Homeಮುಖಪುಟಕಾಶ್ಮೀರದ ಪತ್ರಕರ್ತ ಫಹಾದ್ ಶಾ ಬಂಧನ

ಕಾಶ್ಮೀರದ ಪತ್ರಕರ್ತ ಫಹಾದ್ ಶಾ ಬಂಧನ

- Advertisement -
- Advertisement -

ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಸಾರ್ವಜನಿಕರನ್ನು ಪ್ರಚೋದಿಸುವ ಅಪರಾಧ ಉದ್ದೇಶದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ವಿಷಯವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಕಾಶ್ಮೀರದ ಪತ್ರಕರ್ತ ಫಹಾದ್ ಶಾ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಕಾಶ್ಮೀರ ವಾಲಾ’ ನ್ಯೂಸ್ ಪೋರ್ಟಲ್ ಸಂಪಾದಕರಾದ ಫಹಾದ್ ಶಾ ಅವರ ಮೇಲೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವರಿ 30ರಂದು ಪುಲ್ವಾಮಾದ ನೈರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕನ ಕುಟುಂಬದ ಹೇಳಿಕೆಯನ್ನು ಆಧರಿಸಿ ಸುದ್ದಿ ಮಾಡಿ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿದ ನಂತರ ಶಾ ಅವರನ್ನು ಈ ಹಿಂದೆ ಪೊಲೀಸರು ಪ್ರಶ್ನಿಸಿದ್ದರು.

ಎನ್‌ಕೌಂಟರ್‌ನಲ್ಲಿ ನಾಲ್ಕು ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಹತ್ಯೆಯಾದ ಭಯೋತ್ಪಾದಕರಲ್ಲಿ ಒಬ್ಬನ ಕುಟುಂಬದ ಸಂಬಂಧಿಕರು ಹತರಾದವರು ಮುಗ್ಧರು ಎಂದು ಹೇಳಿದ್ದಾರೆ.

“ಕೆಲವು ಫೇಸ್ಬುಕ್ ಬಳಕೆದಾರರು ಮತ್ತು ಪೋರ್ಟಲ್‌ಗಳು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡುವ ಕ್ರಿಮಿನಲ್ ಉದ್ದೇಶದಿಂದ ಛಾಯಾಚಿತ್ರ, ವೀಡಿಯೊಗಳು ಮತ್ತು ಪೋಸ್ಟರ್‌ಗಳನ್ನು ಒಳಗೊಂಡಂತೆ ದೇಶವಿರೋಧಿ ವಿಷಯಗಳನ್ನು ಅಪ್ಲೋಡ್ ಮಾಡುತ್ತಿವೆ. ಹಾಗೆ ಅಪ್ಲೋಡ್ ಮಾಡಿದ ವಿಷಯವು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಸಾರ್ವಜನಿಕರನ್ನು ಪ್ರಚೋದಿಸುವಂತಿದೆ ಎಂಬುದು ಇತ್ತೀಚೆಗೆ ನಮಗೆ ತಿಳಿದು ಬಂದಿದೆ” ಇದಕ್ಕೆ ಸಂಬಂಧಿಸಿದಂತೆ ದೂರುದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪತ್ರಕರ್ತನ ಬಂಧನದ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ, “ಸತ್ಯದ ಪರವಾಗಿ ನಿಲ್ಲುವುದನ್ನು ದೇಶ ವಿರೋಧಿ ಎಂದು ಪರಿಗಣಿಸಲಾಗುತ್ತದೆ. ಅಸಹಿಷ್ಣುತೆ ಮತ್ತು ನಿರಂಕುಶಾಧಿಕಾರದ ಸರ್ಕಾರಕ್ಕೆ ಕನ್ನಡಿ ತೋರಿಸುವುದು ಸಹ ರಾಷ್ಟ್ರ ವಿರೋಧಿಯಾಗಿದೆ. ಈ ನೆಲದ ವಾಸ್ತವತೆಯನ್ನು ಚಿತ್ರಿಸುವ ಫಹಾದ್ ಅವರ ಪತ್ರಿಕೋದ್ಯಮ ಕೆಲಸವು ಸ್ವತಃ ಮಾತನಾಡುತ್ತದೆ. ನೀವು ಇನ್ನೆಷ್ಟು ಫಹಾದ್‌ರನ್ನು ಬಂಧಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿರಿ: ಹಿಜಾಬ್‌‌‌: ವಿದ್ಯಾರ್ಥಿನಿಯರ ಪರವಾಗಿ ಧ್ವನಿ ಎತ್ತಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...