹ ಮಹಾಕವಿಗಳಿಂದಲೇ ನಮ್ಮ ನಾಡು, ಭಾಷೆಗೆ ಮೆರುಗು ಬಂದಿದೆ
    ಕಸ್ತೂರಿಯ ಕಂಪು ಇದೆ. ಇಂತಹ ಚಿಲ್ಲರೆ ವಿಚಾರಗಳನ್ನು ಬಿಟ್ಟು ನಾಡು, ಮರೆಆಗುತ್ತಿರುವ ಕನ್ನಡದ ಮೆರುಗನ್ನು ಆಧುನಿಕ ಯುಗದಲ್ಲಿ ಹೇಗೆ ಆಗಸದ ಎತ್ತರಕ್ಕೆ ಹರಡ ಬೇಕು ಎಂಬುದರ ಕಡೆಗೆ ಕಾರ್ಯ ಪ್ರವೃತ್ತ ರಾಗಿ

  8. ಪಂಪ ಅನ್ನಿ ಕನ್ನಡ ಅನ್ನಿ ಎಲ್ಲ ಒಂದೆ ಅಂತ ಮಹಾನ್ ಕವಿಯ ಹೆಸರನ್ನು ಬದಲಾಯಿಸುವುದು ಮೂರ್ಖತನದ ಪರಮಾವದಿ ಪಕ್ಕದ ರಸ್ತೆಗೆ ಆ ಹೆಸರಿಡಿ

  9. ಅಧಿಕವಿ ಹೆಸರನ್ನು ಬದಲಿಸುವುದಿರಲಿ ಅವರಹೇಸರೆಳೋಕು ನಾಲಾಯಕ್ ನೀನು ಲೆ ಜೋಶಿ.
    ನಿನ್ನ ತಲೆಗೆ ಬಲವಾದ ಪೆಟ್ ಹಾಕಿದ್ರೆ ಆಗ ನಿನಗಿಡಿದಿರೋ ಹುಚ್ಚು ಬಿಡುತ್ತಾ ನೋಡ್ಬೇಕು

  10. ಈ ಅಧ್ಯಕ್ಷರಿಗೆ ಮಾಡಲಿಕ್ಕೆ ಬೇರೆ ಕೆಲಸವಿಲ್ಲವಾ.ಆದಿಕವಿಯಿಂದ ಕನ್ನಡಕ್ಕೆ ಮೆರುಗು ಬಂದಿರೊದು.

  11. ಕನ್ನಡದ ದಿಕವಿ ಪಂಪನ ಹೆಸರಿರುವುದನ್ನು ಬದಲಾಯಿಸಬೇಕೆನ್ನುವ ಆಲೋಚನೆಯೇ ಕ.ಸಾ.ಪ ಕ್ಕೆ ಬಂದಿರುವುದು ದುರದೃಷ್ಟಕರ…..

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...