Homeಮುಖಪುಟಭಾರತದಲ್ಲಿ ದಾಖಲಾದ ದೇಶದ್ರೋಹ ಪ್ರಕರಣಗಳ ವಿಶೇಷ ವರದಿ ಪ್ರಕಟಿಸಿದ ‘ಆರ್ಟಿಕಲ್ 14’!

ಭಾರತದಲ್ಲಿ ದಾಖಲಾದ ದೇಶದ್ರೋಹ ಪ್ರಕರಣಗಳ ವಿಶೇಷ ವರದಿ ಪ್ರಕಟಿಸಿದ ‘ಆರ್ಟಿಕಲ್ 14’!

- Advertisement -
- Advertisement -

ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದಾಖಲಾದ ದೇಶದ್ರೋಹ ಪ್ರಕರಣಗಳ ವಿಶೇಷ ವರದಿಯನ್ನು ‘ಆರ್ಟಿಕಲ್ 14’ ವೆಬ್‌‌ಸೈಟ್‌‌ ಶುಕ್ರವಾರ ಪ್ರಕಟಿಸಿದೆ. ‘ಒಂದು ಅಂಧಕಾರದ ದಶಕ’ ಎಂಬ ಶೀರ್ಷಿಕೆಯಿರುವ ವರದಿಯಲ್ಲಿ, 2010 ರಿಂದ 2021ರ ನಡುವೆ ದೇಶದಲ್ಲಿ ದಾಖಲಾದ ದೇಶದ್ರೋಹಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ನೀಡಲಾಗಿದೆ.

ವೆಬ್‌ಸೈಟ್‌ ತನ್ನ ವರದಿಯ ಹೆಡ್‌ಲೈನ್‌ನಲ್ಲಿ, “ಒಂದು ಅಂಧಕಾರದ ದಶಕ: ನಮ್ಮ ಹೊಸ ಮಾಹಿತಿ ಇತರ ಪ್ರಜಾಪ್ರಭುತ್ವ ದೇಶಗಳು ತಿರಸ್ಕರಿಸಿದ ಕಾನೂನನ್ನು ಭಾರತದಲ್ಲಿ ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: 1947 ರಲ್ಲಿ ದೇಶಕ್ಕೆ ಸಿಕ್ಕಿದು ಸ್ವತಂತ್ರವಲ್ಲ ಭಿಕ್ಷೆ ಎಂಬ ಕಂಗನಾ ಹೇಳಿಕೆ: ಇದು ಹುಚ್ಚುತನವೋ..ದೇಶದ್ರೋಹವೋ- ವರುಣ್ ಗಾಂಧಿ ಪ್ರಶ್ನೆ

“151 ವರ್ಷಗಳಿಂದ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ವ್ಯಕ್ತಪಡಿಸುವ ಭಾರತೀಯರು ದೇಶದ್ರೋಹದ ಆರೋಪದ ಭಯವನ್ನು ಎದುರಿಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A ಅಡಿಯಲ್ಲಿ ದೇಶದ ಬಗ್ಗೆ ‘ಅಸಮಾಧಾನ’ ಹೊಂದಿದ್ದಾರೆ ಎಂದು ದೇಶದ್ರೋಹವನ್ನು ಹೊರಿಸಲಾಗುತ್ತಿದೆ. ನಮ್ಮ ಹೊಸ ಡೇಟಾಬೇಸ್ 2010-2021 ರ ನಡುವೆ ದೇಶದ್ರೋಹದ ಆರೋಪ ಹೊರಿಸಲಾದ 13,000 ಜನರನ್ನು ಎಣಿಕೆ ಮಾಡಿದ್ದೇವೆ” ಎಂದು ‘ಆರ್ಟಿಕಲ್‌‌ 14’ ಹೇಳಿದೆ.

