Homeಮುಖಪುಟದಲಿತ ಸಮಾವೇಶಕ್ಕೆ ಕೆಸಿಆರ್‌ ಚಿಂತನೆ; ಪಕ್ಷದ ಹೆಸರು ಬದಲಾವಣೆ ಸಹಿತ ಹಲವು ತಂತ್ರಗಾರಿಕೆ

ದಲಿತ ಸಮಾವೇಶಕ್ಕೆ ಕೆಸಿಆರ್‌ ಚಿಂತನೆ; ಪಕ್ಷದ ಹೆಸರು ಬದಲಾವಣೆ ಸಹಿತ ಹಲವು ತಂತ್ರಗಾರಿಕೆ

- Advertisement -
- Advertisement -

22 ವರ್ಷ ಪೂರೈಸಿರುವ ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್) ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್‌) ಮರುನಾಮಕರಣ ಮಾಡಲಿದ್ದಾರೆ. ಇದರ ಜೊತೆಗೆ ರಾಜಕಾರಣದ ಮುಂದುವರಿದ ಭಾಗವಾಗಿ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ದಲಿತ ಸಮಾವೇಶವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ಮೂಲೆಗಳಿಂದ ದಲಿತ ಚಿಂತಕರು ಬರಲಿದ್ದಾರೆ ಎಂದು ಪಕ್ಷವು ತಿಳಿಸಿದೆ.

ಪಕ್ಷದ ಹೆಸರು ಬದಲಾವಣೆಗೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿರುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ನ 20 ಶಾಸಕರಲ್ಲದೆ, ತಮಿಳುನಾಡು ಸಂಸದ, ವಿಡುದಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ತಿರುಮಾವಲವನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬುಧವಾರದ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಭಾಗವಹಿಸಲಿಲ್ಲ ಎಂದು ಕೆಸಿಆರ್‌ ತಿಳಿಸಿದ್ದಾರೆ.

ಕೆಸಿಆರ್ ಅವರ ಭಾಷಣದಲ್ಲಿ ‘ದಲಿತ ಬಂಧು’ ಯೋಜನೆ ಗಮನ ಸೆಳೆಯಿತು. ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ.

ವಿಸಿಕೆ ಮುಖ್ಯಸ್ಥರಾದ ತಿರುಮಾವಲವನ್ ಅವರು ಗುರುವಾರ ಮತ್ತೊಮ್ಮೆ ಕೆಸಿಆರ್ ಅವರನ್ನು ಭೇಟಿಯಾದರು. ಕೆಸಿಆರ್‌‌ ಅವರ ಅಧಿಕೃತ ನಿವಾಸವಾದ ಪ್ರಗತಿ ಭವನದಲ್ಲಿ ಮತ್ತೊಮ್ಮೆ ಭೇಟಿಯಾಗಿ ಮಾತನಾಡಿದರು. ದಲಿತ ಪರ ಯೋಜನೆಗಳನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಕೆಸಿಆರ್‌ ಹೇಳುತ್ತಿರುವ ಮಾತುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತೆಲಂಗಾಣ ಸರ್ಕಾರ ದಲಿತರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಪರಿಚಯಿಸುತ್ತಿದೆ ಎಂದು ಸಂಸದರು ಶ್ಲಾಘಿಸಿದರು. ದೇಶದಲ್ಲಿ ಯಾವುದೇ ರಾಜ್ಯವು ಇಷ್ಟು ದೊಡ್ಡ ಸಂಖ್ಯೆಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿಲ್ಲ ಎಂದು ತಿಳಿಸಿದರು.

ಬುಧವಾರದ ಭಾಷಣದಲ್ಲಿ ಕೆಸಿಆರ್‌, “ಪಕ್ಷದ ಹೆಸರನ್ನು ಬದಲಾಯಿಸಲು ಇದು ಕೇವಲ ಆಂತರಿಕ ಸಭೆ” ಎಂದಿದ್ದರು.

“ಪಕ್ಷದ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರನ್ನು (ಅಖಿಲೇಶ್ ಮತ್ತು ತೇಜಸ್ವಿ) ಆಹ್ವಾನಿಸಲಾಗುವುದು. ದೇಶಾದ್ಯಂತ ಹಲವು ಪಕ್ಷಗಳ ನಾಯಕರು ನಮ್ಮೊಂದಿಗೆ ಸಾಗಲು ಮುಂದೆ ಬರುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದ್ದು, ಬಿಆರ್‌ಎಸ್ ಪಕ್ಷ ರಚಿಸುವಾಗ ಅವರ ಸಲಹೆಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವತ್ತ ಕೆಸಿಆರ್‌‌? ಏನಿದು ತಂತ್ರಗಾರಿಕೆ?

ತೆಲಂಗಾಣ ಸಿಎಂ ಆಗಿ ದೇಶಾದ್ಯಂತ ಪ್ರವಾಸ ಮಾಡುತ್ತೇನೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ. ಉಜ್ವಲ ಭಾರತ ನಿರ್ಮಾಣವಾಗಬೇಕಿದೆ. ದೇಶದಲ್ಲಿರುವ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿದರೆ ಭಾರತವು ಅಮೆರಿಕಕ್ಕಿಂತ ಉತ್ತಮವಾಗಿ ಬೆಳೆಯುತ್ತದೆ. ನಮಗೆ ಇನ್ನೂ ಒಳ್ಳೆಯ ಸಮಯವಿದೆ. ನಾವು ದೇಶಾದ್ಯಂತ ವಿಸ್ತರಿಸುತ್ತೇವೆ ಎಂದು ತಿಳಿಸಿದ್ದಾರೆ.

ಬಿಆರ್‌ಎಸ್‌ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲ ರಾಜ್ಯ ಮಹಾರಾಷ್ಟ್ರವಾಗಲಿದೆ. ರಾಷ್ಟ್ರೀಯ ಪಕ್ಷದೊಂದಿಗೆ ಸಂಯೋಜಿಸಲ್ಪಟ್ಟ ರೈತ ಸಂಘವನ್ನು ಮೊದಲು ಮಹಾರಾಷ್ಟ್ರದಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

“ನಾವು ದಲಿತ ಚಳವಳಿ, ರೈತ ಚಳವಳಿ ಮತ್ತು ಬುಡಕಟ್ಟು ಚಳವಳಿಯ ಮೂಲಕ ಮುಂದುವರಿಯುತ್ತೇವೆ. ನಾವು ದೇಶದಲ್ಲಿನ ಅನೇಕ ಸಾಮಾಜಿಕ-ರಾಜಕೀಯ ಸಮಸ್ಯೆಗಳತ್ತ ಗಮನ ಹರಿಸಲಿದ್ದೇವೆ” ಎಂದು ತಮ್ಮ ಅಜೆಂಡಾಗಳ ಕುರಿತು ವಿವರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಾರ್ದಿಕ ಸ್ವಾಗತ ಗಳು.
    ಈ ತರಹದ ಲೋಕಲ್ ಪಾರ್ಟಿ ಗಳು ರಾಷ್ಟ್ರೀಯವಾಗಲು ತಯಾರಿ ನಡೆಸುವುದು ಬಿಜೆಪಿಗೆ ಲಾಭಕರವಾಗುತ್ತದೆ ಎನ್ನುವುದು ಬೇಸರದ ಸಂಗತಿ.

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...