Homeಮುಖಪುಟಮೋದಿ ರೋಡ್‌ ಶೋ: ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿಯ ನಿರ್ಲಕ್ಷ್ಯ

ಮೋದಿ ರೋಡ್‌ ಶೋ: ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿಯ ನಿರ್ಲಕ್ಷ್ಯ

- Advertisement -
- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ ಕೇರಳದಲ್ಲಿ ಮಾರ್ಚ್ 19ರಂದು ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದ್ದು, ಕೇರಳದ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಈ ಬಗ್ಗೆ ಬಿಜೆಪಿಯನ್ನು ಟೀಕಿಸಿದ ಸಿಪಿಐ(ಎಂ) ಬಿಜೆಪಿ ತನ್ನ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕೂಡ ನಿರ್ಲಕ್ಷಿಸಿದೆ ಎಂದು ಟೀಕಿಸಿದೆ.

ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಮೋದಿ ಪಾಲಕ್ಕಾಡ್‌ನಲ್ಲಿ ರೋಡ್‌ಶೋ ನಡೆಸಿದ್ದಾರೆ. ಆದರೆ ಬಿಜೆಪಿಯ ಮಲಪ್ಪುರಂ ಅಭ್ಯರ್ಥಿ ಅಬ್ದುಲ್ ಸಲಾಂ ಅವರನ್ನು ಕಾರ್ಯಕ್ರಮಕ್ಕೆ ಭಾಗವಹಿಸಲು ಆಹ್ವಾನಿಸಲಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಸಿಪಿಐ(ಎಂ) ಮುಖಂಡ ಬಾಲನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿಯ ರೋಡ್‌ಶೋನಲ್ಲಿ ಅಬ್ದುಲ್ ಅವರನ್ನು ಉದ್ದೇಶಪೂರ್ವಕವಾಗಿ ಬದಿಗಿಟ್ಟಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಯಾಗಿದ್ದ ಸಲಾಂ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಮಲಪ್ಪುರಂನ ತಿರೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ಮಲಪ್ಪುರಂನಿಂದ ಲೋಕಸಭೆಗೆ ಬಿಜೆಪಿ ಟಿಕೆಟ್‌ ನೀಡಿದೆ. ಸಲಾಮ್ ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ಕ್ಷೇತ್ರಕ್ಕೂ ಪಾಲಕ್ಕಾಡ್ ಜಿಲ್ಲೆಗೂ ಯಾವುದೇ ಸಂಬಂಧವಿಲ್ಲ, ಪೊನ್ನಾನಿ ಲೋಕಸಭಾ ಕ್ಷೇತ್ರವು ಪಾಲಕ್ಕಾಡ್‌ನ ತ್ರಿತಾಲ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವ ಕಾರಣ ಪೊನ್ನನಿ ಅಭ್ಯರ್ಥಿ ನಿವೇದಿತಾ ಸುಬ್ರಮಣಿಯನ್ ರೋಡ್‌ಶೋನಲ್ಲಿ ಭಾಗವಹಿಸಿದ್ದರು. ಕೆಲವು ಅಭ್ಯರ್ಥಿಗಳು ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ನನಗೆ ತಿಳಿಯಿತು.  ನನ್ನನ್ನು ರೋಡ್‌ ಶೋಗೆ ಆಹ್ವಾನಿಸಿಲ್ಲ. ನಾನು ರೋಡ್‌ಶೋನಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿಲ್ಲ. ನಾನು ಮೋದಿಯನ್ನು ಭೇಟಿ ಮಾಡಲು ಅಲ್ಲಿಗೆ ಹೋಗಿದ್ದೆ ಮತ್ತು ಅವರನ್ನು ಮಲಪ್ಪುರಂಗೆ ಆಹ್ವಾನಿಸಿದ್ದೇನೆ ಎಂದು ಸಲಾಂ ಹೇಳಿದ್ದಾರೆ.

ಸುಬ್ರಮಣಿಯನ್ ಅವರು ಪ್ರಧಾನಿ ರೋಡ್‌ ಶೋ ನಡೆಸುವ ತೆರೆದ ವಾಹನವನ್ನು ಹತ್ತಲು ಆಹ್ವಾನಿಸಿದ್ದರು ಆದರೆ ಪ್ರಧಾನಿಯವರ ಭದ್ರತಾ ಸಿಬ್ಬಂದಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ ವಾಹನವು ಈಗಾಗಲೇ ತುಂಬಿತ್ತು. ಹಾಗಾಗಿ ಈ ವಿಷಯದ ಬಗ್ಗೆ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಖಂಡಿತವಾಗಿ, ನಾನು ಒಪ್ಪಿಕೊಳ್ಳುತ್ತೇನೆ, ನಾನು ಮೋದಿಯವರೊಂದಿಗೆ ವಾಹನದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಿದ್ದೆ, ಇದನ್ನು ಯಾರು ಬಯಸುವುದಿಲ್ಲ? ಆದರೆ ಇದರಲ್ಲಿ ತಾರತಮ್ಯವಿದೆ ಎಂದು ನಾನು ನಂಬುವುದಿಲ್ಲ ಎಂದು ಸಲಾಂ ಅವರು ಹೇಳಿದ್ದಾರೆ.

ಇದನ್ನು ಓದಿ: ಮುಸ್ಲಿಂ ಯುವಕರ ಮೇಲೆ ಪಾಕ್ ಪರ ಸಂಭ್ರಮಾಚರಣೆ ಆರೋಪ: ಜೈಲು, ದೌರ್ಜನ್ಯದ 6 ವರ್ಷಗಳ ಬಳಿಕ ಕೇಸ್‌ ‘ಕಟ್ಟುಕಥೆ’ ಎಂದು ತೀರ್ಪು ನೀಡಿದ ಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...