ಇಷ್ಟೇ ಅಲ್ಲದೆ, ಇತರ ಪ್ರಜಾಪ್ರಭುತ್ವ ದೇಶಗಳು ತಿರಸ್ಕರಿಸಿದ ಕಾನೂನನ್ನು ಭಾರತದಲ್ಲಿ ಹೇಗೆ ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಅಭೂತಪೂರ್ವ ಒಳನೋಟವನ್ನು ಈ ವರದಿ ಒದಗಿಸುತ್ತದೆ. ಕಳೆದ ದಶಕದಲ್ಲಿ ಇದರ ಬಳಕೆಯು ತೀವ್ರವಾಗಿ ಏರಿದೆ. ತೀರಾ ಇತ್ತೀಚೆಗೆ ಸಾರ್ವಜನಿಕ ಪ್ರತಿಭಟನೆಗಳು, ಭಿನ್ನಾಭಿಪ್ರಾಯಗಳು, ಸಾಮಾಜಿಕ-ಮಾಧ್ಯಮ ಪೋಸ್ಟ್‌ಗಳು, ಸರ್ಕಾರದ ಟೀಕೆ ಮತ್ತು ಕ್ರಿಕೆಟ್ ಫಲಿತಾಂಶಗಳ ವಿರುದ್ಧವೂ ಸಹ ಇದನ್ನು ಬಳಸಲಾಗುತ್ತಿದೆ” ಎಂದು ಆರ್ಟಿಕಲ್‌ 14 ತನ್ನ ಉಪಶೀರ್ಷಿಕೆಯಲ್ಲಿ ಹೇಳಿದೆ.

ಇದನ್ನೂ ಓದಿ: ಸರ್ಕಾರ ಬದಲಾಗುತ್ತಿದ್ದಂತೆ ದೇಶದ್ರೋಹ ಪ್ರಕರಣಗಳು ದಾಖಲಿಸುವ ಬಗ್ಗೆ ಸುಪ್ರೀಂ ಆತಂಕ

‘ಆರ್ಟಿಕಲ್‌ 14’ ವೆಬ್‌ತಾಣದ ಸಂಪಾದಕೀಯ ಮಂಡಳಿಯು ವಕೀಲರು, ಪತ್ರಕರ್ತರು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಿದೆ. ಸಹಾಯಕ ಪ್ರಾಧ್ಯಾಪಕರಾದ ಮೊಹ್ಸಿನ್ ಅಲಂ ಭಟ್, ಅಪರ್ಣ ಚಂದ್ರ, ಪತ್ರಕರ್ತರಾದ ಚಿತ್ರಾಂಗದಾ ಚೌಧರಿ, ಪ್ರಿಯಾ ರಮಣಿ, ಮನೋಜ್ ಮಿತ್ತಾ, ಸುಪ್ರೀಂಕೋರ್ಟ್ ವಕೀಲ ಗೌತಮ್ ಭಾಟಿಯಾ, ಜಾವೇದ್ ಅನ್ಸಾರಿ, ನಿಖಿತಾ ಸೋನವಾನೆ, ಸಮರ್ ಹಲರ್ಕರ್ ಇತರರಿದ್ದಾರೆ.

ವೆಬ್‌ತಾಣದ ಸಲಹಾ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಆಫ್ತಬ್ ಅಲಂ, ಪ್ರೊ. ಸುನೀಲ್ ಕಿಲ್ನಾನಿ, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಅಜಿತ್ ಪ್ರಕಾಶ್ ಶಾ ಇನ್ನಿತರರಿದ್ದಾರೆ. ಸಂಶೋಧನೆ ಮತ್ತು ವರದಿಗಾರಿಕೆ, ಮಾಹಿತಿ ಸಂಗ್ರಹ, ವೈವಿಧ್ಯಮಯ ದೃಷ್ಟಿಕೋನಗಳೊಂದಿಗೆ ತನಿಖಾ ವರದಿ ನೀಡುವ ಉದ್ದೇಶವನ್ನು ‘ಆರ್ಟಿಕಲ್ 14’ ಹೊಂದಿದೆ.

ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಆದಿತ್ಯನಾಥ್‌ ಸರ್ಕಾರ ಟೀಕಿಸಿದ್ದ ಮಾಜಿ ರಾಜ್ಯಪಾಲರ ಮೇಲೆ ದೇಶದ್ರೋಹ ಪ್ರಕರಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...